ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಹಂತದ ಲಸಿಕೆ ಪ್ರಯೋಗಕ್ಕೆ ಭಾರತದ ಅನುಮತಿ ಕೇಳಿದ ಜಾನ್ಸನ್ ಆಂಡ್ ಜಾನ್ಸನ್

|
Google Oneindia Kannada News

ನವದೆಹಲಿ, ಏಪ್ರಿಲ್ 20: ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯು ಭಾರತ ಸರ್ಕಾರದ ಬಳಿ ಮನವಿ ಮಾಡಿ, ತಮ್ಮ ಲಸಿಕೆಯನ್ನು ಕೊರೊನಾ ಸೋಂಕಿತರಿಗೆ ನೀಡಲು ಅನುಮತಿ ನೀಡುವಂತೆ ಕೇಳಿದೆ.

ಕೊರೊನಾ ಸೋಂಕು ಕಡಿಮೆ ಮಾಡಲು ಈಗಿರುವ ಕೊರೊನಾ ಲಸಿಕೆಗಳ ಎರಡು ಡೋಸ್‌ಗಳನ್ನು ನೀಡಬೇಕಾಗುತ್ತದೆ. ಆದರೆ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯ ಲಸಿಕೆಯ ಒಂದೇ ಡೋಸ್‌ನಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!ಕೊರೊನಾ ಮೊದಲ ಹಾಗೂ 2ನೇ ಅಲೆ ಲಕ್ಷಣಗಳ ನಡುವಿನ ವ್ಯತ್ಯಾಸ ಹೀಗಿದೆ!

ಭಾರತದಲ್ಲಿ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡಬೇಕು, ಬಳಿಕ ಲಸಿಕೆಗೆ ರಪವಾನಗಿ ನೀಡುವಂತೆ ಕೇಳಿದೆ.ಶೀಘ್ರವೇ ಈ ಕುರಿತು ತಜ್ಞರ ಸಮಿತಿ ಮಾತುಕತೆ ನಡೆಸಲಿದೆ, ಕೇಂದ್ರ ಸರ್ಕಾರವು ವಿದೇಶಿ ನಿರ್ಮಿತ ಎಲ್ಲಾ ಕೊರೊನಾ ಲಸಿಕೆಗಳಿಗೂ ತುರ್ತು ಅನುಮತಿ ನೀಡಬೇಕು ಎಂದು ಹೇಳಿತ್ತು. ಇದಾದ ಬಳಿಕ ಈ ಬೆಳವಣಿಗೆ ನಡೆದಿದೆ.

J&J Seeks Indias Permission For Phase 3 Trial Of 1-Shot Vaccine: Report

ಸೋಮವಾರ ಜಾನ್ಸನ್ ಆಂಡ್ ಜಾನ್ಸನ್ ಮತ್ತೆ ಅರ್ಜಿ ಸಲ್ಲಿಕೆ ಮಾಡಿದೆ. ಈ ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಶೇಖರಿಸಿಡಬೇಕು. ದೇಶದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್‌ ಹಾಗೂ ಸ್ಪುಟ್ನಿಕ್ V ಲಸಿಕೆಗಳಿಗೆ ಅನುಮತಿ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 259170 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಂದೇ ದಿನ 1,761 ಮಂದಿ ಪ್ರಾಣ ಬಿಟ್ಟಿದ್ದು, 1,54,761 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Multinational pharma giant Johnson & Johnson has applied to India's drug regulator seeking permission to conduct phase-3 clinical trial of its single-dose COVID-19 vaccine in India as well as import licence, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X