• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್‌ಶಾ ಅಲ್ಲಾಹ್ ! ಜಲ್ಲಿಕಟ್ಟು ಹಿಂಸಾಚಾರದ ಹಿಂದಿನ ಅಸಲಿಯತ್ತು

|

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಹೋರಾಟದ ಮೂಲಕ ಏನಾದರೂ ಸಾಧಿಸಬಹುದು ಎನ್ನುವುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ತಮಿಳುನಾಡಿನ ಯುವ ಸಮುದಾಯದ ಜಲ್ಲಿಕಟ್ಟು ಹೋರಾಟ ಸೋಮವಾರ (ಜ 23) ವ್ಯವಸ್ಥಿತ ರೀತಿಯಲ್ಲಿ ಹಿಂಸಾಚಾರಕ್ಕೆ ತಿರುಗಿತು.

ಜಲ್ಲಿಕಟ್ಟು ಹೋರಾಟ ದಾರಿ ತಪ್ಪುತ್ತಿದೆ ಎನ್ನುವುದನ್ನು ಅರಿತೋ ಏನೋ, ಈ ಹೋರಾಟದ ರೂವಾರಿಯಾಗಿದ್ದ ತಮಿಳು ಸಂಗೀತ ನಿರ್ದೇಶಕ ಆದಿ, ಕಾರ್ತಿಕೇಯ ಶಿವಸೇನಾಪತಿ ಮತ್ತು ಆಯಿಯಾ, ಒಂದು ದಿನದ ಹಿಂದೆಯೇ ಈ ಹೋರಾಟದಿಂದ ಹಿಂದಕ್ಕೆ ಸರಿದಿದ್ದರು. (ಉಗ್ರರೂಪ ಪಡೆದುಕೊಂಡ ಜಲ್ಲಿಕಟ್ಟು ಪ್ರತಿಭಟನೆ)

#SaveJallikattu ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಸಾಮಾಜಿಕ ತಾಣದಲ್ಲಿ ಹೋರಾಟಕ್ಕೆ ಬನ್ನಿ ಎಂದು ಸಂಗೀತ ನಿರ್ದೇಶಕ ಆದಿ ನೀಡಿದ್ದ ಕರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ಅದರಲ್ಲೂ ಪ್ರಮುಖವಾಗಿ ಯುವ ಮತ್ತು ವಿದ್ಯಾರ್ಥಿ ಸಮುದಾಯ.

ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದು ದೇಶ ವಿರೋಧಿ ಸಂಘಟನೆಗಳು ಚಳುವಳಿಗೆ ಸಾಥ್ ನೀಡಿದರು. ಅಲ್ಲಿಗೆ, ಜಲ್ಲಿಕಟ್ಟು ನಡೆಯಬೇಕು ಎನ್ನುವ ಸದುದ್ದೇಶದಿಂದ ಆರಂಭವಾದ ಹೋರಾಟ ದಾರಿತಪ್ಪಿತು.

ರಾಷ್ಟ್ರಧ್ವಜಕ್ಕೆ ಅಗೌರವ, ತಮಿಳುನಾಡು ಪ್ರತ್ಯೇಕ ರಾಷ್ಟ್ರವಾಗಬೇಕು, ದೇಶ ವಿರೋಧಿ, ಪ್ರಧಾನಿ ಮೋದಿಯನ್ನು ಅತ್ಯಂತ ಕೆಟ್ಟ ಪದಗಳ ಮೂಲಕ ಸಂಭೋದಿಸುವ ಮೂಲಕ, ಜೊತೆಗೆ ಮುಸ್ಲಿಂ ಉಗ್ರರ ಪರವಾಗಿ ಘೋಷಣೆ ಕೂಗಲಾಗುತ್ತಿತ್ತು ಎನ್ನುವುದು ಚೆನ್ನೈ ಪೋಲಿಸರ ಆರೋಪ. ಇನ್‌ಶಾ ಅಲ್ಲಾಹ್ ! .. ಮೋದಿ ಮುರ್ದಾಬಾದ್.. ಮುಂದೆ ಓದಿ..

