ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2ದ ಆರ್ಬಿಟರ್ ಯಶಸ್ವಿ ಕಾರ್ಯಾಚರಣೆ: ಇಸ್ರೋ

|
Google Oneindia Kannada News

Recommended Video

Chandrayaan 2 : ಚಂದ್ರಯಾನ-2ದ ಆರ್ಬಿಟರ್ ಯಶಸ್ವಿ ಕಾರ್ಯಾಚರಣೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 19: ಚಂದ್ರನ ಮೇಲೆ ಆರ್ಬಿಟರ್ ಇಳಿಸುವ ಪ್ರಯತ್ನದಲ್ಲಿ ಕೊನೆಯ ಕ್ಷಣದಲ್ಲಿ ವಿಫಲವಾದ ಬಳಿಕ ಇಸ್ರೋ ಯೋಜನೆಯ ಪ್ರಗತಿಯ ಬಗ್ಗೆ ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ. ವಿಕ್ರಂ ಲ್ಯಾಂಡರ್ ಎಲ್ಲಿದೆ ಎಂಬುದನ್ನು ಆರ್ಬಿಟರ್ ಕಂಡುಹಿಡಿದಿದೆ. ಆದರೆ ಲ್ಯಾಂಡರ್ ಜತೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಅದು ಸೆ. 10ರಂದು ತಿಳಿಸಿತ್ತು. ನಂತರ ಇದುವರೆಗೂ ಇಸ್ರೋ ವಿಕ್ರಂ ಲ್ಯಾಂಡರ್ ಬಗ್ಗೆಯಾಗಲೀ ಆರ್ಬಿಟರ್ ಕುರಿತಾಗಲೀ ಮಾಹಿತಿ ನೀಡಿರಲಿಲ್ಲ.

ಚಂದ್ರಯಾನದ ವಿಕ್ರಂ ಲ್ಯಾಂಡರ್ ಬಗ್ಗೆ ನಾಸಾ ತಿಳಿಸಿದ ಸಂಗತಿಚಂದ್ರಯಾನದ ವಿಕ್ರಂ ಲ್ಯಾಂಡರ್ ಬಗ್ಗೆ ನಾಸಾ ತಿಳಿಸಿದ ಸಂಗತಿ

ಈ ನಡುವೆ ಗುರುವಾರ ಇಸ್ರೋ ಆರ್ಬಿಟರ್ ಕುರಿತು ಕೆಲವು ವಿಷಯಗಳನ್ನು ಹಂಚಿಕೊಂಡಿದೆ. ಅದರಲ್ಲಿ ಹಲವು ಸಂತಸಪಡುವ ಸಂಗತಿಗಳಿವೆ. ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಇದುವರೆಗೂ ಇಸ್ರೋದೊಂದಿಗೆ ಮಾತನಾಡದೆ ಮೌನವಹಿಸಿದ್ದರೂ, ಆರ್ಬಿಟರ್ ತನ್ನ ನಂಟನ್ನು ಕಡಿದುಕೊಂಡಿಲ್ಲ. ಉದ್ದೇಶಿಸಿದಂತೆಯೇ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡುತ್ತಿರುವ ಆರ್ಬಿಟರ್, ಒಂದರಿಂದ ಏಳು ವರ್ಷದವರೆಗೂ ಅಲ್ಲಿ ಕಾರ್ಯನಿರ್ವಹಿಸಲಿದೆ. ಆರ್ಬಿಟರ್ ಕ್ಷೇಮವಾಗಿ ಮತ್ತು ತೃಪ್ತಿದಾಯಕವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಇಸ್ರೋ ಹೇಳಿದೆ. ಹೀಗಾಗಿ ಲ್ಯಾಂಡರ್ ವೈಫಲ್ಯವನ್ನು ಹೊರತುಪಡಿಸಿದರೆ ಚಂದ್ರಯಾನ-2 ಯೋಜನೆಯ ಭಾಗಶಃ ಯಶಸ್ವಿಯಾಗಿದೆ ಎಂದೇ ಹೇಳಬಹುದು.

