ಪಾಕ್ ದುಸ್ಸಾಹಸಕ್ಕೆ ತಿರುಗೇಟು ನೀಡಲು ಸಿದ್ಧವಾಗಿರಿ: ಅರುಣ್ ಜೇಟ್ಲಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಶ್ರೀನಗರ್, ಮೇ 18: ಗಡಿಯಲ್ಲಿ ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಿದರೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿರಿ ಎಂದು ಬುಧವಾರ ಸಚಿವ ಅರುಣ್ ಜೇಟ್ಲಿ ಭಾರತೀಯ ಸೇನೆಗೆ ಹೇಳಿದ್ದಾರೆ. ಪಾಕಿಸ್ತಾನ ಸೇನೆಯು ಇಬ್ಬರು ಭಾರತೀಯ ಭದ್ರತಾ ಪಡೆಯವರ ತಲೆ ಕಡಿದ ಎರಡು ದಿನದ ನಂತರಈ ಹೇಳಿಕೆ ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪರಿಸ್ಥಿತಿಯ ಅವಲೋಕನ ನಡೆಸಿದ ನಂತರ ನಡೆಸಿದ ಶ್ರೀನಗರ್ ನಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ್ದಾರೆ. ಭಯೋತ್ಪಾದಕರ ವಿಚಾರದಲ್ಲಿ ಯಾವುದೇ ಮುಲಾಜು ನೋಡಬೇಡಿ. ಆದರೆ ಅಮಾಯಕ ಜನರ ಸುರಕ್ಷತೆಗೆ ಯಾವುದೇ ತೊಂದರೆ ಆಗಬಾರದು ಎಂದು ಅವರು ಹೇಳಿದ್ದಾರೆ.

Arun Jaitely

ಈ ಸಭೆಯಲ್ಲಿ ಹೊಸದಾಘಿ ನೇಮಕವಾಗಿರುವ ರಕ್ಷಣಾ ಕಾರ್ಯದರ್ಶಿ ಅಮಿತ್ ಮಿತ್ರಾ, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೂಡ ಇದ್ದರು. ಭಯೋತ್ಪಾದಕರ ದಾಳಿ, ಕಾಶ್ಮೀರದಲ್ಲಿ ಕಲ್ಲೆಸೆತ ಹಾಗೂ ಪಾಕಿಸ್ತಾನದಿಂದ ಪದೇಪದೇ ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಸಭೆ ನಿಗದಿಯಾಗಿತ್ತು. ಉಗ್ರರು ಭಾರತದೊಳಕ್ಕೆ ನುಸುಳದಂತೆ ಸೇನೆ ಕೈಗೊಂಡ ಕ್ರಮಗಳ ಬಗ್ಗೆ ಸಚಿವ ಅರುಣ್ ಜೇಟ್ಲಿ ಮೆಚ್ಚುಗೆ ಸೂಚಿಸಿದ್ದಾರೆ.
ಪಿಟಿಐ ಸುದ್ದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defence Minister Arun Jaitley on Wednesday asked the Army to remain prepared to give a befitting reply to any misadventure from across the border, days after two security personnel were beheaded by the Pakistani Army.
Please Wait while comments are loading...