ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟಿನ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಖೇಹರ್

ಸುಪ್ರೀಂಕೋರ್ಟಿನ 44ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ)ಯಾಗಿ ಜಗದೀಶ್‌ ಸಿಂಗ್ ಖೇಹರ್‌ ಅವರು ಬುಧವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

By Mahesh
|
Google Oneindia Kannada News

ನವದೆಹಲಿ, ಜನವರಿ 04: ಸುಪ್ರೀಂಕೋರ್ಟಿನ 44ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ)ಯಾಗಿ ಜಗದೀಶ್‌ ಸಿಂಗ್ ಖೇಹರ್‌ ಅವರು ಬುಧವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿರುವ ನ್ಯಾಯಮೂರ್ತಿಗಳ ಪೈಕಿ ಹಿರಿಯವರಾಗಿರುವ ಖೇಹರ್‌ ಅವರು ಸಿಖ್‌ ಸಮುದಾಯದಿಂದ ಸಿ.ಜೆ ಐ ಹುದ್ದೆಗೇರುತ್ತಿರುವ ಮೊದಲ ಸಿಖ್ ನ್ಯಾಯಮೂರ್ತಿಯಾಗಿದ್ದಾರೆ. [ಸಿಜೆಐ ಆಗಿ ಜೆಎಸ್ ಖೇಹರ್ ನೇಮಿಸಿದ ರಾಷ್ಟ್ರಪತಿ]

Jagdish Singh Khehar first CJI from Sikh sworn in as Chief Justice of India

ನ್ಯಾ. ಜೆಎಸ್ ಖೇಹರ್ ಅವರ ಅಧಿಕಾರ ಅವಧಿ ಜನವರಿ 4 2017ರಿಂದ ಆರಂಭವಾಗಿ ಅಗಸ್ಟ್ 28, 2017ರಲ್ಲಿ ಅಂತ್ಯವಾಗಲಿದೆ. ನ್ಯಾ. ಟಿಎಸ್ ಠಾಕೂರ್ ಅವರ ಅಧಿಕಾರ ಅವಧಿ ಮಂಗಳವಾರ(ಜನವರಿ 03)ಕ್ಕೆ ಅಂತ್ಯ ಕಂಡಿತು.

ನ್ಯಾ. ಜೆಎಸ್ ಖೇಹರ್‌ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

1979ರಲ್ಲಿ ವಕೀಲ ವೃತ್ತಿ ಆರಂಭಿಸಿದ ಖೇಹರ್ ಅವರು ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಹೈಕೋರ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಉತ್ತರಾಖಂಡ್ ನ ಹೈಕೋರ್ಟ್ ಮುಖ್ಯ ಜಸ್ಟೀಸ್ ಆಗಿದ್ದ ಅವರು ನಂತರ 2010ರಲ್ಲಿ ಕರ್ನಾಟಕದ ಹೈಕೋರ್ಟ್ ಮುಖ್ಯ ಜಸ್ಟೀಸ್ ಆದರು. 2011ರಲ್ಲಿ ಸುಪ್ರೀಂಕೋರ್ಟಿನ ಜಡ್ಜ್ ಆಗಿ ನೇಮಕವಾಗಿದ್ದರು.

English summary
Justice Jagdish Singh Khehar was on Wednesday sworn in as 44th Chief Justice of India. Justice JS Khehar took oath as the Chief Justice of India on Wednesday at the President's House. He succeeds Justice TS Thakur, who retired on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X