ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ: ಅಪಹೃತ ಪೊಲೀಸ್ ಕುಟುಂಬಸ್ಥರನ್ನು ಬಿಡುಗಡೆ ಮಾಡಿದ ಉಗ್ರರು

|
Google Oneindia Kannada News

ಶೋಪಿಯಾನ್, ಸೆಪ್ಟೆಂಬರ್ 01: ದಕ್ಷಿಣ ಕಾಶ್ಮೀರದಲ್ಲಿ ಐವರು ಪೊಲೀಸ್ ಕುಟುಂಬಸ್ಥರನ್ನು ಉಗ್ರರು ಬಂಧಿಸಿದ ಪ್ರಕರಣ ಸುಖಾಂತ್ಯ ಕಂಡಿದೆ.

NIA(ರಾಷ್ಟ್ರೀಯ ತನಿಖಾದಳ) ಅಧಿಕಾರಿಗಳು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ಸಯ್ಯದ್ ಸಲಾಲುದ್ದಿ ನ ಮಗ ಶಕೀಲ್ ನನ್ನು ಬಂಧಿಸಿದ್ದದರು. ಇದಕ್ಕೆ ಪ್ರತೀಕಾರ ಎಂಬಂತೆ ಭಯೋತ್ಪಾದಕರು ಐವರು ಪೊಲೀಸ್ ಕುಟುಂಬಸ್ಥರನ್ನು ಅಪಹರಿಸಿದ್ದರು.

ಕಾಶ್ಮೀರದಲ್ಲಿ ಉಗ್ರರಿಂದ ಐವರು ಪೊಲೀಸ್ ಕುಟುಂಬಸ್ಥರ ಅಪಹರಣಕಾಶ್ಮೀರದಲ್ಲಿ ಉಗ್ರರಿಂದ ಐವರು ಪೊಲೀಸ್ ಕುಟುಂಬಸ್ಥರ ಅಪಹರಣ

Jammu-Kashmir: Abducted kin of policemen released

ಶುಕ್ರವಾರ ರಾತ್ರಿ ಐವರನ್ನೂ ಬಿಡುಗಡೆ ಮಾಡಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಶೋಪಿಯಾನ್, ಕುಲ್ಗಾಂ, ಅನಂತನಾಗ್, ಅವಂತಿಪೊರ ಎಂಬಲ್ಲಿಂದ ಪೊಲೀಸ್ ಕುಟುಂಬಸ್ಥರನ್ನೇ ಆಯ್ದು ಅಪಹರಿಸಲಾಗಿತ್ತು.

ಶೋಪಿಯಾನ್ ನಲ್ಲಿ ಉಗ್ರಗಾಮಿಗಳ ದಾಳಿ, ಹುತಾತ್ಮರಾದ ನಾಲ್ವರು ಪೊಲೀಸರುಶೋಪಿಯಾನ್ ನಲ್ಲಿ ಉಗ್ರಗಾಮಿಗಳ ದಾಳಿ, ಹುತಾತ್ಮರಾದ ನಾಲ್ವರು ಪೊಲೀಸರು

ಆಗಸ್ಟ್ 29 ರಂದು ಶೋಪಿಯಾನ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯನ್ನು ಹತ್ತಿಕ್ಕಲು ಭಾರತ ಗಂಭೀರ ಕ್ರಮಗಳನ್ನು ಕೈಗೊಂಡಿದ್ದು, ಈ ವರ್ಷ ಸಾಕಷ್ಟು ಭಯೋತ್ಪಾದಕರನ್ನು ಸದೆಬಡಯಲಾಗಿದೆ.

ಇದರಿಂದ ಉಗ್ರ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿರುವುದರಿದ ಇದೀಗ ಉಗ್ರರ ಕಣ್ಣು ಕಾಶ್ಮೀರಿ ಪೊಲೀಸರ ಮೇಲೆ ಬಿದ್ದಿದೆ. ಆ.29ರಂದು ನಾಲ್ವರು ಪೊಲೀಸರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ಕೃತ್ಯದ ಹೊಣೆಯನ್ನು ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

English summary
More than 24 hours after they were kidnapped by terrorists in Jammu and Kashmir, the nine relatives of the state policemen were released late on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X