ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಬ್ ದಾದಾ ನಿರ್ಧಾರ ಆಘಾತ ತಂದಿದೆ: ಜಾಫರ್ ಶರೀಫ್

|
Google Oneindia Kannada News

Recommended Video

ಪ್ರಣಬ್ ಮುಖರ್ಜಿ ನಿರ್ಧಾರ ಆಘಾತ ತಂದಿದೆ ಎಂದ ಜಾಫರ್ ಶರೀಫ್ | Oneindia Kannada

ನವದೆಹಲಿ, ಮೇ 30: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದ ಮೂರನೇ ವರ್ಷದ ವರ್ಗ ಸಮಾರಂಭದ ಸಮಾರೋಪಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮುಖ್ಯ ಅತಿಥಿಯಾಗಿ ತೆರಳುತ್ತಿರುವುದು ನನಗೆ ಆಘಾತ ತಂದಿದೆ ಎಂದು ಕಾಂಗ್ರೆಸ್ ಮುಖಂಡ ಜಾಫರ್ ಶರೀಫ್ ಹೇಳಿದ್ದಾರೆ.

ಹುಟ್ಟಿನಿಂದಲೂ ಒಬ್ಬ ಕಾಂಗ್ರೆಸ್ಸಿಗನಾಗಿ, ತಮ್ಮ ಹಿನ್ನೆಲೆಯನ್ನು ಮರೆತು ಹೀಗೆ ಆರೆಸ್ಸಸ್ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ನನಗೆ ತೀವ್ರ ಆಘಾತ ತಂದಿದೆ ಎಂದು ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರವೊಂದರಲ್ಲಿ ಅವರು ಬರೆದಿದ್ದಾರೆ.

Jaffer Sharief shocks over Pranab Mukherjees decision

ಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣವ್ ಮುಖರ್ಜಿ, ಕಾಂಗ್ರೆಸ್ ನಲ್ಲಿ ಕಂಪನಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣವ್ ಮುಖರ್ಜಿ, ಕಾಂಗ್ರೆಸ್ ನಲ್ಲಿ ಕಂಪನ

ಈ ನಿರ್ಧಾರ ತೆಗೆದುಕೊಳ್ಳುವಾಗ ಅವರು ಯಾರ ವಿಶ್ವಾಸವನ್ನೂ ತೆಗೆದುಕೊಂಡಿಲ್ಲ. ಇದ್ದಕ್ಕಿದ್ದಂತೇ ಈ ನಿರ್ಧಾರ ತೆಗೆದುಕೊಂಡಿದ್ದು ನಮಗೆ ಇರಿಸುಮುರಿಸುಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

ಪ್ರಣಬ್ ಮುಖರ್ಜಿ ಅವರು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರೆಸ್ಸೆಸ್ ಹಿರಿಯರೊಬ್ಬರು, 'ಇದರಲ್ಲಿ ಅಚ್ಚರಿಯೇನೂ ಇಲ್ಲ. ಆರೆಸ್ಸೆಸ್ಸಿನ ಬಗ್ಗೆ ತಿಳಿದವರಿಗೆ ಇದು ಆಶ್ಚರ್ಯವನ್ನುಂಟುಮಾಡುವುದಿಲ್ಲ. ಆರೆಸ್ಸೆಸ್ ಎಂದಿಗೂ ಸಮಾಜದಲ್ಲಿ ಮಹತ್ವದ ಸ್ಥಾನ ಪಡೆದ ವ್ಯಕ್ತಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುತ್ತದೆ. ಅಂತೆಯೇ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದೇವೆ. ಬರಲು ಒಪ್ಪಿಕೊಂಡಿದ್ದು ಅವರ ಉದಾತ್ತ ಗುಣವನ್ನು ತೋರಿಸುತ್ತದೆ' ಎಂದಿದ್ದಾರೆ.

English summary
Congress leader CK Jaffer Sharief writes a letter to former president of India Pranab Mukherjee. In his letter he quotes, " His decision to go to RSS is surprising&shocking. Being a Congress man life long, going to RSS suddenly like this...he can't ignore his background. He didn't take anyone into confidence, he's suddenly going"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X