ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತುವಾ ಅತ್ಯಾಚಾರ 'ಚಿಕ್ಕ ಘಟನೆ': ಮೊದಲ ದಿನವೇ ಹೊಸ ಡಿಸಿಎಂ ವಿವಾದ

|
Google Oneindia Kannada News

ಜಮ್ಮು, ಮೇ 1: ಕತುವಾ ಅತ್ಯಾಚಾರ ಪ್ರಕರಣ ಸಣ್ಣ ಘಟನೆ ಎಂದು ಹೇಳುವ ಮೂಲಕ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ನೂತನ ಉಪಮುಖ್ಯಮಂತ್ರಿ ಕಾವಿಂದರ್ ಗುಪ್ತಾ ವಿವಾದ ಸೃಷ್ಟಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

'ಜಮ್ಮು-ಕಾಶ್ಮೀರ: ಸಂಪುಟ ಪುನಾರಚನೆಗೂ-ಕತುವಾ ಪ್ರಕರಣಕ್ಕೂ ಸಂಬಂಧವಿಲ್ಲ'ಜಮ್ಮು-ಕಾಶ್ಮೀರ: ಸಂಪುಟ ಪುನಾರಚನೆಗೂ-ಕತುವಾ ಪ್ರಕರಣಕ್ಕೂ ಸಂಬಂಧವಿಲ್ಲ

ರಾಷ್ಟ್ರವ್ಯಾಪಿ ತೀವ್ರ ವಿರೋಧ ವ್ಯಕ್ತವಾದ ಕತುವಾ ಪ್ರಕರಣ ಕ್ಷುಲ್ಲಕವಾದದ್ದು, ಅದಕ್ಕೆ ಹೆಚ್ಚಿನ ಪ್ರಚಾರ ನೀಡಲಾಯಿತು ಎಂದು ಅವರು ವ್ಯಾಖ್ಯಾನಿಸಿದ್ದಾರೆ.

Jammu and kashmir new dycm says kathua case was a small thing

ಇದು (ಕತುವಾ ಅತ್ಯಾಚಾರ ಮತ್ತು ಹತ್ಯೆ) ಒಂದು ಸಣ್ಣ ವಿಷಯ. ಇಂತಹ ಘಟನೆಗಳು ಮರುಕಳಿಸಬಾರದು ಎಂಬುದರ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ ಸ್ಥಾನಕ್ಕೆ ನಿರ್ಮಲ್ ಸಿಂಗ್ ರಾಜೀನಾಮೆಜಮ್ಮು-ಕಾಶ್ಮೀರ ಉಪಮುಖ್ಯಮಂತ್ರಿ ಸ್ಥಾನಕ್ಕೆ ನಿರ್ಮಲ್ ಸಿಂಗ್ ರಾಜೀನಾಮೆ

ಕತುವಾ ಘಟನೆ ಬಳಿಕ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ಒತ್ತಡಕ್ಕೆ ಒಳಗಾಗಿದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಸರ್ಕಾರ ಅಂತಹ ಸವಾಲುಗಳನ್ನು ಎದುರಿಸುತ್ತಿರುತ್ತದೆ. ಅದಕ್ಕೆ ಇಷ್ಟೆಲ್ಲಾ ಪ್ರಚಾರ ನೀಡಬೇಕಿರಲಿಲ್ಲ. ನಾವು ಆ ಬಾಲಕಿಗೆ ನ್ಯಾಯ ದೊರಕಿಸಿಡಬೇಕು. ಇದು ಸರ್ಕಾರದ ಮುಂದಿರುವ ಕೆಲವು ದೊಡ್ಡ ಸವಾಲುಗಳಲ್ಲಿ ಒಂದು. ಈ ಪ್ರಕರಣಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ಈ ಘಟನೆಗೆ ಉದ್ದೇಶಪೂರ್ವಕವಾಗಿ ಪ್ರಚಾರ ನೀಡಲಾಗಿದೆ ಎಂದು ಹೇಳಿದರು.

English summary
Jammu and Kashmir news Deputy Chief Minister Kavinder Gupta triggered a controversy by terming kathua rape and murder case as a small thing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X