ತೃಪ್ತಿಕರ ಕಾರ್ಯನಿರ್ವಹಣೆ

ತೃಪ್ತಿಕರ ಕಾರ್ಯನಿರ್ವಹಣೆ

ಚಂದ್ರನ ಸುತ್ತಲಿನ ತನ್ನ ಕಕ್ಷೆಯಲ್ಲಿ ಆರ್ಬಿಟರ್ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಇದರ ಮೂಲಕ ವಿಕ್ರಂ ಲ್ಯಾಂಡರ್ ಜತೆ ಪುನಃ ಸಂಪರ್ಕ ಸಾಧಿಸುವ ಕೊನೆಯ ಹಂತದ ಪ್ರಯತ್ನಗಳು ಬಹುತೇಕ ಕ್ಷೀಣಿಸುತ್ತಿವೆ ಎಂಬ ಸುಳಿವು ನೀಡಿದೆ. ಹಾಗಿದ್ದರೂ ಆರ್ಬಿಟರ್ ಚಂದ್ರನ ಮೇಲೆ ತನಗೆ ವಹಿಸಿರುವ ಅನೇಕ ಕಾರ್ಯಗಳನ್ನು ನಿರ್ವಹಿಸಲಿದೆ. ಇದರಿಂದ ಇಸ್ರೋ ಮಹತ್ವದ ಅಧ್ಯಯನಗಳನ್ನು ನಡೆಸಲು ನೆರವಾಗಲಿದೆ.

ಪೇಲೋಡ್‌ಗಳ ಪ್ರಯೋಗ ಯಶಸ್ವಿ

ಪೇಲೋಡ್‌ಗಳ ಪ್ರಯೋಗ ಯಶಸ್ವಿ

ಅರ್ಬಿಟರ್‌ನಲ್ಲಿರುವ ಎಲ್ಲ ಪೇಲೋಡ್‌ಗಳು ಚಾಲನೆ ಪಡೆದುಕೊಂಡಿವೆ. ಪೇಲೋಡ್‌ಗಳನ್ನು ಪರೀಕ್ಷಿಸುವ ಪ್ರಾರಂಭಿಕ ಪ್ರಯತ್ನಗಳು ನಡೆದಿದ್ದು, ಚಂದ್ರನ ಮೇಲೆ ಪ್ರಯೋಗಗಳನ್ನು ನಡೆಸುವ ಪರೀಕ್ಷಾರ್ಥ ಪ್ರಯೋಗಗಳು ಯಶಸ್ವಿಯಾಗಿವೆ. 'ಆರ್ಬಿಟರ್‌ನ ಎಲ್ಲ ಪೇಲೋಡ್‌ಗಳ ಪ್ರದರ್ಶನಗಳು ತೃಪ್ತಿದಾಯಕವಾಗಿವೆ' ಎಂದು ಇಸ್ರೋ ತಿಳಿಸಿದೆ.

ಉಳಿದಿರುವುದು ಮೂರೇ ದಿನ: ಇಸ್ರೋಗೆ ವಿಕ್ರಂ ಸಿಗದಿದ್ದರೆ ಏನಾಗುತ್ತದೆ?ಉಳಿದಿರುವುದು ಮೂರೇ ದಿನ: ಇಸ್ರೋಗೆ ವಿಕ್ರಂ ಸಿಗದಿದ್ದರೆ ಏನಾಗುತ್ತದೆ?

ಲ್ಯಾಂಡರ್ ಬಗ್ಗೆ ಸಮಿತಿಯ ಪರಾಮರ್ಶೆ

ಲ್ಯಾಂಡರ್ ಬಗ್ಗೆ ಸಮಿತಿಯ ಪರಾಮರ್ಶೆ

ವಿಕ್ರಂ ಲ್ಯಾಂಡರ್ ಬಗ್ಗೆ ಹೇಳಿರುವ ಇಸ್ರೋ, ಶಿಕ್ಷಣ ತಜ್ಞರು ಮತ್ತು ಇಸ್ರೋ ಪರಿಣತರನ್ನು ಒಳಗೊಂಡ 'ರಾಷ್ಟ್ರೀಯ ಮಟ್ಟದ ಸಮಿತಿ'ಯೊಂದು ಲ್ಯಾಂಡರ್ ಜತೆಗಿನ ಸಂವಹನ ಏಕೆ ಕಡಿತಗೊಂಡಿದೆ ಎಂಬುದಕ್ಕೆ ಕಾರಣಗಳನ್ನು ಪರಿಶೀಲಿಸುತ್ತಿದೆ ಎಂದಷ್ಟೇ ಮಾಹಿತಿ ನೀಡಿದೆ. ಆದರೆ ಲ್ಯಾಂಡರ್ ಸಂಪರ್ಕಕ್ಕೆ ಯಾವ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ತಿಳಿಸಿಲ್ಲ.

