• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅತ್ತ ಗಡಿಯಲ್ಲಿ ಪರದಾಟ, ಇತ್ತ ಮೋದಿ ಪ್ರಚಾರ: ಟ್ವಿಟ್ಟರ್ ನಲ್ಲಿ ಲೇವಡಿ

|
   Surgical Strike 2: ಅತ್ತ ಗಡಿಯಲ್ಲಿ ಪರದಾಟ, ಇತ್ತ ಮೋದಿ ಪ್ರಚಾರ: ಟ್ವಿಟ್ಟರ್ ನಲ್ಲಿ ಲೇವಡಿ | Oneindia Kannada

   ನವದೆಹಲಿ, ಮಾರ್ಚ್ 01: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ತಲೆದೋರಿದ್ದು ಗಡಿಯಲ್ಲಿ ಶಾಂತಿ ಕಡಡಿದ್ದರೆ ಇತ್ತ ಪ್ರಧಾನಿ ಮೋದಿ, ''ಮೇರಾ ಬೂತ್ ಸಬ್ಸೆ ಮಜ್ಬೂತ್' ಎಂಬ ವಿಡೀಯೋ ಕಾನ್ಫಿರೆನ್ಸ್ ನಲ್ಲಿ ಚುನಾವಣೆಯ ಪ್ರಚಾರ ಮಾಡುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.

   ಒಂದೆಡೆ ಟ್ವಿಟ್ಟರ್ ನಲ್ಲಿ #MeraBoothSabseMazboot ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದರೆ, ಇನ್ನೊಂದೆಡೆ #MeraJawanSabseMajboot ಟ್ರೆಂಡಿಂಗ್ ಆಗಿದೆ. ಈ ಹ್ಯಾಶ್ ಟ್ಯಾಗ್ ಮೂಲಕ ಕೆಲವರು ಸೈನಿಕರ ದೇಶಪ್ರೇಮ, ತ್ಯಾಗವನ್ನು ನೆನೆದರೆ, ಮತ್ತಷ್ಟು ಜನ ಮೋದಿಯವರ ಕಾಲೆಳೆದಿದ್ದಾರೆ.

   ಪಾಕ್ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

   ಗುರುವಾರ 'ಮೇರಾ ಬೂತ್ ಸಬ್‌ಸೇ ಮಜಬೂತ್' ಎಂಬ ಆನ್‌ಲೈನ್ ಕಾನ್ಫರೆನ್ಸ್‌ನಲ್ಲಿ ಮೋದಿ ಅವರು ಕೋಟ್ಯಂತರ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದರು. ಇದು ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಭಾಗಿಯಾದ ವಿಡಿಯೋ ಕಾನ್ಫರೆನ್ಸ್‌ಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.

   ಮೋದಿಗೆ ಪ್ರಚಾರದ ಚಿಂತೆ...!

   ಇಡಿ ಭಾರತವೂ ವಾಯುಸೇನೆ ಪೈಲಟ್ ಅಭಿನಂದನ್ ಅವರು ಸುರಕ್ಷಿತವಾಗಿ ಹಿಂದಿರುಗಲಿ ಎಂದು ಪ್ರಾರ್ಥಿಸುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಆತಂಕದಲ್ಲಿರುವ ದೇಶವನ್ನು ಉದ್ದೇಶಿಸಿ ಒಂದು ಕ್ಷಣ ಮಾತನಾಡಲೂ ಸಮಯವಿಲ್ಲ. ಇಂಥ ನಡೆಯನ್ನು ಕ್ಷಮಿಸುವುದಕ್ಕಾಗುವುದಿಲ್ಲ. ನಾವು ಎಂದಿಗೂ ನಮ್ಮ ಸೈನಿಕರು ಮತ್ತು ಅವರ ಕುಟುಂಬದೊಂದಿಗಿದ್ದೇವೆ- ಎಸ್ ಎನ್ ಶರ್ಮಾ

   ವೈರಿಗಳು ತಡೆಯಲು ಯತ್ನಿಸುತ್ತಿದ್ದಾರೆ ಆದರೆ ನಾವು ಹೋರಾಡುತ್ತೇವೆ: ಮೋದಿ

   ಬಿಜೆಪಿಯವರು ಸೀಟು ಎಣಿಕೆಯಲ್ಲಿ ಬ್ಯುಸಿ!

   ಸದ್ಯ, ವಿಂಗ್ ಕಮಾಂಡರ್ ಅಭಿನಂದನ್ ಅವರು ನಾಳೆ ಸುರಕ್ಷಿತವಾಗಿ ಬಿಡುಗಡೆಯಾಗುತ್ತಿದ್ದಾರೆ. ಬಿಜೆಪಿ ಸೀಟು ಎಣಿಕೆಯಲ್ಲಿ ಬ್ಯುಸಿಯಾಗಿದ್ದರೆ, ನಾವು ಉಳಿದೆಲ್ಲ ಭಾರತೀಯರೂ ಅಭಿನಂದನ್ ಎಷ್ಟು ಗಂಟೆಗೆ ಬಿಡುಗಡೆಯಾಗಿ ಬರುತ್ತಾರೆ ಎಂದು ಕ್ಷಣಗಣನೇ ಮಾಡುತ್ತಿದ್ದೇವೆ- ಅಶ್ವಿನ್ ಎ ಕುಮಾರ್

   ಇದು ದೇಶವನ್ನುದ್ದೇಶಿಸಿ ಮಾತನಾಡುವ ಸಮಯ!

   ಮೋದಿಯವರೇ, ಇದು ನಮ್ಮ ದೇಶವನ್ನುದ್ದೇಶಿಸಿ ಮಾತನಾಡುವ ಸಮಯ. ಪಕ್ಷದ ಕಾರ್ಯಕರ್ತರನ್ನಲ್ಲ. ನೀವು ನಿಮ್ಮ ಹುದ್ದೆಗೆ ಅವಮಾನ ಮಾಡುತ್ತಿದ್ದೀರಿ- ಸಚಿನ್ ಟಂಡನ್

   ನೀವೇ ರಾಜಕೀಯ ಮಾಡುತ್ತಿದ್ದೀರಿ!

   ಗಡಿಯ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂಡು ನಿಮ್ಮದೇ ಪಕ್ಷದವರು ಹೇಳಿ, ಈಗ ನೀವೇ ರಾಜಕೀಯ ಆಡುತ್ತಿದ್ದೀರಿ. ಅದನ್ನು ನಿಮ್ಮ ಪೋಸ್ಟರ್ ಗಳಲ್ಲಿ ಬಳಸಿಕೊಂಡು ಅದಕ್ಕಾಗಿ ಹಣ ವೆಚ್ಚ ಮಾಡುತ್ತಿದ್ದೀರಿ-ಅಂಕಿತ್ ಲಾಲ್

   English summary
   With MeraBoothSabseMazboot programme Prime minister Narendra Modi address'es crores of BJP workers through video conference, Twitterians condemns Modi with #MeraJawanSabseMajboot hastag.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X