ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಹಾಂಗೀರ್‌ಪುರಿ ಘಟನೆ: ಕಲ್ಲುಗಳಲ್ಲಿ ಹೊಡೆದಾಡಿಕೊಂಡವರು ರಾಷ್ಟ್ರಧ್ವಜ ಹಿಡಿದು ಒಂದಾದರು

|
Google Oneindia Kannada News

ನವದೆಹಲಿ, ಏ. 25: ಹತ್ತು ದಿನಗಳ ಹಿಂದಷ್ಟೇ ಕೋಮುಗಲಭೆಯಿಂದ ಧಗಧಗ ಉರಿದುಹೋಗಿದ್ದ ಜಹಾಂಗೀರ್‌ಪುರಿ ಪ್ರದೇಶ ಈಗ ಭಾವೈಕ್ಯತೆಯ ಸಂದೇಶ ರವಾನಿಸಿದೆ. ಏಪ್ರಿಲ್ 16ರಂದು ಇಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ನಿನ್ನೆ ಭಾನುವಾರ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಜನರು ತಿರಂಗ ಯಾತ್ರೆ (ತ್ರಿವರ್ಣ ಧ್ವಜ ಮೆರವಣಿಗೆ) ನಡೆಸಿ ಕೋಮು ಸೌಹಾರ್ದತೆಗೆ ನಿದರ್ಶನರಾದರು. ಅಷ್ಟೇ ಅಲ್ಲ, ಇನ್ಮುಂದೆ ಕೋಮು ಗಲಭೆಗಳಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಿದರೆಂದು ತಿಳಿದುಬಂದಿದೆ.

ಸುಮಾರು 100ಕ್ಕೂ ಹೆಚ್ಚು ಮಂದಿ ಈ ಶಾಂತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬರೂ ಕೈಯಲ್ಲಿ ರಾಷ್ಟ್ರಧ್ವಜ ಹಾರಿಸುತ್ತಾ ಡಾ. ಬಿ ಆರ್ ಅಂಬೇಡ್ಕರ್ ಅವರ ಫೋಟೋಗಳನ್ನು ಹಿಡಿದುಕೊಂಡು ಸಾಗಿದರು. ಶಾಂತಿ, ಸೌಹಾರ್ದತೆ, ಏಕತೆಯ ಸಂದೇಶವನ್ನು ಈ ಮೆರವಣಿಗೆ ಮೂಲಕ ನೀಡಲಾಗಿದೆ. ಅಂದಹಾಗೆ, ಈ ಮೆರವಣಿಗೆಯನ್ನ ಪೊಲೀಸ್ ಇಲಾಖೆ ನೇತೃತ್ವದಲ್ಲೇ ಆಯೋಜಿಸಲಾಗಿತ್ತು.

Breaking; ಜಹಾಂಗಿರ್‌ಪುರಿಯಲ್ಲಿ ಕಟ್ಟಡ ತೆರವು, ಬಿಗಿ ಭದ್ರತೆ Breaking; ಜಹಾಂಗಿರ್‌ಪುರಿಯಲ್ಲಿ ಕಟ್ಟಡ ತೆರವು, ಬಿಗಿ ಭದ್ರತೆ

"ಎರಡೂ ಸಮುದಾಯಗಳ ಸದಸ್ಯರಿರುವ ಜಂಟಿ ಶಾಂತಿ ಸಮಿತಿಯನ್ನು ನಾವು ರಚಿಸಿದೆವು. ಜಹಾಂಗೀರ್‌ಪುರಿಯಲ್ಲಿ ತಿರಂಗಾ ಯಾತ್ರೆ ನಡೆಸಿ ಜನರಲ್ಲಿ ಕೋಮುಸೌಹಾರ್ದತೆ ಪಾಲನೆಗೆ ಮನವಿ ಮಾಡುವ ಸಲಹೆಯನ್ನ ಈ ಸಮಿತಿ ನೀಡಿತು. ಎರಡೂ ಸಮುದಾಯಗಳಿಂದ ತಲಾ 50 ಮಂದಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡರು" ಎಂದು ದೆಹಲಿಯ ವಾಯವ್ಯ ವಿಭಾಗದ ಡಿಸಿಪಿ ಉಷಾ ರಂಗಣಿ ಅವರು ಹೇಳಿದರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Jahangirpuri: Hindu and Muslims hug each other during peaceful march

