ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾಗಿಂತಲೂ ಭೀಕರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಸ್ಪೋಟಕ ವರದಿ

|
Google Oneindia Kannada News

Recommended Video

Pulwama : ಗುಪ್ತಚರ ಇಲಾಖೆ ಕೊಟ್ಟ ಆ ಸ್ಪೋಟಕ ವರದಿಯಲ್ಲೇನಿದೆ ಗೊತ್ತಾ? | Oneindia Kannada

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಇ-ಮೊಹಮ್ಮದ್ ಪುಲ್ವಾಮಾಗಿಂತಲೂ ಭೀಕರ ದಾಳಿ ನಡೆಸಲು ತಯಾರಿ ನಡೆಸುತ್ತಿದೆ ಎನ್ನುವ ಸ್ಫೋಟಕ ಮಾಹಿತಿಯನ್ನು ಗುಪ್ತಚರ ಇಲಾಖೆ ಕೇಂದ್ರ ಸರಕಾರಕ್ಕೆ ನೀಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಯೋತ್ಪಾದಕರು ಮತ್ತೊಮ್ಮೆ ಆತ್ಮಹತ್ಯಾ ದಾಳಿ ನಡೆಸುವ ಸಾಧ್ಯತೆಯಿದ್ದು, ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಈ ದಾಳಿ ಸಂಭವಿಸಬಹುದು. ಇದಕ್ಕಾಗಿಯೇ ಇಪ್ಪತ್ತಕ್ಕೂ ಹೆಚ್ಚು ಉಗ್ರರು ಕಣಿವೆ ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಗುಪ್ತಚರ ವರದಿಯನ್ನು ಆಧರಿಸಿ, ದೈನಿಕ್ ಜಾಗರಣ್ ಪತ್ರಿಕೆ ವರದಿ ಮಾಡಿದೆ.

ಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿಇನ್ನೂ ಭೀಕರ ದಾಳಿಗೆ ಜೈಶ್ ಉಗ್ರರ ಸಿದ್ಧತೆ: ಗುಪ್ತಚರ ಆಘಾತಕಾರಿ ವರದಿ

ಪಾಕಿಸ್ತಾನದಲ್ಲಿನ ಉಗ್ರಗಾಮಿಗಳು ಮತ್ತು ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಭಯೋತ್ಪಾದಕರ ನಡುವೆ ನಡೆದ ಮಾತುಕತೆಯನ್ನು ಆಧರಿಸಿ ಗುಪ್ತಚರ ಸಂಸ್ಥೆ ವರದಿಯನ್ನು ನೀಡಿದೆ. ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಉತ್ತರ ಕಾಶ್ಮೀರದಲ್ಲಿರುವ ಜೈಶ್ ಉಗ್ರ ಸಂಘಟನೆಯ ಜೊತೆ ಗುರುತಿಸಿಕೊಂಡಿರುವವರಿಂದ ಐಇಡಿ (improvised explosive device) ದಾಳಿ ನಡೆಸಲು ಸಂಚು ರೂಪಿಸಿದೆ.

ಸೇಡು ತೀರಿಸಿಕೊಳ್ಳೋಣ: ಹತ್ತರ ಬಾಲಕಿ ಪ್ರಧಾನಿ ಮೋದಿಗೆ ಬರೆದ ಪತ್ರ ವೈರಲ್!ಸೇಡು ತೀರಿಸಿಕೊಳ್ಳೋಣ: ಹತ್ತರ ಬಾಲಕಿ ಪ್ರಧಾನಿ ಮೋದಿಗೆ ಬರೆದ ಪತ್ರ ವೈರಲ್!

