ಶೋಭನ್ ಬಾಬು- ಜಯಲಲಿತಾ ಮದುವೆ, ದತ್ತು ನೋಂದಣಿ ಪತ್ರ ಬಹಿರಂಗ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ನಟ ಶೋಭನ್ ಬಾಬು ಹಾಗೂ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಡುವಿನ ಸಂಬಂಧ ಕುರಿತಂತೆ ಮತ್ತೆ ಚರ್ಚೆ ಆರಂಭವಾಗಿದೆ. ಇಬ್ಬರಿಗೂ ಮದುವೆಯಾಗಿತ್ತು. ಒಂದು ಗಂಡು ಮಗುವಿತ್ತು ಒಂದು ಹೆಣ್ಣು ಮಗುವಿತ್ತು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ.

ನಟ ಶೋಭನ್ ಬಾಬು ಹಾಗೂ ಜಯಲಲಿತ ಮದುವೆ ವಿಚಾರ ವೈರಲ್

ಆದರೆ, ಇಂಥ ಸುದ್ದಿಗಳಿಗೆ ಪೂರಕ ದಾಖಲೆಗಳು ಸಿಗುತ್ತಿರಲಿಲ್ಲ. ಆದರೆ, ಈಗ ಶೋಭನ್ ಬಾಬು ಹಾಗೂ ಜಯಲಲಿತಾ ಮದುವೆ ನೋಂದಣಿ ಪತ್ರ, ದತ್ತು ನೀಡಲು ನೋಂದಣಿ ಮಾಡಿಸಿರುವ ಪತ್ರ ಬಹಿರಂಗವಾಗಿದೆ.

J Jayalalithaa and Actor Shobhan Babu marriage adoption registration paper goes viral

ಶೋಭನ್ ಬಾಬು ಹಾಗೂ ಜಯಲಲಿತ ತಮಗಿದ್ದ ಗಂಡು ಮಗುವನ್ನು ವಸಂತಮಣಿ ಎಂಬ ಮಹಿಳೆಗೆ ದತ್ತು ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ನೋಂದಣಿ ಪತ್ರ ಎಲ್ಲೆಡೆ ಹರಡುತ್ತಿದೆ. ಜಯಲಲಿತಾ ಮತ್ತು ಶೋಭನ್ ಬಾಬು ಅವರಿಗೆ ಮದುವೆಯಾಗಿತ್ತು ಎನ್ನುವ ಸುದ್ದಿ ಹಲವು ಬಾರಿ ಸುದ್ದಿಯಾಗಿತ್ತು.

J Jayalalithaa and Actor Shobhan Babu

ಜಯಲಲಿತಾ ಅವರ ಆಪ್ತೆ ವಸಂತಮಣಿ ಅವರಿಗೆ ಶೋಭನ್-ಜಯಾ ದಂಪತಿಗೆ ಜನಿಸಿದ ಗಂಡು ಮಗುವನ್ನು ದತ್ತು ನೀಡುತ್ತಿರುವುದಾಗಿ ಈ ಪತ್ರದಲ್ಲಿ ಹೇಳಲಾಗಿದೆ.

ಜಯಲಲಿತಾ, ಶೋಭನ್ ಬಾಬು ಹಾಗೂ ವಸಂತಮಣಿಯವರ ಸಹಿ ಹಾಗೂ ಭಾವಚಿತ್ರಗಳಿವೆ. ಈರೋಡಿನ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿದೆ. ಸುಬ್ರಮಣಿಯನ್ ಎಂಬ ಸ್ಟಾಂಪ್ ವೆಂಡರ್ ನೀಡಿರುವ ಮೂರು ರೂಪಾಯಿ ಮುಖಬೆಲೆಯ ಸ್ಟಾಂಪ್ ಪೇಪರ್ ನಲ್ಲಿ ಈ ಅಫಿಡವಿಟ್ ಮುದ್ರಿತವಾಗಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former CM of Tamil Nadu J Jayalalithaa and Actor Shobhan Babu's marriage registration and adoption paper dates 15.2.1985 goes viral on Social media. This affidavit claims couple had a baby boy and Vasanthmani adopted the baby.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