ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗ್ರಾಮೀಣ ಪ್ರದೇಶದಲ್ಲೇ ಅತಿಹೆಚ್ಚು ಎಟಿಎಂ ಬಳಕೆ!

|
Google Oneindia Kannada News

ನವದೆಹಲಿ, ನವೆಂಬರ್.30: ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಜನ್ ಧನ್ ಖಾತೆದಾರರು ಮತ್ತು ನೇರ ಫಲಾನುಭವಿಗಳ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸುಧಾರಣೆ ಕಂಡು ಬಂದಿದೆ. ದೇಶದಲ್ಲಿ ವೈಟ್ ಲೇಬಲ್ ಆಪರೇಟರ್ ಗಳ ಎಟಿಎಂಗಳ ಸಂಖ್ಯೆಯು ಹೆಚ್ಚಳವಾಗುತ್ತಿದೆ.

2014ರಲ್ಲಿ ಶೇ.02ರಷ್ಟಿದ್ದ ವೈಟ್ ಲೇಬಲ್ ಆಪರೇಟರ್ ಎಟಿಎಂಗಳ ವಹಿವಾಟಿನ ಪ್ರಮಾಣವು ಏಳು ವರ್ಷಗಳಲ್ಲಿ ಶೇ.12ರಷ್ಟಾಗಿದೆ. ಡೆಬಿಟ್ ಕಾರ್ಡ್ ಗಳ ಸಂಖ್ಯೆಯು ದ್ವಿಗುಣಗೊಂಡಿದ್ದು, 2020ರ ಸಪ್ಟೆಂಬರ್ ವೇಳೆಗೆ 86 ಕೋಟಿಗೂ ಅಧಿಕ ಜನರು ಡೆಬಿಟ್ ಕಾರ್ಡ್ ಹೊಂದಿದ್ದಾರೆ. ಈ ಪೈಕಿ ಶೇ.35ರಷ್ಟು ರುಪಿ ಕಾರ್ಡ್ ಗಳನ್ನು ಪ್ರಧಾನಮಂತ್ರಿ ಜನ್ ಧನ್ ಖಾತೆ ಹೊಂದಿರುವ 30 ಕೋಟಿ ಜನರಿಗೆ ನೀಡಲಾಗಿದೆ.

ಪ್ರಧಾನಿ ಮೋದಿಯಿಂದ ಭೂತಾನ್ ರುಪೇ ಕಾರ್ಡ್ ಹಂತ-2 ಬಿಡುಗಡೆ ಪ್ರಧಾನಿ ಮೋದಿಯಿಂದ ಭೂತಾನ್ ರುಪೇ ಕಾರ್ಡ್ ಹಂತ-2 ಬಿಡುಗಡೆ

ಸಾಂಕ್ರಾಮಿಕ ಪಿಡುಗಿನ ನಡುವೆ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಾಗಿರುವುದನ್ನು ನಾವು ಕಂಡುಕೊಂಡಿದ್ದೇನೆ. ಏಕೆಂದರೆ ಕೊವಿಡ್-19 ಸೋಂಕಿನಿಂದ ನಗರ ಪ್ರದೇಶಗಳಲ್ಲಿ ಆರ್ಥಿಕ ವಹಿವಾಟಿನ ಮೇಲೆ ಹೊಡೆತ ಬಿದ್ದಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಅಷ್ಟಾಗಿ ಹೊಡೆತ ಬಿದ್ದಿಲ್ಲ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಬಿಟಿಐ ಪೇಮೆಂಟ್ ಸಿಇಓ ಕೆ.ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ಇನ್ನು, ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸರ್ಕಾರವು ಬಿಪಿಎಲ್ ಕಾರ್ಮಿಕರಿಗೆ ನೀಡಿದ ನೆರವಿನಿಂದ 2019 ಸಪ್ಟೆಂಬರ್ ಶೇ.9.5ರಷ್ಟಿದ್ದ ಉದ್ಯಮವನ್ನು 2020ರ ಸಪ್ಟೆಂಬರ್ ವೇಳೆಗೆ ಶೇ.12ರಷ್ಟು ಏರಿಕೆಗೆ ಕಾರಣವಾಯಿತು ಎಂದಿದ್ದಾರೆ.

Jan Dhan Accounts, Cash Transfers Boost ATM Usage In Rural Areas

ಭಾರತದ ಎಟಿಎಂ ಉದ್ಯಮದಲ್ಲಿ ಅಭಿವೃದ್ಧಿ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಎಟಿಎಂ ಉದ್ಯಮದಲ್ಲಿ ಅಭಿವೃದ್ಧಿ ಕಂಡು ಬಂದಿದೆ. ದೇಶದಲ್ಲಿ ಶೇ.03ರಷ್ಟು ಎಟಿಎಂ ಸಂಖ್ಯೆ ಏರಿಕೆಯಾಗಿದ್ದು, 2.5 ಲಕ್ಷದ ಗಡಿ ದಾಟಿದೆ. 2020ರ ಸಪ್ಟೆಂಬರ್ ಅಂಕಿ-ಅಂಶಗಳ ಪ್ರಕಾರ 24195 ವೈಟ್ ಲೇಬಲ್ ಎಟಿಎಂಗಳ ಸಂಖ್ಯೆ ಹೆಚ್ಚಾಗಿದ್ದು, ಶೇ.14ರಷ್ಟು ಏರಿಕೆ ಕಂಡು ಬಂದಿದೆ. ವೈಟ್ ಲೇಬಲ್ ಎಟಿಎಂಗಳ ಪ್ರಮಾಣ ಗ್ರಾಮೀಣ ಪ್ರದೇಶಗಳಲ್ಲೇ ಅತಿಹೆಚ್ಚಾಗಿರುವುದು ತಿಳಿದು ಬಂದಿದೆ.

ಗ್ರಾಮೀಣ ಪ್ರದೇಶಗಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚು:

ಸಾಂಕ್ರಾಮಿಕ ಪಿಡುಗಿನಿಂದಾಗಿ ಕೇಂದ್ರ ಸರ್ಕಾರವು ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ಜಮೆ ಮಾಡಿದೆ. ಈ ಹಿನ್ನೆಲೆ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅತಿಹೆಚ್ಚು ಜನರು ಯೋನೋ ಅಪ್ಲಿಕೇಷನ್ ಅಥವಾ ಎಟಿಎಂಗಳನ್ನು ಬಳಕೆ ಮಾಡುತ್ತಾರೆ ಎಂದು ಕರ್ನಾಟಕ ವಿಭಾಗ ಅಭಿಜಿತ್ ಮಜುಂದಾರ್ ಹೇಳಿದ್ದಾರೆ.

English summary
Jan Dhan Accounts, Cash Transfers Boost ATM Usage In Rural Areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X