ಮತ್ತೊಮ್ಮೆ ಭಾರತದಲ್ಲಿ ದೊಡ್ಡ ಮಟ್ಟದ ಆತ್ಮಹತ್ಯಾ ದಾಳಿ ನಡೆಸಲು ಭಯೋತ್ಪಾದಕರು ಸಜ್ಜಾಗಿದ್ದು, ಐದು ನೂರು ಕೆಜಿಗಿಂತಲೂ ಅಧಿಕ RDX ಬಳಸುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ಜಮ್ಮು ಕಾಶ್ಮೀರ ಅಥವಾ ದೇಶದ ಇತರಡೆ ದಾಳಿ ನಡೆಸುವ ಸಾಧ್ಯತೆ

ಜಮ್ಮು ಕಾಶ್ಮೀರ ಅಥವಾ ದೇಶದ ಇತರಡೆ ದಾಳಿ ನಡೆಸುವ ಸಾಧ್ಯತೆ

ಪಾಕ್ ಮತ್ತು ಕಾಶ್ಮೀರದಲ್ಲಿನ ಉಗ್ರರು ಫೆಬ್ರವರಿ 16-17ರ ನಡುವೆ ಸಂಭಾಷಣೆ ನಡೆಸಿದ್ದು, ಜಮ್ಮು ಕಾಶ್ಮೀರ ಅಥವಾ ದೇಶದ ಇತರಡೆ ದಾಳಿ ನಡೆಸುವ ಸಾಧ್ಯತೆಯಿದೆ. ಈ ಕೆಲಸಕ್ಕಾಗಿಯೇ ಹಸಿರು ಬಣ್ಣದ ಸ್ಕಾರ್ಪಿಯೋ ಕಾರನ್ನು ರೆಡಿಮಾಡಲಾಗಿದೆ. ಕಾಶ್ಮೀರದ ಸ್ಥಳೀಯರನ್ನು ಈ ಕೃತ್ಯಕ್ಕೆ ಬಳಸುವ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಭಾರತದ ಸ್ವಾಭಿಮಾನಕ್ಕೆ, ಸೈನಿಕರಿಗೆ ಭಯ ಹುಟ್ಟಿಸುವ ಉದ್ದೇಶ

ಭಾರತದ ಸ್ವಾಭಿಮಾನಕ್ಕೆ, ಸೈನಿಕರಿಗೆ ಭಯ ಹುಟ್ಟಿಸುವ ಉದ್ದೇಶ

ಮತ್ತೊಮೆ ಏನು ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದರೋ, ಅದು ಕೂಡಾ ಸೇನೆಯ ಮೇಲೆ ನಡೆಸಲು ಸಂಚು ರೂಪಿಸಿದ್ದಾರೆ. ಆ ಮೂಲಕ, ಭಾರತದ ಸ್ವಾಭಿಮಾನಕ್ಕೆ, ಸೈನಿಕರಿಗೆ ಭಯ ಹುಟ್ಟಿಸುವ ಉದ್ದೇಶವನ್ನು ಜೈಶ್ ಉಗ್ರ ಸಂಘಟನೆ ಹೊಂದಿದೆ. ನುಸುಳಿರುವ ಉಗ್ರರಲ್ಲಿ ಮೂವರನ್ನು ಆತ್ಮಹತ್ಯಾ ದಾಳಿ ನಡೆಸಲು ನಿಯೋಜನೆ ಮಾಡಿ ಜೈಶ್ ಸಂಘಟನೆ ಕಳುಹಿಸಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ಪುಲ್ವಾಮಾ ದಾಳಿ ಬಳಿಕ, ಸೇನಾ ವಾಹನ ಸಂಚಾರ ಬಂದ್ ಮಾಡಿದ ಸರ್ಕಾರಪುಲ್ವಾಮಾ ದಾಳಿ ಬಳಿಕ, ಸೇನಾ ವಾಹನ ಸಂಚಾರ ಬಂದ್ ಮಾಡಿದ ಸರ್ಕಾರ

ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸಾಕ್ಷಿಯಿದ್ದರೆ ಕೊಡಿ ಎಂದು ಕೇಳಿದ್ದರು

ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸಾಕ್ಷಿಯಿದ್ದರೆ ಕೊಡಿ ಎಂದು ಕೇಳಿದ್ದರು

ಪುಲ್ವಾಮಾ ಘಟನೆಯ ನಂತರ ಮಾಧ್ಯಮದಲ್ಲಿ ಮಾತನಾಡುತ್ತಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಸಾಕ್ಷಿಯಿದ್ದರೆ ಕೊಡಿ ಎಂದು ಕೇಳಿದ್ದರು. ಜೊತೆಗೆ, ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನಿರುವುದಿಲ್ಲ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಪುಲ್ವಾಮಾ ಘಟನೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿಹೋಗಿದೆ.

ಸಾಕ್ಷಿ ಕೇಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ 5 ಪ್ರಶ್ನೆಗಳುಸಾಕ್ಷಿ ಕೇಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ 5 ಪ್ರಶ್ನೆಗಳು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಲು ಭಾರತ ಪ್ರಯತ್ನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಲು ಭಾರತ ಪ್ರಯತ್ನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಲು ಭಾರತ ಪ್ರಯತ್ನಿಸುತ್ತಿರುವ ನಡುವೆ, ಜೈಶ್ ಉಗ್ರ ಸಂಘಟನೆ ಮತ್ತೆ ದಾಳಿ ನಡೆಸಲು ಸಂಚು ರೂಪಿಸಿರುವುದು ಪಾಕಿಸ್ತಾನಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಸೂದ್ ಅಜರ್ ನನ್ನು ಅಂತರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವನೆ ಸಲ್ಲಿಸಲು ಫ್ರಾನ್ಸ್ ಮುಂದಾಗಿದೆ.

ಪುಲ್ವಾನಾ ದಾಳಿಯ ವಿಡಿಯೋ ಸದ್ಯದಲ್ಲೇ ಬಿಡುಗಡೆ

ಪುಲ್ವಾನಾ ದಾಳಿಯ ವಿಡಿಯೋ ಸದ್ಯದಲ್ಲೇ ಬಿಡುಗಡೆ

ಜೈಶ್ ಉಗ್ರರು ಪುಲ್ವಾನಾದಲ್ಲಿ ನಡೆಸಿದ್ದ ದಾಳಿಯ ವಿಡಿಯೋವನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಇಪ್ಪತ್ತು ವರ್ಷದ ಆದಿಲ್ ಅಹ್ಮದ್ ದಾರ್ ನನ್ನು ವೈಭವೀಕರಿಸುವುದು ಈ ದಾಳಿಯ ಪ್ರಮುಖ ಉದ್ದೇಶವಾಗಿದೆ. ಜೊತೆಗೆ, ಆದಿಲ್ ಬಗ್ಗೆ ಏನೂ ಮಾತನಾಡಬೇಡಿ, ಟೀಕಿಸುವುದಿದ್ದರೆ ನನ್ನನ್ನು ಟೀಕಿಸಿ ಎಂದು ಉಗ್ರ ಮಸೂದ್ ಅಜರ್ ಬುಧವಾರದಂದು ಹೇಳಿಕೆಯನ್ನು (ಫೆ 20) ನೀಡಿದ್ದ.

ಪುಲ್ವಾಮಾ ದಾಳಿಗೆ ಬಳಸಿದ್ದು ಮಾರುತಿ ಸಂಸ್ಥೆ ನಿರ್ಮಿತ ವಾಹನ! ಪುಲ್ವಾಮಾ ದಾಳಿಗೆ ಬಳಸಿದ್ದು ಮಾರುತಿ ಸಂಸ್ಥೆ ನಿರ್ಮಿತ ವಾಹನ!

English summary
JeM terrorist organization planning for bigger attack than Pulwama: A shocking report IB. In a report, in a day or two, terrorist planning to do suicide attack either in Jammu Kashmir nor in other part of country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X