ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ

|
Google Oneindia Kannada News

ಮಧ್ಯಮ ವರ್ಗದವರ ಓಲೈಕೆ ಮಾಡಲು ಮುಂದಾಗಿರುವಂತೆ ಕಾಣುತ್ತಿರುವ ಕೇಂದ್ರ ಸರಕಾರವು ಈ ಬಾರಿ ವೇತನದಾರರಿಗೆ ಭಾರೀ ಸಿಹಿ ಸುದ್ದಿ ಕೊಡಲು ಮುಂದಾಗಿದೆ ಎಂಬ ಮಾತು ಹರಿದಾಡುತ್ತಿದೆ. ಅದೇನಪ್ಪಾ ಅಂದರೆ, ಈ ವರೆಗೆ ಇರುವ ಆದಾಯ ತೆರಿಗೆ ಮಿತಿ 2.5 ಲಕ್ಷ ರುಪಾಯಿಯನ್ನು ದುಪ್ಪಟ್ಟು ಮೊತ್ತ ಅಂದರೆ 5 ಲಕ್ಷಕ್ಕೆ ಏರಿಸುತ್ತಾರೆ ಎಂಬ ಮಾತಿದೆ.

ಅಷ್ಟೇ ಅಲ್ಲ, ವೈದ್ಯಕೀಯ ವೆಚ್ಚ, ಸಂಚಾರ ಭತ್ಯೆಯ ಮೇಲಿನ ತೆರಿಗೆ ಕೂಡ ತೆಗೆದುಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತವಾಗಿ ಗೊತ್ತಾಗಬೇಕು ಅಂದರೆ ಫೆಬ್ರವರಿ ಒಂದರಂದು ಕೇಂದ್ರ ಸರಕಾರ ಮಂಡಿಸಲಿರುವ ಮಧ್ಯಂತರ ಬಜೆಟ್ ತನಕ ಕಾಯಬೇಕು. ಏಕೆಂದರೆ ಇದು ಲೋಕಸಭೆ ಚುನಾವಣೆ ನಡೆಯುವ ವರ್ಷವಾದ್ದರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಿಲ್ಲ.

IT exemption limit may go up to 5 lakh per year in interim union budget

ಸದ್ಯಕ್ಕೆ 2.5 ಲಕ್ಷ ರುಪಾಯಿ ತನಕ ಆದಾಯ ಇರುವವರಿಗೆ ತೆರಿಗೆ ಕಟ್ಟುವ ಅಗತ್ಯ ಇಲ್ಲ. ಕೃಷಿ ವಲಯದಲ್ಲಿನ ಸಮಸ್ಯೆ, ಮಧ್ಯಮ ವರ್ಗದವರ ಆಕ್ರೋಶ, ನಿರುದ್ಯೋಗ ಸಮಸ್ಯೆ, ದಲಿತರ ಸಿಟ್ಟು ಬಿಜೆಪಿ ವಿರುದ್ಧ ಹೆಚ್ಚಾಗುತ್ತಲೇ ಇವೆ. ಸಿಟ್ಟನ್ನು ತಮನಿ ಮಾಡುವ ದೊಡ್ಡ ಹೆಜ್ಜೆಯ ಯಾದಿಯಲ್ಲಿ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿಯನ್ನು ಕೇಂದ್ರವು ಈಚೆಗೆ ಜಾರಿಗೆ ತಂದಿದೆ.

ಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ, ಜಿಎಸ್ ಟಿ ಮಿತಿಯಲ್ಲಿ ಏರಿಕೆ: ಜೇಟ್ಲಿಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ, ಜಿಎಸ್ ಟಿ ಮಿತಿಯಲ್ಲಿ ಏರಿಕೆ: ಜೇಟ್ಲಿ

ವೈಯಕ್ತಿಕ ತೆರಿಗೆದಾರರಿಗೆ ಹಾಗೂ ಹಿಂದೂ ಅವಿಭಕ್ತ ಕುಟುಂಬಗಳಿಗೆ (ಅರವತ್ತು ವರ್ಷದೊಳಗಿನವರಿಗೆ) ಆರ್ಥಿಕ ವರ್ಷ 2018-19ನೇ ಸಾಲಿಗೆ

ಆದಾಯ ತೆರಿಗೆ ದರ ಹೀಗಿದೆ:

2,50,000* ತನಕ ಆದಾಯಕ್ಕೆ- ಯಾವುದೇ ತೆರಿಗೆ ಇಲ್ಲ

2,50,000ದಿಂದ 5,00,000- 5%

5,00,000ದಿಂದ 10,00,000- 20%

10,00,000 ಮೇಲ್ಪಟ್ಟ ಆದಾಯಕ್ಕೆ 30%

English summary
Finance Minister Arun Jaitley may double the income tax exemption threshold for the salaried from the present Rs 2.5 lakh to Rs 5 lakh while also reinstating tax-free status for medical expenses and transport allowance, providing some relief to the section already under strain since demonetisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X