ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಿಲಾಂಡ್ರಿಂಗ್ ವಂಚನೆ: ಟಾಪ್ 10 ಪಟ್ಟಿಯಲ್ಲಿ ಜಗನ್ ಗೆ ಕೊನೆ ಸ್ಥಾನ

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 24: ಮನಿಲಾಂಡ್ರಿಂಗ್ ಮಾಡಿ ಭಾರಿ ಹಣಕಾಸು ವಂಚನೆಯಲ್ಲಿ ತೊಡಗಿರುವವರ ಪಟ್ಟಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಪ್ರಕಟಿಸಿದೆ. ವಿಶೇಷವೆಂದರೆ, ಟಾಪ್ 10 ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ವೈಎಸ್ಸಾರ್ ಪಕ್ಷದ ಮುಖಂಡ ಜಗನ್ ಮೋಹನ್ ರೆಡ್ಡಿ ಇದ್ದಾರೆ.

ಜಗನ್ ಗೆ ಸೇರಿದ ಎರಡೂವರೆ ಸಾವಿರ ಕೋಟಿ ರು ಜಪ್ತಿಜಗನ್ ಗೆ ಸೇರಿದ ಎರಡೂವರೆ ಸಾವಿರ ಕೋಟಿ ರು ಜಪ್ತಿ

ಈ ಪಟ್ಟಿಯಲ್ಲಿ ದೇಶದ ಕೆಲವು ಪ್ರಮುಖ ರಾಜಕಾರಣಿಗಳು ಸೇರಿದ್ದಾರೆ. ಸೂರತ್ ನ ಅಫ್ರೋಜ್ ಮೊಹಮ್ಮದ್ ಹಸನ್ಫಟ್ಟಾ-ಮದನಾಲ್ ಜೈನ್ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

Jagan Mohan Reddy, Chhagan Bhujbal figure in ED list of top launderers

ನಕಲಿ ಬಿಲ್, ಹಾಗೂ ಬೇನಾಮಿ ಸಂಸ್ಥೆ ಹೆಸರಿನಲ್ಲಿ ದುಬೈ ಹಾಗೂ ಹಾಂಕಾಂಗ್ ಗೆ ಹಣ ರವಾನೆ ಮಾಡಿರುವ ಇವರು 30 ಶೆಲ್ ಕಂಪೆನಿಗಳಿಂದ ಅವರು 5400 ಕೋಟಿ ರೂಪಾಯಿಗಳನ್ನು ಒಟ್ಟುಗೂಡಿಸಿದ್ದಾರೆ ಎಂಬ ಆರೋಪಗಳಿವೆ.

ಜಗನ್ ಆಸ್ತಿ ಕೇವಲ 343 ಕೋಟಿ, ವಾಹನವೇ ಇಲ್ಲಜಗನ್ ಆಸ್ತಿ ಕೇವಲ 343 ಕೋಟಿ, ವಾಹನವೇ ಇಲ್ಲ

ಟಾಪ್ 10 ಪಟ್ಟಿ ಹೀಗಿದೆ:
1.ಅಫ್ರೋಜ್ ಮೊಹಮ್ಮದ್ ಹಸನ್ಫಟ್ಟಾ-ಮದನ್ ಲಾಲ್ ಜೈನ್- 30 ಶೆಲ್ ಕಂಪನಿ- 5,396 ಕೋಟಿ ರು ಅಕ್ರಮ
2. ಎನ್.ಕೆ.ಎಸ್ ಹೋಲ್ಡಿಂಗ್ಸ್ ಪ್ರೈ. ದೆಹಲಿ- 95- 3,790ಕೋಟಿರು
3. ಬ್ಯಾಂಕ್ ಆಫ್ ಬರೋಡಾ ಕೇಸ್, ದೆಹಲಿ- 115-3,600 ಕೋಟಿ ರು
4. ಮುಂಬೈಯ ರಾಜೇಶ್ವರ ರಫ್ತು ಕಂಪನಿ-312-1,500 ಕೋಟಿ ರು
5. ಸಿಂಡಿಕೇಟ್ ಬ್ಯಾಂಕ್ ಕೇಸ್, ಜೈಪುರ- 20- 1,056 ಕೋಟಿ ರು
6. ಸಿದ್ಧಿ ವಿನಾಯಕ್ ಲಾಜಿಸ್ಟಿಕ್ಸ್, ಮುಂಬೈ-10- 836 ಕೋಟಿ ರು
7. ಮನೀಶ್ ಜೈನ್ ಹಾಗೂ ಇತರರರು, ದೆಹಲಿ-57-586 ಕೋಟಿ ರು
8. ಪೇಸ್ ಇಂಟರ್ ನ್ಯಾಷನಲ್, ಜಲಂಧರ್-03-418 ಕೋಟಿ ರು
9. ಯೋಗೇಶ್ವರ್ ಡೈಮಂಡ್ಸ್, ಮುಂಬೈ-56-304 ಕೋಟಿ ರು
10.ವೈ ಎಸ್ ಜಗನ್ ಮೋಹನ್ ರೆಡ್ಡಿ, ಹೈದರಾಬಾದ್-31-368 ಕೋಟಿ ರು

ಮಹಾರಾಷ್ಟ್ರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಛಗನ್ ಭುಜಬಲ್ ಅವರು 81 ಕಂಪನಿಗಳಿಗೆ ಅಕ್ರಮ ಕ್ರೆಡಿಟ್ ಮೂಲಕ 200 ಕೋಟಿ ರೂ. ಹೊಂದಿದ್ದಾರೆ.

English summary
The Enforcement Directorate has drawn up a list of top money launderers and the shell companies used by them to transact unaccounted money. The list includes some top politicians of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X