ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರು ಕೋಟಿ ಆಸ್ತಿ, ಮುದ್ದಾದ ಮಗಳು ತ್ಯಜಿಸಿ ದಂಪತಿ ಸನ್ಯಾಸ

|
Google Oneindia Kannada News

ವಯಸ್ಸು ಕಳೆದ ಮೇಲೆ, ಹಣ ಇಲ್ಲದಾಗ ವೈರಾಗ್ಯ ಮೂಡುವುದು ಅಸಹಜ ಎನಿಸುವುದಿಲ್ಲ. ಆದರೆ ಮಧ್ಯಪ್ರದೇಶದ ಈ ಜೈನ ದಂಪತಿ ಮೂರು ವರ್ಷದ ಮಗುವನ್ನು ಬಿಟ್ಟು, ನೂರು ಕೋಟಿ ಮೌಲ್ಯದ ಆಸ್ತಿ ತ್ಯಜಿಸಿ ಸನ್ಯಾಸ ಸ್ವೀಕರಿಸಲು ನಿರ್ಧರಿಸಿದ್ದಾರೆ.

ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ ಗುಜರಾತ್ ನ ಹನ್ನೆರಡನೇ ತರಗತಿ ಟಾಪರ್ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ ಗುಜರಾತ್ ನ ಹನ್ನೆರಡನೇ ತರಗತಿ ಟಾಪರ್

ಸುಮಿತ್ ರಾಥೋರ್ (35), ಅವರ ಪತ್ನಿ ಅನಾಮಿಕಾ (34) ಮೂಲತಃ ಮಧ್ಯಪ್ರದೇಶದ ನೀಮಚ್ ನವರು. ಮೊದಲಿಗೆ ಕುಟುಂಬದ ವ್ಯಾಪಾರ ನೋಡಿಕೊಳ್ಳುತ್ತಿದ್ದರು. ಆ ನಂತರ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಇಬ್ಬರೂ ಸನ್ಯಾಸ ಸ್ವೀಕರಿಸಲು ತೀರ್ಮಾನಿಸಿದ್ದಾರೆ.

Jain couple to leave 3-year-old daughter, renounce property worth Rs 100 crore to become monks

ಶ್ವೇತಾಂಬರ ಗುಂಪಿನ ಸನ್ಯಾಸಿಗಳಾಗಿ ಈ ದಂಪತಿ ಮುಂದುವರಿಯಲಿದ್ದಾರೆ. ಈ ಸಂಬಂಧ ಸೆಪ್ಟೆಂಬರ್ 23ರಂದು ಗುಜರಾತ್ ನ ಸೂರತ್ ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಆ ನಂತರ ಇವರಿಬ್ಬರೂ ದೀಕ್ಷೆ ಸ್ವೀಕರಿಸಲಿದ್ದಾರೆ. ಸುಮಿತ್ ಹಾಗೂ ಅನಾಮಿಕರ ಕೇಶ ಮುಂಡನ ಮಾಡಲಾಗುತ್ತದೆ. ಇನ್ನು ಬದುಕಿನ ಉಳಿದ ಕಾಲಾವಧಿ ಶ್ವೇತ ವಸ್ತ್ರವನ್ನು ಧರಿಸಬೇಕಾಗುತ್ತದೆ.

ಬಾಯಿಗೆ ಅಡ್ಡಲಾಗಿ ಬಟ್ಟೆ ಕಟ್ಟಿಕೊಳ್ಳಬೇಕಾಗುತ್ತದೆ. ಅಪ್ಪಿತಪ್ಪಿ ಕ್ರಿಮಿ ಕೀಟಗಳು ಕೂಡ ಬಾಯಿಯೊಳಗೆ ಹೋಗಿ, ಅವುಗಳಿಗೆ ಹಿಂಸೆ ಆಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.

ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ

ಭಾರತದಲ್ಲಿ ಐವತ್ತು ಲಕ್ಷಕ್ಕೂ ಕಡಿಮೆ ಸಂಖ್ಯೆಯಲ್ಲಿ ಜೈನ ಸಮುದಾಯದವರಿದ್ದಾರೆ. ಅವರು ಕೆಲ ಕಠಿಣ ನಿಯಮಗಳನ್ನು ಪಾಲಿಸುತ್ತಾರೆ. ಅದರಲ್ಲಿ ಸಸ್ಯಾಹಾರ ಸೇವನೆಯೂ ಒಂದು.

ಅನಾಮಿಕಾ ಅವರ ತಂದೆ ಅಶೋಕ್ ಚಂದಲಿಯಾ ಮೊಮ್ಮಗಳ ಪೋಷಣೆ ಮಾಡಲಿದ್ದಾರೆ. ಸುಮಿತ್-ಅನಾಮಿಕಾ ದಂಪತಿಯು ತಮ್ಮ ಮಗಳಿಗೆ ಎಂಟು ತಿಂಗಳು ಇರುವಾಗಲಿಂದಲೇ ಈ ಸನ್ಯಾಸ ದೀಕ್ಷೆಯ ತಯಾರಿ ಆರಂಭಿಸಿದ್ದರಿಂದ ಆ ಕುಟುಂಬದವರಿಗೆ ಈಗ ಆಶ್ಚರ್ಯ ಏನೂ ಆಗಿಲ್ಲ.

ಈ ವರ್ಷದಲ್ಲೇ ಅಹಮದಾಬಾದ್ ನ ಹದಿನೇಳು ವರ್ಷದ ಯುವಕ, ಹನ್ನೆರಡನೇ ತರಗತಿಯಲ್ಲಿ ಗುಜರಾತ್ ಗೆ ಅತಿ ಹೆಚ್ಚು ಅಂಕ ಗಳಿಸಿದ್ದು, ಆ ನಂತರ ಸನ್ಯಾಸ ಸ್ವೀಕಾರ ಮಾಡಿದ್ದರು.

English summary
A Jain couple from Madhya Pradesh will be leaving behind their three-year-old daughter and renounce their property, which is reportedly worth 100 crores, to attain monkhood, PTI reported. ನೂರು ಕೋಟಿ ಆಸ್ತಿ, ಮುದ್ದಾದ ಮಗಳು ತ್ಯಜಿಸಿ ದಂಪತಿ ಸನ್ಯಾಸ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X