 ದೇಶ ವಿರೋಧಿ ಘೋಷಣೆ

ದೇಶ ವಿರೋಧಿ ಘೋಷಣೆ

ಇನ್‌ಶಾ ಅಲ್ಲಾಹ್..ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ಥಾನ್ ಮುರ್ದಾಬಾದ್, ಒಸಾಮ ಬಿನ್ ಲಾಡೆನ್ ಜಿಂದಾಬಾದ್, ಮೋದಿ ಡೌನ್ ಡೌನ್, ತಮಿಳುನಾಡು ಭಾರತದಿಂದ ಪ್ರತ್ಯೇಕವಾಗಬೇಕು ಎನ್ನುವ ಭಿತ್ತಿಪತ್ರಗಳು ಚಳುವಳಿಯಲ್ಲಿ ಪ್ರದರ್ಶನಗೊಂಡವು ಎನ್ನುವುದು ಪೊಲೀಸರ ಆರೋಪ.

ಮೋದಿ ಟ್ವೀಟ್

ಅಸಲಿಗೆ ಜಲ್ಲಿಕಟ್ಟು ಹೋರಾಟ ಆರಂಭವಾದ ನಂತರ ತಮಿಳುನಾಡಿನ ಜನತೆಯ ಪರವಾಗಿ ನಿಂತವರು ಪ್ರಧಾನಿ ಮೋದಿ. ಈ ಸಾಂಪ್ರದಾಯಿಕ ಕ್ರೀಡೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯಿಸುತ್ತಾ, ಜಲ್ಲಿಕಟ್ಟು ನಡೆಯಲು ಇರುವ ಎಲ್ಲಾ ಕಾನೂನು ತೊಡಕುಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದು ಮೋದಿ ಟ್ವೀಟ್ ಮೂಲಕ ಭರವಸೆ ನೀಡಿದ್ದರು. ಅಲ್ಲಿಗೆ ಜಲ್ಲಿಕಟ್ಟು ಹೋರಾಟಕ್ಕೆ ಮೊದಲ ಹಂತದ ಜಯಸಿಕ್ಕಿತ್ತು.

ಮೋದಿಗೆ ಧಿಕ್ಕಾರ

ಮೋದಿಗೆ ಧಿಕ್ಕಾರ

ಆದರೂ ಮೋದಿ ವಿರುದ್ದ ಧಿಕ್ಕಾರ ಮೊಳಗಿದ್ದು, ಒಳ್ಳೆಯ ಉದ್ದೇಶದಿಂದ ಹೋರಾಟ ಮಾಡುತ್ತಿದ್ದ ಯುವ ಸಮುದಾಯದಿಂದಲ್ಲ. ಬದಲಿಗೆ, ಹೋರಾಟ ದಿಕ್ಕು ತಪ್ಪಿಸಲೆಂದೇ ಬಂದಿದ್ದ ದೇಶದ್ರೋಹಿಗಳು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದೇ ಇಂತಹ ದುರಳರು ಎನ್ನುವುದು ಚೆನ್ನೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅಭಿಪ್ರಾಯ.

ಪೊಲೀಸರ ಪ್ರಶ್ನೆ

ಪೊಲೀಸರ ಪ್ರಶ್ನೆ

ಜಲ್ಲಿಕಟ್ಟು ಸಂಬಂಧ ಸುಗ್ರೀವಾಜ್ಞೆ ಸರಕಾರ ಹೊರಡಿಸಿದ್ದರೂ, ಯಾಕಾಗಿ ಪ್ರತಿಭಟನೆ ನಡೆಸುತ್ತಿದ್ದೀರಾ ಎನ್ನುವುದಕ್ಕೆ ಹೋರಾಟಗಾರರಲ್ಲಿ ಉತ್ತರವಿರಲಿಲ್ಲ. ಹೋರಾಟ ಬೇರೆ ರೂಪ ತಾಳುವ ಸಾಧ್ಯತೆಯಿದೆ ಎನ್ನುವ ಗುಪ್ತಚರ ಇಲಾಖೆಯ ಎಚ್ಚರಿಕೆಯ ನಂತರ ನಾವು ಚಳುವಳಿ ನಿಲ್ಲಿಸಲು ಇಳಿಯಬೇಕಾಯಿತು ಎನ್ನುವುದು ಪೊಲೀಸರು ನೀಡುತ್ತಿರುವ ಸ್ಪಷ್ಟನೆ.

