ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಸೇವಾಶುಲ್ಕ ಕಾನೂನುಬಾಹಿರ: ಸರಕಾರ

|
Google Oneindia Kannada News

ನವದೆಹಲಿ, ಜೂನ್ 2: ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಿಲ್‌ ಮೇಲೆ 'ಸೇವಾ ಶುಲ್ಕ' ವಿಧಿಸದಂತೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದ್ದು, 'ಸೇವಾ ಶುಲ್ಕ' ವಿಧಿಸುವುದನ್ನು ಅಕ್ರಮ ಎಂದು ಹೇಳಿದೆ.

ಶೀಘ್ರದಲ್ಲೀ ಈ ಕುರಿತು ಸಂವಿಧಾನಾತ್ಮಕವಾಗಿ ಕಾನೂನು ರೂಪಿಸಲಾಗುವುದು ಎಂದು ಅದು ಹೇಳಿದೆ. ರೆಸ್ಟೋರೆಂಟ್‌ಗಳಲ್ಲಿ ಶುಲ್ಕ ವಿಧಿಸುವುದನ್ನು ತಪ್ಪಿಸುವದರ ಜೊತೆಗೆ ಗ್ರಾಹಕರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಗ್ರಾಹಕರಿಗೆ ಸಿಹಿಸುದ್ದಿ ಕೊಟ್ಟ ಹುಬ್ಬಳ್ಳಿ ಹೋಟೆಲ್ ಉದ್ಯಮಿಗಳು! ಗ್ರಾಹಕರಿಗೆ ಸಿಹಿಸುದ್ದಿ ಕೊಟ್ಟ ಹುಬ್ಬಳ್ಳಿ ಹೋಟೆಲ್ ಉದ್ಯಮಿಗಳು!

ಗ್ರಾಹಕ ವ್ಯವಹಾರಗಳ ಇಲಾಖೆ (DoCA) ರೆಸ್ಟೋರೆಂಟ್ ಬಿಲ್‌ಗಳ ಮೇಲಿನ ಸೇವಾ ಶುಲ್ಕ ವಿಧಿಸುವ ವಿಚಾರವಾಗಿ ಚರ್ಚೆ ನಡೆಸಲು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FHRAI) ಜೊತೆ ಗುರುವಾರ ಸಭೆ ನಡೆಸಿದೆ.

It is Illegal To Charge For Service With Bill In Hotels And Restaurants : Government

ಎಫ್‌ಹೆಚ್‌ಆರ್ ‌ಎಐ ಈ ಕುರಿತು ಸ್ಪಷ್ಟೀಕರಣ ನೀಡಿದ್ದು, ಆಡುಮಾತಿನಲ್ಲಿ 'ಟಿಪ್ಸ್' ಎಂದು ಕರೆಯಲ್ಪಡುವ ಸೇವಾ ಶುಲ್ಕ ರೆಸ್ಟೋರೆಂಟ್ ಅಥವಾ ಹೋಟೆಲ್‌ಗಳ ಸಿಬ್ಬಂದಿಗೆ ಗ್ರಾಹಕರು ಪಾವತಿಸುವ ಮೊತ್ತವಾಗಿದೆ ಎಂದು ಹೇಳಿದೆ. ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ತಮ್ಮ ಗ್ರಾಹಕರಿಗೆ ಬಿಲ್ ಆಧಾರದ ಮೇಲೆ ಶೇಕಡಾವರು 'ಸೇವಾ ಶುಲ್ಕ' ವಿಧಿಸುತ್ತವೆ.