ಪರಸ್ಪರ ಆಲಿಂಗಿಸಿಕೊಂಡ ಎರಡೂ ಕೋಮಿನವರು:
ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳು ಪರಸ್ಪರ ಆಲಂಗಿಸಿಕೊಂಡ ದೃಶ್ಯ ಕಾಣಸಿಕ್ಕಿತು. ಇನ್ಮುಂದೆ ಹಿಂಸಾಚಾರ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಈ ಜನರು ಶಪಥವನ್ನೂ ತೊಟ್ಟರೆನ್ನಲಾಗಿದೆ.

"ನಾವು ಸೌಹಾರ್ದತೆಯಿಂದ ಬದುಕಬಯಸುತ್ತೇವೆ. ಇಂಥ ಕೃತ್ಯಗಳು ಮತ್ತೆ ಆಗದಂತೆ ಎಚ್ಚರ ವಹಿಸುತ್ತೇವೆ. ಈ ಪ್ರದೇಶದಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ಗಳ ಸಂಖ್ಯೆಯನ್ನ ಪೊಲೀಸರು ಕಡಿಮೆ ಮಾಡಲಿ ಹಾಗು ಇಲ್ಲಿ ನಿಯೋಜನೆಗೊಂಡಿರುವ ಪೊಲೀಸರ ಸಂಖ್ಯೆಯೂ ಕಡಿಮೆ ಆಗಲಿ" ಎಂದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ತಬ್ರೇಜ್ ಖಾನ್ ಅವರು ಹೇಳಿರುವುದನ್ನು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಶಾಂತಿಯಾತ್ರೆಯನ್ನ ಮಾಮೂಲಿಯ ಬಿಗಿಭದ್ರತೆ ಇಲ್ಲದೇ ಕೈಗೊಳ್ಳಲಾಗಿದ್ದು ವಿಶೇಷ.

ಹಿಂಸಾಚಾರ ಘಟನೆ:
ಏಪ್ರಿಲ್ 16, ಶನಿವಾರದಂದು ಮುಸ್ಲಿಮ್ ಬಾಹುಳ್ಯ ಇರುವ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹಿಂದೂ ಸಮುದಾಯದವರು ಹನುಮ ಜಯಂತಿ ಮೆರವಣಿಗೆ ನಡೆಸಿದ್ದರು. ಈ ಮೆರವಣಿಗೆಗೆ ಅನುಮತಿ ಇರಲಿಲ್ಲವೆನ್ನಲಾಗಿದೆ. ಮಸೀದಿಯಲ್ಲಿ ಅಜಾನ್ ನಡೆಯುತ್ತಿರುವ ಸಮಯದಲ್ಲಿ ಹನುಮ ಜಯಂತಿಯ ಪ್ರಾರ್ಥನೆಯನ್ನ ಮಾಡಲಾಯಿತು. ಈ ವೇಳೆ ಎರಡೂ ಸಮುದಾಯದವರ ಮಧ್ಯೆ ವಾಗ್ವಾದವಾಗಿದೆ. ಮೆರವಣಿಗೆ ಮಾಡುತ್ತಿದ್ದ ಜನರ ಮೇಲೆ ಕಲ್ಲು ತೂರಾಟ ಆಯಿತು. ಈ ವೇಳೆ ಒಬ್ಬ ನಾಗರಿಕ ಹಾಗು ಎಂಟು ಮಂದಿ ಪೊಲೀಸರಿಗೆ ಗಾಯಗಳದವು. ಈ ಘಟನೆ ಸಂಬಂಧ ಇದೂವರೆಗೆ 24 ಮಂದಿ ಬಂಧಿತರಾಗಿದ್ದಾರೆ. ಅನ್ಸಾರ್ ಎಂಬಾತ ಪ್ರಮುಖ ಆರೋಪಿಯಾಗಿದ್ದಾನೆ. ಆರೋಪಿಗಳಲ್ಲಿ ಮೂವರು ಅಪ್ರಾಪ್ತರೂ ಇದ್ದಾರೆ.

ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್‌ಐರ್ ದಾಖಲಾಗಿದೆ. ಹಾಗೆಯೇ, ಕೋಮು ಘರ್ಷಣೆಗೆ ಕಾರಣವಾದ ಹನುಮ ಜಯಂತಿ ಮೆರವಣಿಗೆ ನಡೆಸಿದ ಆಯೋಜಕರ ಮೇಲೂ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ಧಾರೆ.

ಜಹಾಂಗೀರ್‌ಪುರಿ ಹಿಂಸಾಚಾರ ಘಟನೆಗೂ ಕಟ್ಟಡ ತೆರವು ಕಾರ್ಯಾಚರಣೆಗೂ ಏನು ಸಂಬಂಧ? ಜಹಾಂಗೀರ್‌ಪುರಿ ಹಿಂಸಾಚಾರ ಘಟನೆಗೂ ಕಟ್ಟಡ ತೆರವು ಕಾರ್ಯಾಚರಣೆಗೂ ಏನು ಸಂಬಂಧ?

ಘಟನೆ ನಡೆದ ಬಳಿಕ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಬಹುತೇಕ ಎಲ್ಲಾ ರಸ್ತೆಗಳಲ್ಲೂ ಬ್ಯಾರಿಕೇಡ್ ಹಾಕಿ ಜನರ ಓಡಾಟದ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಅಂಗಡಿ ಮುಂಗಟ್ಟುಗಳ ಮೇಲೂ ನಿರ್ಬಂಧ ಹಾಕಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಇದ್ದ ಕರ್ಫ್ಯೂ ಸ್ಥಿತಿ ಜಹಾಂಗೀರ್‌ಪುರಿಯಲ್ಲಿ ಒಂದು ವಾರ ಇತ್ತು. ಇತ್ತೀಚೆಗೆ ಕೆಲ ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನ ತೆಗೆಯಲಾಗಿದೆ. ಅಂಗಡಿ ಮಳಿಗೆಗಳನ್ನ ತೆರೆಯಲು ಅನುಮತಿ ಕೊಡಲಾಗಿದೆ. ಆದರೆ, ಪೊಲೀಸರ ನಿಯೋಜನೆ ಮುಂದುವರಿದಿದೆ.

ಬೇರೆಡೆಯೂ ಹಿಂಸಾಚಾರ: ಏಪ್ರಿಲ್ ಮೂರನೇ ವಾರದಂದು ದೆಹಲಿಯ ಜಹಾಂಗೀರ್‌ಪುರಿ ಮಾತ್ರವಲ್ಲ, ಉತ್ತರ ಪ್ರದೇಶ, ಮಧ್ಯಪ್ರದೇಶದ ಇತರ ಕೆಲ ಪ್ರದೇಶಗಳಲ್ಲೂ ರಾಮನವಮಿ, ಹನುಮ ಜಯಂತಿ ಮೆರವಣಿಗೆ ವೇಳೆ ಹಿಂಸಾಚಾರವಾದ ಘಟನೆಗಳು ಸಂಭವಿಸಿದ್ದವು.

(ಒನ್ಇಂಡಿಯಾ ಸುದ್ದಿ)

Recommended Video

ಈ ಮೂವರು ಇದ್ದಿದ್ರೆ ಮುಂಬೈನ ಕಟ್ಟಿಹಾಕೋಕೆ ಆಗ್ತಾನೆ‌ ಇರ್ಲಿಲ್ಲ | Oneindia Kannada

English summary
Hindus and Muslims of the Jahangirpuri area came together to carry out a ‘tiranga yatra’ to spread the message of peace and harmony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X