RFI, ಸಿಪಿಐ (ಎಂಎಲ್)

RFI, ಸಿಪಿಐ (ಎಂಎಲ್)

ಪ್ರತಿಭಟನೆಯಲ್ಲಿ ಎಡಪಂಥೀಯ ಉಗ್ರರು ಪಾಲ್ಗೊಂಡಿದ್ದಾರೆ. RFI (Revolutionery front of India) ಮತ್ತು ಸಿಪಿಐ (ಎಂಎಲ್) ಮುಂತಾದ ಉಗ್ರವಾದಿ ಎಡಪಂಥೀಯ ಸಂಘಟನೆಯ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ಎನ್ನುವ ಹೆಸರಿನಲ್ಲಿ ಅಶಾಂತಿ ಹುಟ್ಟುಹಾಕಿದರು ಎನ್ನುವುದು ಚೆನ್ನೈ ಪೊಲೀಸರ ಹೇಳಿಕೆ.

ತಮಿಳು ಸಂಗೀತ ನಿರ್ದೇಶಕ ಆದಿ

ತಮಿಳು ಸಂಗೀತ ನಿರ್ದೇಶಕ ಆದಿ

ಜಲ್ಲಿಕಟ್ಟು ಬೆಂಬಲಕ್ಕಾಗಿ ಆರಂಭವಾದ ಚಳುವಳಿ ದಿಕ್ಕು ತಪ್ಪುತ್ತಿದೆ. ರಾಷ್ಟ್ರಧ್ವಜಕ್ಕೆ ಅಗೌರವ, ತಮಿಳುನಾಡು ಪ್ರತ್ಯೇಕ ದೇಶವಾಗಬೇಕು ಎನ್ನುವ ಘೋಷಣೆ, ಜೊತೆಗೆ ಮತೀಯ ದ್ವೇಷ ಹುಟ್ಟುಹಾಕುವ ಘಟನೆ ಚಳುವಳಿಯ ವೇಳೆ ನಡೆಯುತ್ತಿದೆ. ಇದರಿಂದ ಬೇಸರಗೊಂಡು ಚಳುವಳಿಯಿಂದ ಹಿಂದಕ್ಕೆ ಸರಿಯುತ್ತಿದ್ದೇನೆ - ತಮಿಳು ಸಂಗೀತ ನಿರ್ದೇಶಕ ಆದಿ.

ಸಿಪಿಎಂ

ಸಿಪಿಎಂ

ಮೋದಿ ವಿರುದ್ದ ಎಲ್ಲಾ ಬಗೆಯ ಕೆಟ್ಟ ಭಾಷೆಯನ್ನು ಬಳಸಲಾಯಿತು, ಮೋದಿ ಪ್ರತಿಕೃತಿ ದಹಿಸುವ ಕೆಲಸಕ್ಕೆ ಹೋರಾಟಗಾರರು ಮುಂದಾದರು. ಮೋದಿ ಸರಕಾರದ ವಿರುದ್ದ ನಮಗೆ ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಹೋರಾಟಗಾರರ ನಡುವಳಿಕೆಯನ್ನು ನಾವು ಬೆಂಬಲಿಸುವುದಿಲ್ಲ - ದಕ್ಷಿಣ ಚೆನ್ನೈ ಸಿಪಿಎಂ ಕಾರ್ಯದರ್ಶಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jalikattu protest turn ugly: As per Chennai police, anti national elements involvement in the protest. Adhi who has started this protest said, presence of "anti-national" elements and section of the protestors abusive langugage against PM Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more