ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು!

|
Google Oneindia Kannada News

ಶ್ರೀಹರಿಕೋಟ(ಆಂಧ್ರಪ್ರದೇಶ), ನವೆಂಬರ್ 29: ಇಂಡಿಯನ್ ಅರ್ಥ್ ಮ್ಯಾಪಿಂಗ್ ಉಪಗ್ರಹ ಹಿಸಿಸ್(HysIS) ಮತ್ತು 8 ದೇಶಗಳ 30 ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್ ಎಲ್ ವಿ(ಪೊಲಾರ್ ಸಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಅನ್ನು ಇಂದು ಇಸ್ರೋ ಉಡ್ಡಯನ ಮಾಡಿದೆ.

2022ರ ವೇಳೆಗೆ ವಿದ್ಯಾರ್ಥಿ ನಿರ್ಮಿತ 75 ಉಪಗ್ರಹಗಳ ಉಡಾವಣೆ2022ರ ವೇಳೆಗೆ ವಿದ್ಯಾರ್ಥಿ ನಿರ್ಮಿತ 75 ಉಪಗ್ರಹಗಳ ಉಡಾವಣೆ

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಸುಮಾರು ಬೆಳಿಗ್ಗೆ 9.58 ರ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪಿಎಸ್ ಎಲ್ ವಿ ರಾಕೆಟ್ ಅನ್ನು ಯಶಸ್ವಿಯಾಗಿ ಉಡ್ಡಯನ ಮಾಡಿತು.

ಇಸ್ರೋದಿಂದ GSAT-29 ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ ಇಸ್ರೋದಿಂದ GSAT-29 ಸಂವಹನ ಉಪಗ್ರಹ ಯಶಸ್ವಿ ಉಡ್ಡಯನ

ಹಿಸಿಸ್ ಉಪಗ್ರಹವನ್ನು ಇಸ್ರೋ ಸಂಸ್ಥೆಯು ಅಭಿವೃದ್ಧಿ ಪಡಿಸಿದ್ದು, ಐದು ವರ್ಷಗಳ ಆಯುಷ್ಯವನ್ನು ಇದು ಪಡೆದಿದೆ. ಇದು ಪಿಎಸ್ ಎಲ್ ವಿ ಮಿಶನ್ ಸಿ-43 ರ ಪ್ರಾಥಮಿಕ ಉಪಗ್ರಹವಾಗಿದ್ದು, 380 ಕೆಜಿ ತೂಕವಿದೆ.

ISRO today launches Indian earth-mapping satellite into earths orbit

ಭೂಮಿಯ ಹೊರಮೇಲ್ಮೈ ಅನ್ನು ಅಭ್ಯಸಿಸುವ ಉದ್ದೇಶವನ್ನು ಈ ಉಪಗ್ರಹ ಹೊಂದಿದೆ.

ಇದೇ ಮೊದಲ ಬಾರಿಗೆ ಇಸ್ರೋದಿಂದ ರಾತ್ರಿ ವೇಳೆ ಉಪಗ್ರಹ ಉಡಾವಣೆಇದೇ ಮೊದಲ ಬಾರಿಗೆ ಇಸ್ರೋದಿಂದ ರಾತ್ರಿ ವೇಳೆ ಉಪಗ್ರಹ ಉಡಾವಣೆ

ಇದರೊಟ್ಟಿಗೆ ಒಟ್ಟು ಎಂಟು ದೇಶಗಳ 30 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿದ್ದು, ಇದರಲ್ಲಿ ಒಂದು ಮೈಕ್ರೋ ಮತ್ತು 29 ನ್ಯಾನೋ ಉಪಗ್ರಹಗಳು ಸೇರಿವೆ. ಅಮೆರಿಕದ 23 ಉಪಗ್ರಹಗಳು ಮತ್ತು ಆಸ್ಟ್ರೇಲಿಯಾ, ಕೆನಡಾ, ಕೋಲಂಬಿಯಾ, ಫಿನ್ ಲ್ಯಾಂಡ್, ಮಲೇಶಿಯಾ, ನೆಥರ್ಲೆಂಡ್, ಸ್ಪೇನ್ ಗೆ ಸೇರಿದ ಒಟ್ಟು 30 ಉಪಗ್ರಹಗಳನ್ನು ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.

ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಅತೀ ದೊಡ್ಡ ಮೈಲಿಗಲ್ಲು ಎನ್ನಿಸಿದೆ.

English summary
Andhra Pradesh: ISRO launches HysIS and 30 other satelites on PSLV-C43 from Satish Dhawan Space Centre in Sriharikota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X