ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇ ಮೊದಲ ಬಾರಿಗೆ ಇಸ್ರೋದಿಂದ ರಾತ್ರಿ ವೇಳೆ ಉಪಗ್ರಹ ಉಡಾವಣೆ

|
Google Oneindia Kannada News

ಶ್ರೀಹರಿಕೋಟಾ, ಸೆಪ್ಟೆಂಬರ್.16: ಇಸ್ರೋ ಇಂದು ರಾತ್ರಿ 10:30 ಕ್ಕೆ ಸರಿಯಾಗಿ ಮಹತ್ವದ ಉಪಗ್ರಹಗಳನ್ನು ಉಡಾವಣೆ ಮಾಡುವುದಕ್ಕೆ ಸಜ್ಜುಗೊಂಡಿದೆ. ಭೂ ವೀಕ್ಷಣೆಗಾಗಿ ಇರುವ ಬ್ರಿಟನ್ ನ ಎರಡು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಜವಾಬ್ದಾರಿಯನ್ನು ಇಸ್ರೋ ಹೊತ್ತುಕೊಂಡಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದ ಸೆಪ್ಟೆಂಬರ್ 16ರ ರಾತ್ರಿ 10:30ಕ್ಕೆ ನೋವಾಸರ್ ಮತ್ತು ಎಸ್ 1-4 ಉಡಾವಣೆ ಮಾಡಲಾಗುತ್ತದೆ.

ಮಾನವಸಹಿತ ಗಗನಯಾನ ಯೋಜನೆ: ಮತ್ತೊಂದು ಸಾಧನೆಗೆ ಇಸ್ರೋ ಸಜ್ಜುಮಾನವಸಹಿತ ಗಗನಯಾನ ಯೋಜನೆ: ಮತ್ತೊಂದು ಸಾಧನೆಗೆ ಇಸ್ರೋ ಸಜ್ಜು

ಭೂಮಿಯ ಮೇಲೆ ಕಣ್ಗಾವಲು ಇಡುವ ಹಾಗೂ ಸರ್ವೇ ಮಾಡುವ ಬ್ರಿಟನ್​ನ 2 ಉಪಗ್ರಹ ಸೇರಿದಂತೆ, ದೇಶದ ನೋವಾಸರ್​ ಮತ್ತು ಎಸ್​1-4 ಉಪಗ್ರಹಗಳನ್ನ ನಭೋಮಂಡಲಕ್ಕೆ ಸೇರಿಸಲಾಗುವುದು. ಈ ಉಪಗ್ರಹಗಳ ಒಟ್ಟಾರೆ ತೂಕ ಬರೋಬ್ಬರಿ 889 ಕೆಜಿ ಇದೆ.

ISRO to launch two British satellites today

ನೋವಾಸರ್ ಉಪಗ್ರಹ ಇದು ಅರಣ್ಯದಲ್ಲಿ ದಾರಿಯನ್ನ ತೋರಲಿದೆ. ಅಷ್ಟೇ ಇಲ್ಲ ಇದು ಪ್ರವಾಹ ಹಾಗೂ ವಿಕೋಪಗಳನ್ನ ಮಾನಿಟರಿಂಗ್​ ಮಾಡಲಿದೆ. ಇನ್ನು ಎಸ್​1- 4 ಹೈರೆಸಲೂಷನ್​ ಹೊಂದಿರುವ ಭೂಮಿ ವೀಕ್ಷಣಾ ಉಪಗ್ರಹವಾಗಿದೆ.

ಈ ಸ್ಯಾಟಲೈಟ್​ ಮೂಲಕ ಭೂ ಸಂಪನ್ಮೂಲ, ವಾತಾವರಣ, ನಗರಾಡಳಿತ ಹಾಗೂ ಭೂ ವಿಕೋಪಗಳ ಬಗ್ಗೆ ಅಧ್ಯಯನ ಹಾಗೂ ಮಾನಿಟರಿಂಗ್ ಮಾಡಲಿದೆ.

ಮಹತ್ವದ ಯೋಜನೆಗೆ ಇಸ್ರೋ ಸಜ್ಜು: ಉತ್ತರ ಧ್ರುವದಲ್ಲಿ ಉಪಗ್ರಹ ನಿಲ್ದಾಣಮಹತ್ವದ ಯೋಜನೆಗೆ ಇಸ್ರೋ ಸಜ್ಜು: ಉತ್ತರ ಧ್ರುವದಲ್ಲಿ ಉಪಗ್ರಹ ನಿಲ್ದಾಣ

ಇಸ್ರೋ ಇದೇ ಮೊದಲ ಬಾರಿಗೆ ರಾತ್ರಿವೇಳೆ ಉಪಗ್ರಹ ಉಡಾವಣೆ ಮಾಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ. ಬಯಸಿದ ಇಮೇಜಿಂಗ್ ಮತ್ತು ಪ್ರಕಾಶಮಾನ ಪರಿಸ್ಥಿತಿಗಳ ಬಗ್ಗೆ ಸರಿಯಾಗಿ ಅಂದಾಜು ಮಾಡಲು ರಾತ್ರಿಯ ಸಮಯವೇ ಅತ್ಯಂತ ಉತ್ತಮ ಸಮಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸ್ಮಾರ್ಟ್ ಫೋನಿಗೂ ದೇಶಿ ಜಿಪಿಎಸ್ 'ನಾವಿಕ್' : ಇಸ್ರೋಸ್ಮಾರ್ಟ್ ಫೋನಿಗೂ ದೇಶಿ ಜಿಪಿಎಸ್ 'ನಾವಿಕ್' : ಇಸ್ರೋ

ತಾಂತ್ರಿಕ ಕಾರಣಗಳಿಗಾಗಿ ರಾತ್ರಿವೇಳೆ ಉಪಗ್ರಹ ಉಡ್ಡಯನ ಮಾಡಲಾಗುತ್ತಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.

English summary
Indian Space Research Organisation (ISRO) is under preparation to launch a Polar Satellite Launch Vehicle (PSLV) that would carry two British satellites. The PSLV-C42 will be launched on Sunday (September 16) night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X