ಐತಿಹಾಸಿಕ ಮೈಲುಗಲ್ಲು, ಇಸ್ರೋದಿಂದ 100ನೇ ಉಪಗ್ರಹ ಉಡಾವಣೆ

Subscribe to Oneindia Kannada

ಬೆಂಗಳೂರು, ಜನವರಿ 10: ದೇಶದ ಬಾಹ್ಯಾಕಾಶ ಇತಿಹಾಸದ ಐತಿಹಾಸಿಕ ಸನ್ನಿವೇಶಕ್ಕ ಇಸ್ರೋ ಸಜ್ಜಾಗಿದೆ. ಇದೇ ಜನವರಿ 12ರಂದು ಇಸ್ರೋ ತನ್ನ 100ನೇ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಇದರ ಜತೆಗೆ ಇತರ 30 ಉಪಗ್ರಹಗಳನ್ನೂ ಅದು ಕಕ್ಷೆಗೆ ಸೇರಿಸಲಿದೆ.

ಕಳೆದ ಆಗಸ್ಟ್ ನಲ್ಲಿ ಇಸ್ರೋದ ಮಾರ್ಗದರ್ಶಿ ಉಪಗ್ರಹ IRNSS-1H ಉಡಾವಣೆ ವಿಫಲಗೊಂಡಿತ್ತು. ಉಡಾವಣಾ ವಾಹಕದ ವೈಫಲ್ಯದಿಂದ ಉಪಗ್ರಹ ಸಮುದ್ರ ಸೇರಿತ್ತು. ಹೀಗಾಗಿ ಈ ಉಡಾವಣೆಯನ್ನು 'ಮತ್ತೆ ಹಳಿಗೆ ಮರಳುವ ಪ್ರಕ್ರಿಯೆ' ಎಂದು ಇಸ್ರೋ ವ್ಯಾಖ್ಯಾನಿಸಿದೆ.

ಪಿಎಸ್ ಎಲ್ ವಿ-ಸಿ 38 ಉಡಾವಣೆ: ಇಸ್ರೋಕ್ಕೆ ಅಭಿನಂದನೆಯ ಮಹಾಪೂರ

'ಪಿಎಸ್ಎಲ್ ವಿ - ಸಿ40' ಉಡಾವಣಾ ವಾಹಕ ಹವಾಮಾನ ಸಂಬಂಧಿ ಮಾಹಿತಿ ನೀಡುವ ಕಾರ್ಟೋಸ್ಟಾಟ್-2 ಉಪಗ್ರಹ ಸಹಿತ 31 ಉಪಗ್ರಹಗಳನ್ನು ಹೊತ್ತು ನಭಕ್ಕೆ ಹಾರಲಿದೆ ಎಂದು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕ ಎಂ. ಅಣ್ಣಾದೊರೈ ಹೇಳಿದ್ದಾರೆ. ಕಾರ್ಟೋಸ್ಟಾಟ್ 710 ಕೆಜಿ ತೂಕವಿದೆ. ಉಳಿದ ಉಪಗ್ರಹಗಳು ಒಟ್ಟಾಗಿ 613 ಕೆಜಿ ಭಾರವಿದೆ.

ಸಂಕ್ರಾಂತಿ ವಿಶೇಷ ಪುಟ

ISRO will launch its 100th satellite on January 12

ಒಟ್ಟು 31 ಉಪಗ್ರಹಗಳಲ್ಲಿ ಮೂರು ಭಾರತದ್ದಾದರೆ, ಉಳಿದ 28 ವಿದೇಶಿ ಉಪಗ್ರಹಗಳಾಗಿವೆ. ಭಾರತದ ಮೂರು ಉಪಗ್ರಹಗಳಲ್ಲಿ ಒಂದು ಮೈಕ್ರೋ, ಮತ್ತೊಂದು ನ್ಯಾನೋ ಉಪಗ್ರಹವೂ ಸೇರಿದೆ. ಇನ್ನು ಕೆನಡಾ, ಫಿನ್ಲಂಡ್, ಫ್ರಾನ್ಸ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕಾಗೆ ಸೇರಿದ ಮೂರು ಮೈಕ್ರೋ ಮತ್ತು 25 ನ್ಯಾನೋ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಲಿದೆ. ಮೂರು ಉಗ್ರಹಗಳ ಉಡಾವಣೆಯೊಂದಿಗೆ ಒಟ್ಟಾರೆ ಭಾರತದ 100 ಉಪಗ್ರಹಗಳನ್ನು ಉಡಾಯಿಸಿದ ದಾಖಲೆಯನ್ನು ಇಸ್ರೋ ಬರೆಯಲಿದೆ.

ಜನವರಿ 12 ಶುಕ್ರವಾರ ಬೆಳಿಗ್ಗೆ 9.28ಕ್ಕೆ ಶ್ರೀಹರಿಕೋಟಾದ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆಯಾಗಲಿದೆ. ಇನ್ನು ಚಂದ್ರಯಾನ 2 ಅಂತಿಮ ಹಂತದಲ್ಲಿದ್ದು ಇದೇ ವರ್ಷದಲ್ಲಿ ಉಡಾವಣೆಯಾಗಲಿದೆ ಎಂದು ಅಣ್ಣಾದೊರೈ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ISRO will launch 100th Indian satellite along with 30 others in a single mission on January 12 from Sriharikota. This is a milestone event in the country's space history.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