ಸೇವಾ ಶುಲ್ಕ ಕಾನೂನು ಬಾಹಿರವಲ್ಲ; "ಸೇವಾ ಶುಲ್ಕವನ್ನು ವಿಧಿಸುವುದು ಕಾನೂನಿನ ಉಲ್ಲಂಘನೆಯಲ್ಲ, ಸೇವಾ ಶುಲ್ಕ ಹೋಟೆಲ್ ಅಥವಾ ರೆಸ್ಟೋರೆಂಟ್ ಸಿಬ್ಬಂದಿಗೆ ಪ್ರಯೋಜನಕಾರಿ ಮೊತ್ತವಾಗಿದೆ. ಕೆಲವು ಸಂಸ್ಥೆಗಳು ತನ್ನ ಸಿಬ್ಬಂದಿಗೆ ಸೇವಾ ಶುಲ್ಕದಲ್ಲಿ ಪಾಲು ನೀಡುವ ಆಯ್ಕೆಯನ್ನು ನೀಡಿರುತ್ತವೆ. ಇದು ಅಕ್ರಮ ಅಲ್ಲ, ಸೇವಾ ಶುಲ್ಕ ವಿಧಿಸುವುದು ಕಾನೂನು ಉಲ್ಲಂಘನೆಯಾಗದು" ಎಂದು ಎಫ್‌ಹೆಚ್‌ಆರ್ ಎಐ ಉಪಾಧ್ಯಕ್ಷ ಗುರುಭಕ್ಷೀಸ್ ಸಿಂಗ್ ಕೊಹ್ಲಿ ಹೇಳಿದ್ದಾರೆ.

ಹೋಟೆಲ್‌ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ಕಾನೂನು ಏನಿದೆ? ಹೋಟೆಲ್‌ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ಕಾನೂನು ಏನಿದೆ?

ಎಫ್‌ಹೆಚ್‌ಆರ್ ‌ಎಐ ಜಂಟಿ ಗೌರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಮಾತನಾಡಿ, "ಸೇವಾ ಶುಲ್ಕವನ್ನು ವಿಧಿಸಬೇಕೆ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ರೆಸ್ಟೋರೆಂಟ್‌ಗಳ ವಿವೇಚನೆಯಾಗಿದೆ. ಅತಿಥಿಗಳು ಸೇವಾ ಶುಲ್ಕವನ್ನು ಪಾವತಿಸಲು ನಿರಾಕರಿಸಿದರೆ ಅಥವಾ ಆಕ್ಷೇಪ ವ್ಯಕ್ತಪಡಿಸಿದರೆ ಸೇವಾಶುಲ್ಕವನ್ನು ಬಿಲ್‌ನಿಂದ ತೆಗೆದುಹಾಕುವ ಅವಕಾಶ ಇದೆ" ಎಂದು ಹೇಳಿದ್ದಾರೆ.

It is Illegal To Charge For Service With Bill In Hotels And Restaurants : Government

ಹೋಟೆಲ್, ರೆಸ್ಟೋರೆಂಟ್ ಮಾತ್ರವಲ್ಲದೆ ಇತರೆ ಕ್ಷೇತ್ರಗಳ ಸೇವಾ ಪೂರೈಕೆದಾರರು ಕೂಡ ಗ್ರಾಹಕರಿಗೆ ಸೇವೆಗಳನ್ನು ನೀಡಲು 'ಅನುಕೂಲಕರ ಶುಲ್ಕ' (convenience fee) ವಿಧಿಸುವುದು ಸಾಮಾನ್ಯವಾಗಿದೆ ಎಂದು ಪ್ರದೀಪ್ ಶೆಟ್ಟಿ ಹೇಳಿದರು.

ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ರೈಲು, ವಿಮಾನ ಟಿಕೆಟ್ ಕಾಯ್ದಿರಿಸಲು ಕೂಡ ಸೇವಾ ಶುಲ್ಕ ವಿಧಿಸಲಾಗುತ್ತದೆ. ಮಾತ್ರವಲ್ಲದೆ ಆಹಾರ ಡೆಲಿವರಿ ಮಾಡುವ ಸಂಸ್ಥೆಗಳು ಕೂಡ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಆರ್ಡರ್ ಮಾಡಿದ ಗ್ರಾಹಕರಿಗೆ ಸೇವಾಶುಲ್ಕ ವಿಧಿಸುತ್ತವೆ. ಆನ್‌ಲೈನ್ ಮೂಲಕ ಸಿನಿಮಾ ಟಿಕೆಟ್ ಕಾಯ್ದಿರಸಲು ಕೂಡ ಸೇವಾ ಶುಲ್ಕ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.

English summary
The Ministry of Consumer Affairs has issued a no-service charge on the bill for hotels and restaurants, saying the 'service charge' is illegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X