ವೈಜ್ಞಾನಿಕ ಪ್ರಯೋಗ ಮುಂದುವರಿಕೆ

ವೈಜ್ಞಾನಿಕ ಪ್ರಯೋಗ ಮುಂದುವರಿಕೆ

ಜತೆಗೆ ಆರ್ಬಿಟರ್ ತನ್ನ ಎಲ್ಲ ನಿಗದಿತ ವೈಜ್ಞಾನಿಕ ಪ್ರಯೋಗಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸುವ ಕಾರ್ಯದಲ್ಲಿ ಮುಂದುವರಿದಿದೆ ಎಂದು ಹೇಳಿದೆ. ಇಸ್ರೋ ನೀಡಿರುವ ಹೊಸ ಅಪ್ಡೇಟ್‌ಗಳಲ್ಲಿ ಲ್ಯಾಂಡರ್ ಸಂಪರ್ಕದ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಮಂಗಳವಾರ ಟ್ವೀಟ್ ಮಾಡಿದ್ದ ಇಸ್ರೋ, ತನಗೆ ಬೆಂಬಲ ನೀಡಿದ ಜನರಿಗೆ ಧನ್ಯವಾದ ಹೇಳಿತ್ತು. ಈ ಮೂಲಕ ಲ್ಯಾಂಡರ್ ಸಂಪರ್ಕ ಸಾಧ್ಯವಾಗುವುದು ಅಸಾಧ್ಯ ಎಂಬ ಸುಳಿವು ನೀಡಿತ್ತು ಎಂದು ವಿಶ್ಲೇಷಿಸಲಾಗಿದೆ.

'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್

ವಿಕ್ರಂ ಲ್ಯಾಂಡರ್ ಚಿತ್ರಕ್ಕೆ ನಾಸಾ ಪ್ರಯತ್ನ

ವಿಕ್ರಂ ಲ್ಯಾಂಡರ್ ಚಿತ್ರಕ್ಕೆ ನಾಸಾ ಪ್ರಯತ್ನ

ವಿಕ್ರಂ ಲ್ಯಾಂಡರ್ ಇಳಿದ ಸ್ಥಳದ ಚಿತ್ರವನ್ನು ತೆಗೆಯುವಲ್ಲಿ ನಾಸಾದ ಆರ್ಬಿಟರ್ ಯಶಸ್ವಿಯಾಗಿದೆ. ಆದರೆ ಅದರಲ್ಲಿ ವಿಕ್ರಂ ಮಾತ್ರ ಸೆರೆಯಾಗಿಲ್ಲ. ಮುಸ್ಸಂಜೆ ವೇಳೆಯಲ್ಲಿ ಆರ್ಬಿಟರ್ ಈ ಭಾಗದಲ್ಲಿ ಹಾದುಹೋಗಿದ್ದು, ಬೆಳಕಿನ ಕೊರತೆ ಮತ್ತು ಅನಾನುಕೂಲಕರ ವಾತಾವರಣದಿಂದಾಗಿ ಅದು ಉದ್ದೇಶಿತ ಕಾರ್ಯ ನಡೆಸುವುದು ಸಾಧ್ಯವಾಗಿಲ್ಲ. ಆದರೂ ಚಿತ್ರಗಳನ್ನು ಮತ್ತಷ್ಟು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ ಎಂದು ನಾಸಾ ತಿಳಿಸಿದೆ.

ಚಂದ್ರಯಾನಕ್ಕೆ ನೆರವಾಗುತ್ತಿರುವ ನಾಸಾದ ಈ ಆರ್ಬಿಟರ್ ಬಗ್ಗೆ ನಿಮಗೆಷ್ಟು ಗೊತ್ತು?ಚಂದ್ರಯಾನಕ್ಕೆ ನೆರವಾಗುತ್ತಿರುವ ನಾಸಾದ ಈ ಆರ್ಬಿಟರ್ ಬಗ್ಗೆ ನಿಮಗೆಷ್ಟು ಗೊತ್ತು?

English summary
ISRO said that, performance of all orbiter payloads is satisactory. A national level committee is analyzing the cause of communication loss with lander.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X