ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದ 2018 ರ ಕಟ್ಟಕಡೆಯ ಉಪಗ್ರಹ ಇಂದು ಉಡಾವಣೆ

|
Google Oneindia Kannada News

ಶ್ರೀಹರಿಕೋಟ, ಡಿಸೆಂಬರ್ 19: ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಿ, ಭಾರತೀಯ ಸೇನೆಗೆ ನೆರವಾಗುವ ಜಿ ಸ್ಯಾಟ್-7 ಎ ಉಪಗ್ರಹವನ್ನು ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಇಂದು ಉಡ್ಡಯನ ಮಾಡಲಿದೆ.

ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಗರಿಯನ್ನು ನೀಡಲಿರುವ ಈ ಉಪಗ್ರಹವನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಉಡ್ಡಯನ ಮಾಡಲಾಗುತ್ತಿದೆ.

ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ! ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!

ಇಂದು ಸಂಜೆ 4.10 ಕ್ಕೆ ಉಪಗ್ರಹ ಉಡಾವಣೆಯಾಗಲಿದ್ದು, ಇದು ಇಸ್ರೋ ಉಡಾವಣೆ ಮಾಡುತ್ತಿರುವ 2018 ರ ಕೊಟ್ಟಕೊನೆಯ ಉಪಗ್ರಹವಾಗಿದೆ.

ISROs last satellite of 2018, GSAT-7A to launch today

ಈ ಉಪಗ್ರಹವು 2,250 ಕೆ.ಜಿ ತೂಕದ ಈ ಉಪಗ್ರಹವನ್ನು ಜಿಎಸ್ ಎಲ್‌ವಿ-ಎಫ್‌11 ರಾಕೆಟ್‌ ಮೂಲಕ ಅಂತರಿಕ್ಷಕ್ಕೆ ಕಳಿಸಲಾಗುತ್ತಿದೆ.

ಅತಿ ತೂಕದ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು ಗೊತ್ತೇ? ಅತಿ ತೂಕದ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು ಗೊತ್ತೇ?

ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಲಿರುವ ಈ ಉಪಗ್ರಹವು ಗ್ರಾಹಕರಿಗೆ ಕ್ಯು ಬ್ಯಾಂಡ್ ಸೇವೆ ನೀಡಲು ನೆರವಾಗಲಿದೆ.

ISROs last satellite of 2018, GSAT-7A to launch today

ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು!ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು!

ಇತ್ತೀಚೆಗಷ್ಟೇ, ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಬಲ್ಲ ಜಿಸ್ಯಾಟ್ 11 ಉಪಗ್ರಹವನ್ನು ಫ್ರಾನ್ಸ್ ನ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಉಡ್ಡಯನ ಮಾಡಲಾಗಿತ್ತು. ಇಸ್ರೋ ನಿರ್ಮಿಸಿದ ಈ ಉಪಗ್ರಹ ಭಾರತದ ಅತೀ ತೂಕ(5870 ಕೆಜಿ )ದ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

English summary
A communications satellite that will help connect all assets of the Indian Air Force and work as a force multiplier, will be launching by ISRO today. It will be the last satellite of 2018 by ISRO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X