ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕ್ರಮನ ಚಿತ್ರ ಕಳಿಸಿದ ನಾಸಾಕ್ಕೆ ಚುರುಕು ಮುಟ್ಟಿಸಿದ ಇಸ್ರೋ ಅಧ್ಯಕ್ಷ!

|
Google Oneindia Kannada News

ಜೈಪುರ್, ಡಿಸೆಂಬರ್ 4; ಮೂರು ತಿಂಗಳಿನ ಹಿಂದೆ ಪತನಗೊಂಡಿದ್ದ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ರ ವಿಕ್ರಮ್ ಲ್ಯಾಂಡರ್ ಪತ್ತೆಹಚ್ಚಿರುವ ವಿಷಯದಲ್ಲಿ ಭಾರತದ ಇಸ್ರೋ ಹಾಗೂ ಅಮೆರಿಕದ ನಾಸಾ ದ ನಡುವೆ ಮುಜುಗರ ಉಂಟಾಗುವ ಸನ್ನಿವೇಶ ಎದುರಾಗಿದೆ.

ವಿಕ್ರಮ್ ಲ್ಯಾಂಡರ್ ಪತ್ತೆಗೆ ನೆರವಾಗಿದ್ದು ಚೆನ್ನೈ ಟೆಕ್ಕಿವಿಕ್ರಮ್ ಲ್ಯಾಂಡರ್ ಪತ್ತೆಗೆ ನೆರವಾಗಿದ್ದು ಚೆನ್ನೈ ಟೆಕ್ಕಿ

ನಿನ್ನೆಯಷ್ಟೇ ನಾಸಾದ ವಿಜ್ಞಾನಿಯೊಬ್ಬರು, ಲ್ಯಾಂಡಿಂಗ್ ಸಮಯದಲ್ಲಿ ಚಂದ್ರನ ದಕ್ಷಿಣ ತುದಿಯಲ್ಲಿ ಸಂಪರ್ಕ ಕಳೆದುಕೊಂಡು ಪತನಗೊಂಡಿದ್ದ ವಿಕ್ರಮ್ ಲ್ಯಾಂಡರ್ ನ್ನು ಭಾರತದ ಟೆಕ್ಕಿಯೊಬ್ಬ ಸಹಾಯದಿಂದ ಸ್ಪಷ್ಟವಾಗಿ ಗುರುತಿಸಲಾಯಿತು ಎಂದು ಹೇಳಿದ್ದು, ಭಾರತದಲ್ಲಿ ಸಂಚಲನವನ್ನುಂಟು ಮಾಡಿತ್ತು. ಈ ಬಗ್ಗೆ ಇಂದು ರಾಜ್ತಸಾನದ ಕಿಶನಗರ್ ನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್, ನಾಸಾ ವಿಕ್ರಮ್ ಲ್ಯಾಂಡರ್ ನ್ನು ಗುರುತಿಸುವ ಮೊದಲು, ನಮ್ಮದೇ ಲುನಾರ್ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳವನ್ನು ಸ್ಪಷ್ಟವಾಗಿ ಗುರುತಿಸಿದೆ. ಇದನ್ನು ಬೇಕಾದರೆ ಇಸ್ರೋ ವೆಬ್‌ಸೈಟಿನಲ್ಲಿ ನೋಡಬಹುದು. ಚೆನ್ನೈ ಟೆಕ್ಕಿಯೊಬ್ಬರು ವಿಕ್ರಮ್ ಲ್ಯಾಂಡರ್ ಗುರುತಿಸಲು ಅದೇಗೆ ನಾಸಾಗೆ ಸಹಾಯ ಮಾಡಿದರೋ? ಗೊತ್ತಿಲ್ಲ ಎಂದು ಹೇಳಿದ್ದಾರೆ.

ISROs K Shivan Denied Chennai Techies Help

ನಿನ್ನೆಯಷ್ಟೇ ನಾಸಾದ ವಿಜ್ಞಾನಿಗಳು, ವಿಕ್ರಮ್ ಲ್ಯಾಂಡರ್ ಬಿದ್ದ ನಿಖರ ಸ್ಥಳ ಸಂಶೋಧನೆ ಬಗ್ಗೆ ಗೊಂದಲವುಂಟಾದಾಗ ಚೈನ್ನೈ ನ ಮೆಕಾನಿಕಲ್ ಇಂಜನಿಯರ್ ಷಣ್ಗುಗ ಸುಬ್ರಮಣಿಯನ್ ಅವರು ಕಳಿಸಿದ ಫೋಟೊ ವಿಶ್ಲೇಷಣೆಗಳು ಸ್ಥಳ ನಿಖರತೆಯನ್ನು ಕಂಡು ಹಿಡಿಯಲು ಸಹಾಯವಾಯಿತು ಎಂದು ಹೇಳಿದ್ದರು. ಇದು ಭಾರತದಲ್ಲಿ ಸಂಚಲವನ್ನುಂಟು ಮಾಡಿತ್ತು. ಇದೀಗ ಕೆ.ಶಿವನ್ ಅವರ ಹೇಳಿಕೆ ನಾಸಾಕ್ಕೆ ಮುಕುಗರವನ್ನುಂಟು ಮಾಡಿದೆ.

ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ ಹಿಡಿದ ನಾಸಾವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಚಿತ್ರ ಸೆರೆ ಹಿಡಿದ ನಾಸಾ

ಚಂದ್ರನ ದಕ್ಷಿಣ ದ್ರುವದ ಅಧ್ಯಯನಕ್ಕೆ ಭಾರತ ಚಂದ್ರಯಾನ 2 ನ್ನು ಕಳೆದ ಜುಲೈ 22 ರಂದು ಕೈಗೊಂಡಿತ್ತು. ಲುನಾರ್ ಆರ್ಬಿಟರ್ ನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದ ಇಸ್ರೋ, ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಸುವಲ್ಲಿ ವಿಫಲವಾಗಿತ್ತು.

English summary
Indian Space and Research Organization president K Shivan denied recent reports on wednesday about NASA helps chennai Techie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X