ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಶಾಕ್ : ಹೋಟೆಲ್ ಊಟ ಇನ್ಮುಂದೆ ದುಬಾರಿ?

By Mahesh
|
Google Oneindia Kannada News

ನವದೆಹಲಿ, ಫೆ.24: ಎಫ್ ಡಿಐ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳಲ್ಲಿ ಬದಲಾವಣೆ ತಂದು ಬಂಡವಾಳ ಆಕರ್ಷಿಸುವಲ್ಲಿ ಮೋದಿ ಸರ್ಕಾರ ಸಫಲವಾಗಿದೆ. ಈಗ ಬಜೆಟ್ ನಲ್ಲಿ ಮಧ್ಯಮ ವರ್ಗದ ಜನತೆಯ ಕೊಡುಗೆಗಳ ಮಹಾಪೂರದ ಹರಿಸಲು ಸಜ್ಜಾಗುತ್ತಿರುವ ಸುದ್ದಿ ಸಿಕ್ಕಿದೆ. ಇದರ ಜೊತೆಗೆ ಸೇವಾ ತೆರಿಗೆ ಹೆಚ್ಚಳವಾಗಲಿದ್ದು, ಹೋಟೆಲ್ ಊಟ ದುಬಾರಿಯಾಗಲಿದೆ.

ಫೆ.28ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನಿರೀಕ್ಷೆಯಂತೆ ಮಧ್ಯಮ ವರ್ಗದ ಜನತೆಗೆ ಹಲವಾರು ತೆರಿಗೆ ವಿನಾಯತಿ ಘೋಷಿಸುವ ಸಾಧ್ಯತೆಯಿದೆ. ಆದಾಯ ತೆರಿಗೆ ಮಿತಿ ಹೆಚ್ಚಳ ಪ್ರತಿ ವರ್ಷದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬಹುಚರ್ಚಿತ ವಿಷಯ. ಹೀಗಾಗಿ ತೆರಿಗೆ ಮಿತಿ ಬದಲಾವಣೆಯನ್ನು ನಿರೀಕ್ಷಿಸಬಹುದು.

ಆದಾಯದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಸೇವಾ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಜೇಟ್ಲಿ ಅವರು ಸಮರ್ಥನೆ ನೀಡುವ ಸಾಧ್ಯತೆಯಿದೆ. ಕೆಪಿಎಂಜಿ ಮೂಲಗಳ ಪ್ರಕಾರ ಸೇವಾ ತೆರಿಗೆ ಶೇ 14ರಷ್ಟು ಹೆಚ್ಚಳ ಕಾಣಲಿದೆ. ಹೀಗಾಗಿ ಹೋಟೆಲ್ ಊಟ ಇನ್ಮುಂದೆ ದುಬಾರಿಯಾಗಲಿದೆ.

Budget 2015: Tax breaks for middle class, but hike in service tax may pinch consumers

ಇದರ ಜೊತೆಗೆ ಕ್ಲಬ್, ವಿವಿಧ ಸಂಸ್ಥೆಗಳ ಸದಸ್ಯತ್ವ ವಕೀಲರ ಫೀಸ್ ನಿಮ್ಮ ಕೈ ಕಚ್ಚಲಿದೆ. ಏ.1, 2016ರಿಂದ ಅನ್ವಯವಾಗುವಂತೆ ಹೊಸ ಸರಕು ಹಾಗೂ ಸೇವಾ ತೆರಿಗೆ(ಜಿಎಸ್ ಟಿ) ಅನುಷ್ಠಾನಗೊಳಿಸಲು ಮೋದಿ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ.

ಹಾಲಿ ಸೇವಾ ತೆರಿಗೆ ದರ ಶೇ 12ರಷ್ಟಿದೆ. ಜಿಎಸ್ ಟಿ ಅನುಷ್ಠಾನಗೊಂಡರೆ ಶೇ 16-17ರ ತನಕ ಸೇವಾ ತೆರಿಗೆ ಏರಿಕೆಯಾದರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಸೇವಾ ತೆರಿಗೆ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಬಹುದು ಎಂದು ಕೆಪಿಎಂಜಿ ಸಂಸ್ಥೆಯ ಪ್ರತೀಕ್ ಜೈನ್ ಹೇಳಿದ್ದಾರೆ.

English summary
This year's budget session would be concentrating mainly on the middle class, as per the Lok Sabha election agenda of the NDA. Likewise, it is said that Finance Minister Arun Jaitley is likely to provide tax breaks for the middle class in the upcoming Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X