ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Timeline: ಬಿಜೆಪಿ -ಪಿಡಿಪಿ ಅಪವಿತ್ರ ಮೈತ್ರಿ, ಬ್ರೇಕ್ ಅಪ್

By Mahesh
|
Google Oneindia Kannada News

ಬೆಂಗಳೂರು, ಜೂನ್ 19: ಕಣಿವೆ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರ ಸ್ಥಾಪನೆ ಮಾಡಿ, ಅಧಿಕಾರ ನಡೆಸಿದ ಖುಷಿಯಲ್ಲಿದ್ದ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಮಂಗಳವಾರದಂದು ಭಾರಿ ಆಘಾತವಾಗಿದೆ. ಮಿತ್ರಪಕ್ಷ ಪಿಡಿಪಿ ತನ್ನ ಬೆಂಬಲ ಹಿಂತೆಗೆದುಕೊಂಡಿದೆ.

ಅಸಲಿಗೆ ಬಿಜೆಪಿ ಹಾಗೂ ಪಿಡಿಪಿ ನಡುವೆ ಮೈತ್ರಿಯಾಗಿದ್ದೇ ಒಂದು ಅಚ್ಚರಿ ವಿಷಯವಾಗಿತ್ತು. ಆದರೆ, ಮೋದಿ ಸರ್ಕಾರದ ಬೆಂಬಲ ಪಡೆದು ಮೆಹಬೂಬಾ ಮುಫ್ತಿ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದರು.

ಪಿಡಿಪಿ ಜೊತೆ ಮೈತ್ರಿ ಕಳೆದುಕೊಳ್ಳಲು ಬಿಜೆಪಿ ನಿರ್ಧರಿಸಿದ್ದರಿಂದ ಮುಫ್ತಿ ಸರಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

Jammu and Kashmir : BJP and the PDP Timeline of Alliance and Break up

87 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 28 ಸದಸ್ಯರನ್ನು ಹೊಂದಿರುವ ಪಿಡಿಪಿ ಮತ್ತು 25 ಸದಸ್ಯರನ್ನು ಹೊಂದಿರುವ ಬಿಜೆಪಿ ಮೈತ್ರಿ ಸರಕಾರ ನಡೆಸುತ್ತಿತ್ತು. 2014ರಿಂದ ಪಿಡಿಪಿ ಜೊತೆ ಅಧಿಕಾರ ಹಂಚಿಕೊಂಡಿದ್ದ ಬಿಜೆಪಿ ಇದೀಗ ಚುನಾವಣೆಗೆ ಒಂದೂವರೆ ವರ್ಷವಿರುವಾಗ ಬೆಂಬಲ ಹಿಂಪಡೆದಿದೆ. ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ, ಹಿಂಸಾಚಾರ ಹತ್ತಿಕ್ಕುವಲ್ಲಿ ಮುಫ್ತಿ ಅವರ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ- ಪಿಡಿಪಿ ಮೈತ್ರಿ ಸರ್ಕಾರದ ಮೈತ್ರಿ ಹಾಗೂ ಬಿರುಕು
* 23 ಡಿಸೆಂಬರ್ 2014: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ
ಕಳೆದ 25 ವರ್ಷಗಳಲ್ಲೇ ಕಾಣದಂಥ ಮತದಾನವನ್ನು ಕಣಿವೆ ರಾಜ್ಯ ಕಂಡಿತ್ತು. ಪಿಡಿಪಿ ಅತಿಹೆಚ್ಚು ಶೇಕಡಾವಾರು ಮತ(22%)ಗಳನ್ನು ಗಳಿಸಿತ್ತು. ನಂತರ ಬಿಜೆಪಿ(23%) ಬಂದಿತ್ತು. ಸಾಮಾನ್ಯ ಕನಿಷ್ಟ ಕಾರ್ಯಕ್ರಮದಡಿಯಲ್ಲಿ ಅಧಿಕೃತವಾಗಿ ಮೈತ್ರಿ ಮಾತುಕತೆ ಆರಂಭವಾಯಿತು.

* 24 ಫೆಬ್ರವರಿ 2015 : ಸರ್ಕಾರ ರಚನೆ ಬಗ್ಗೆ ಮೂರು ತಿಂಗಳು ಚರ್ಚೆ ನಡೆಯಿತು. ಅಸಮಾಧಾನದ ಹೊಗೆ ಕಾಣಿಸಿಕೊಂಡಿತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಅವರು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸರ್ಕಾರ ರಚನೆಯ ಮಾತನಾಡಿದರು.

ಮಾರ್ಚ್ 01, 2015 : ಸರ್ಕಾರ ರಚನೆ
ಏಪ್ರಿಲ್ 2016: ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿ ಅವರಿಂದ ಪ್ರಮಾಣವಚನ ಸ್ವೀಕಾರ.
ಜೂನ್ 08, 2016 : ಪ್ರತ್ಯೇಕತಾವಾದಿಗಳ ಬಗ್ಗೆ ಮೃದುಧೋರಣೆ ತೋರುವುದರ ಬಗ್ಗೆ ಪಿಡಿಪಿಗೆ ಎಚ್ಚರಿಕೆ ನೀಡಿದ ಪಿಡಿಪಿ
ಸೆಪ್ಟೆಂಬರ್ 2016 : ಪಿಡಿಪಿ ಸ್ಥಾಪಕ ಸದಸ್ಯರು ಪಕ್ಷ ತೊರೆದರು.
ಮೇ 2017: ಹುರಿಯತ್ ನಾಯಕರ ಜತೆ ಮಾತುಕತೆಗೆ ಮುಂದಾದ ಮುಫ್ತಿ, ವಿರೋಧಿಸಿದ ಅಮಿತ್ ಶಾ, ರಾಮ್ ಮಾಧವ್.
ಜನವರಿ 2018: ಕತುವಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ
ಫೆಬ್ರವರಿ 2018: ಸರ್ಕಾರದ ವಿರುದ್ಧವೆ ಬಿಜೆಪಿಯಿಂದ ಪ್ರತಿಭಟನೆ
ಮಾರ್ಚ್ 2018: ಬಿಜೆಪಿ ಹಾಗೂ ಪಿಡಿಪಿ ನಡುವಿನ ಕೊಂಡಿಯಾಗಿದ್ದ ಡ್ರಾಬು ಅಮಾನತು.
ಏಪ್ರಿಲ್ 2018: ಮೈತ್ರಿಯಲ್ಲಿ ಬಿರುಕು,
17 ಜೂನ್ 2018 : ರಮ್ಜಾನ್ ವೇಳೆ ಕದನ ವಿರಾಮ ಉಲ್ಲಂಘನೆ
19 ಜೂನ್ 2018 : ಪಿಡಿಪಿ ಜತೆಗಿನ ಮೈತ್ರಿ ಮುರಿದುಕೊಂಡ ಬಿಜೆಪಿ.

English summary
The BJP Tuesday pulled out of its three-year-old alliance with the Peoples Democratic Party (PDP) in Jammu and Kashmir. Here is timeline of alliance and break up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X