ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಳ್ ಸುದ್ದಿ ಹರಡಿಸುವ 22 ಯುಟ್ಯೂಬ್ ಸುದ್ದಿ ಚಾನೆಲ್ ಮೇಲೆ ನಿರ್ಬಂಧ

|
Google Oneindia Kannada News

ನವದೆಹಲಿ, ಏಪ್ರಿಲ್ 5: ಭಾರತೀಯ ಭದ್ರತಾ ವ್ಯವಸ್ಥೆಯ ಕುರಿತು ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ ಒಟ್ಟು 22 ಯುಟ್ಯೂಬ್ ಚಾನೆಲ್ ಅನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ನಿರ್ಬಂಧಿಸಿದೆ. ಈ ಪೈಕಿ 4 ಯುಟ್ಯೂಬ್ ಚಾನೆಲ್ಸ್ ಪಾಕಿಸ್ತಾನದವು ಎಂದು ತಿಳಿದು ಬಂದಿದೆ.

ಐಟಿ ನಿಯಮಗಳು, 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸುವಾಗ ಸಚಿವಾಲಯವು 22 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಕಳೆದ ಏಪ್ರಿಲ್ 4ರಂದು ಆದೇಶ ಹೊರಡಿಸಿದೆ. ಮೂರು Twitter ಖಾತೆಗಳು, ಒಂದು Facebook ಖಾತೆ ಮತ್ತು ಒಂದು ಸುದ್ದಿ ವೆಬ್‌ಸೈಟ್ ಕೂಡ ಅದರಲ್ಲಿ ಸೇರಿವೆ.

ಸುದ್ದಿವಾಹಿನಿಗಳ ಎಗ್ಗಿಲ್ಲದ ಪ್ರಸಾರ: ದೂರು ನೀಡಲು ಇಲ್ಲಿದೆ ಅವಕಾಶ ಸುದ್ದಿವಾಹಿನಿಗಳ ಎಗ್ಗಿಲ್ಲದ ಪ್ರಸಾರ: ದೂರು ನೀಡಲು ಇಲ್ಲಿದೆ ಅವಕಾಶ

ಸೋಮವಾರ ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳು 260 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದವು. ಈ ಚಾನೆಲ್ಸ್ ಅನ್ನು ನಕಲಿ ಸುದ್ದಿಗಳನ್ನು ಹರಡುವುದಕ್ಕಾಗಿಯೇ ಬಳಸಲಾಗುತ್ತಿತ್ತು ಎಂದು ದೂಷಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯನ್ನು ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

IT Ministry blocks 18 Indian, 4 Pakistani YouTube channels, which promote Anti India propaganda

ಯುಟ್ಯೂಬ್ ಚಾನೆಲ್ಸ್ ಮೇಲೆ ಮೊದಲ ಬಾರಿ ಕ್ರಮ:

ಕಳೆದ ವರ್ಷ ಫೆಬ್ರವರಿಯಲ್ಲಿ ಐಟಿ ನಿಯಮಗಳು, 2021ರ ಅಧಿಸೂಚನೆಯನ್ನು ಹೊರಡಿಸಿದ ನಂತರದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್ಸ್ ಮೇಲೆ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆ ಮೂಲಕ ಒಂದೇ ಬಾರಿಗೆ ಭಾರತದ 18 ಹಾಗೂ ಪಾಕಿಸ್ತಾನದ 4 ಯುಟ್ಯೂಬ್ ಸುದ್ದಿ ಚಾನೆಲ್ ಅನ್ನು ನಿರ್ಬಂಧಿಸಲಾಗಿದೆ.

IT Ministry blocks 18 Indian, 4 Pakistani YouTube channels, which promote Anti India propaganda

ಪಾಕಿಸ್ತಾನದಿಂದ ಸಂಘಟಿತ ರೀತಿಯಲ್ಲಿ ಸುದ್ದಿ:

ಜಮ್ಮು ಕಾಶ್ಮೀರ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಹಾಗೂ ಮುಂತಾದ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಈ YouTube ಚಾನಲ್‌ಗಳನ್ನು ಬಳಸಲಾಗಿದೆ. ಪಾಕಿಸ್ತಾನದಿಂದ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪೋಸ್ಟ್ ಮಾಡಲಾದ ಕೆಲವು ಭಾರತ-ವಿರೋಧಿ ವಿಷಯವನ್ನು ನಿರ್ಬಂಧಿಸಲು ಇದೀಗ ಆದೇಶ ಹೊರಡಿಸಲಾಗಿದೆ.

IT Ministry blocks 18 Indian, 4 Pakistani YouTube channels, which promote Anti India propaganda

ಅಂತಾರಾಷ್ಟ್ರೀಯ ಸಂಬಂಧ ಹಾಳುಗೆಡವುವ ಹುನ್ನಾರ:

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಗೆ ಸಂಬಂಧಿಸಿದಂತೆ ಈ ನಿರ್ಬಂಧಿತ ಭಾರತೀಯ ಯೂಟ್ಯೂಬ್ ಆಧಾರಿತ ಚಾನೆಲ್‌ಗಳು ಅತಿಹೆಚ್ಚು ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದವು ಎಂದು ತಿಳಿದು ಬಂದಿದೆ. ಅಲ್ಲದೇ, ಭಾರತ ಮತ್ತು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ಉಂಟು ಮಾಡುವ ದುರುದ್ದೇಶವನ್ನು ಹೊಂದಿರುವುದು ನಕಲಿ ಸುದ್ದಿಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ.

