ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಯಲ್ಲೂ ದೇಶಪ್ರೇಮ ಮೆರೆದ ಸೈನಿಕರಿಗೆ ಮೆಚ್ಚುಗೆ ಮಹಾಪುರ

By Manjunatha
|
Google Oneindia Kannada News

ಕೊರೆಯುವ ಮೈನಸ್ 30 ಡಿಗ್ರಿ ಚಳಿಯಲ್ಲಿ ಹಿಮಾಲಯದ 18000 ಅಡಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ ಇಂಡೊ ಟಿಬೆಟಿಯನ್ ಬಾರ್ಡರ್‌ ಪೊಲೀಸ್ ಪಡೆಗೆ ದೇಶದಾದ್ಯಂತ ಮೆಚ್ಚುಗೆಗಳ ಮಹಾಪೂರ ಹರಿದು ಬರುತ್ತಿದೆ.

ಗಣರಾಜ್ಯೋತ್ಸವ ಅಂಗವಾಗಿ ಇಂಡೊ ಟಿಬೇಟಿಯನ್ ಗಡಿಯ ಪೊಲೀಸ್ ಪಡೆಯ ತುಕಡಿಯೊಂದು ನೀರು ಹೆಪ್ಪುಗಟ್ಟುವ ಚಳಿಯ ವಾತಾವರಣದಲ್ಲೂ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದೆ, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆಗಳು ಕೇಳಿ ಬಂದಿವೆ.

ಪಾಕಿಸ್ತಾನಕ್ಕೆ ಗಣರಾಜ್ಯೋತ್ಸವ ಸಿಹಿ ಹಂಚದ ಬಿಎಸ್‌ಎಫ್ಪಾಕಿಸ್ತಾನಕ್ಕೆ ಗಣರಾಜ್ಯೋತ್ಸವ ಸಿಹಿ ಹಂಚದ ಬಿಎಸ್‌ಎಫ್

ಗಣರಾಜ್ಯೋತ್ಸವ ಅಂಗವಾಗಿ ಭಾರತೀಯ ಸೇನೆಯು ದೆಹಲಿಯ ಪೆರೆಡ್‌ನಲ್ಲಿ ತನ್ನ ವೈವಿಧ್ಯತೆ, ಶಕ್ತಿ, ಶಿಸ್ತುಗಳ ಪ್ರದರ್ಶನ ಮಾಡುತ್ತಿದ್ದರೆ, ಗಡಿಯಲ್ಲಿ ಸೇನೆಯು ತನ್ನ ನಿಜ ಸಾಮರ್ಥ್ಯ, ದೇಶಪ್ರೇಮವನ್ನು ಇಂಡೊ ಟಿಬೆಟಿಯನ್ ಸೇನೆಯು ತೋರಿದೆ.

ITBP soldiers raise tricolor at 18000 feet

ಐಟಿಬಿಪಿ (ಡೊ ಟಿಬೇಟಿಯನ್ ಗಡಿಯ ಪೊಲೀಸ್ ಪಡೆ)ಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಸಾವಿರಾರು ಜನರು ಲೈಕ್ ಹಾಗೂ ಶೇರ್ ಮಾಡಿದ್ದಾರೆ.

English summary
Indo-Tibetan Border Police (ITBP) today received praise after they posted a video showing their jawans marching on ice-laden Himalayas with National Flag on the occasion of 69th Republic Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X