ಭಾರತ-ವಿರೋಧಿ ಸುದ್ದಿಗಳ ಮೂಲವೇ ಪಾಕ್ ಚಾನೆಲ್‌ಗಳು:

ಐಟಿ ಸಚಿವಾಲಯದಿಂದ ನಿರ್ಬಂಧಿಸಲಾದ ಭಾರತೀಯ ಯೂಟ್ಯೂಬ್ ಚಾನೆಲ್‌ಗಳು ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೇ ಕೆಲವು ಟಿವಿ ನ್ಯೂಸ್ ಚಾನೆಲ್‌ಗಳ ಟೆಂಪ್ಲೇಟ್‌ಗಳು ಮತ್ತು ಲೋಗೋಗಳನ್ನು ಬಳಸುತ್ತಿದ್ದವು. ಇದರ ಜೊತೆಗೆ ತಪ್ಪು ತಪ್ಪು ಥಂಬ್‌ನೇಲ್‌ಗಳನ್ನು ಬಳಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಷಯದ ವೈರಲ್ ಮಾಡುವುದಕ್ಕಾಗಿ ವಿಶೇಷ ಟೈಟಲ್ ಅನ್ನು ನೀಡಲಾಗಿದೆ. ಈ ಪೈಕಿ ಕೆಲವು ಯುಟ್ಯೂಬ್ ಚಾನೆಲ್‌ಗಳು ವಿಶೇಷವಾಗಿ ಭಾರತೀಯ ವಿರೋಧಿ ಸುದ್ದಿಗಳನ್ನು ಹುಟ್ಟು ಹಾಕಿರುವ ಚಾನೆಲ್‌ಗಳ ಮೂಲವೇ ಪಾಕಿಸ್ತಾನ ಎಂಬುದು ಗೊತ್ತಾಗಿದೆ.

ಒಟ್ಟು 78 ಯೂಟ್ಯೂಬ್ ಆಧಾರಿತ ಸುದ್ದಿ ಚಾನಲ್‌ಗಳ ನಿರ್ಬಂಧ:

ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಭಾರತದ ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಳೆದ ಡಿಸೆಂಬರ್ 2021ರಿಂದ ಈವರೆಗೂ ಒಟ್ಟು 78 ಯೂಟ್ಯೂಬ್ ಆಧಾರಿತ ಸುದ್ದಿ ಚಾನಲ್‌ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಸಚಿವಾಲಯವು ನಿರ್ದೇಶನಗಳನ್ನು ನೀಡಿದೆ. ದೇಶದ ಅಧಿಕೃತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆನ್‌ಲೈನ್ ಸುದ್ದಿ ಮಾಧ್ಯಮಗಳನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ನಿಯಂತ್ರಿಸಲಾಗುವುದು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸ್ಪಷ್ಟಪಡಿಸಿದೆ.

ಐಟಿ ಸಚಿವಾಲಯ ನಿರ್ಬಂಧಿಸಿದ ಯುಟ್ಯೂಬ್ ಚಾನೆಲ್‌ಗಳು:

ಯುಟ್ಯೂಬ್ ಸುದ್ದಿ ಚಾನೆಲ್ ಹೆಸರು

1. ಎಆರ್ ಪಿ ನ್ಯೂಸ್

2. ಎಓಪಿ ನ್ಯೂಸ್

3. ಎಲ್ ಡಿಸಿ ನ್ಯೂಸ್

4. ಸರ್ಕಾರಿ ಬಾಬು

5. ಎಸ್ಎಸ್ ಝೋನ್ ಹಿಂದಿ

6. ಸ್ಮಾರ್ಟ್ ನ್ಯೂಸ್

7. ನ್ಯೂಸ್ 23 ಹಿಂದಿ

8. ಆನ್ ಲೈನ್ ಖಬರ್

9. ಡಿಪಿ ನ್ಯೂಸ್

10. ಪಿಕೆಬಿ ನ್ಯೂಸ್

11. ಕಿಸಾನ್ ತಕ್

12. ಬೋರಾನಾ ನ್ಯೂಸ್

13. ಸರ್ಕಾರಿ ನ್ಯೂಸ್ ಅಪ್ ಡೇಟ್

14. ಭಾರತ್ ಮೌಸಾಮ್

15. ಆರ್ ಜೆ ಝೋನ್ 6

16. ಎಕ್ಸಾಂ ರಿಪೋರ್ಟ್

17. ಡಿಜಿ ಗುರುಕುಲ

18. ದಿನಭರ್ ಕೀ ಖಬರೇ

19. ಗುಲಾಂ ನಬಿ ಮದ್ನಿ

20. ಹಖೀಖತ್ ಟಿವಿ

21. ದುನಿಯಾ ಮೇರಿ ಆಗಿ

22. ಹಖೀಖತ್ ಟಿವಿ 2.0

English summary
IT Ministry blocks 18 Indian, 4 Pakistani YouTube channels, which promote Anti India propaganda. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X