ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2ಕ್ಕೆ ಮುಹೂರ್ತ ನಿಗದಿಪಡಿಸಿದ ಇಸ್ರೋ

|
Google Oneindia Kannada News

ಶ್ರೀಹರಿಕೋಟ, ಮೇ 22: ಭಾರತದ ಬಹು ನಿರೀಕ್ಷಿತ ಚಂದ್ರಯಾನ-2ಕ್ಕೆ ಇಸ್ರೋ ಮುಹೂರ್ತ ನಿಗದಿಪಡಿಸಿದೆ. ಜುಲೈ 9ರಿಂದ 16ರವರೆಗೆ ಚಂದ್ರಯಾನ-2 ನಡೆಯಲಿದೆ ಇಸ್ರೋ ಅಧ್ಯಕ್ಷ ಕೆ ಶಿವನ್ ಹೇಳಿದ್ದಾರೆ.

ಚಂದ್ರಯಾನದ ಮುಹೂರ್ತಕ್ಕೆ ಸಂಬಂಧಿಸಿ ಕಳೆದ ಆರು ತಿಂಗಳಿನಿಂದ ಚರ್ಚೆಗಳು ನಡೆಯುತ್ತಿದ್ದವು ಇದಕ್ಕೆ ಶಿವನ್ ತೆರೆ ಎಳೆದಿದ್ದಾರೆ. ಈಗಾಗಲೇ ಒಂದು ಹಂತದ ಚಂದ್ರಯಾನ ಯಶಸ್ವಿಗೊಳಿಸಿರುವ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತೊಂದು ಗರಿಯಾಗಲಿದೆ.

ನರೇಂದ್ರ ಮೋದಿಯ ಮೋಡ ಹೇಳಿಕೆ ಸತ್ಯಗೊಳಿಸಿದ ಇಸ್ರೋನರೇಂದ್ರ ಮೋದಿಯ ಮೋಡ ಹೇಳಿಕೆ ಸತ್ಯಗೊಳಿಸಿದ ಇಸ್ರೋ

ಇಸ್ರೋ ಅಧ್ಯಕ್ಷರ ಪ್ರಕಾರ ಈ ಬಾರಿ ಚಂದ್ರಯಾನವು ಈ ಹಿಂದೆ ಯಾರೂ ಹೋಗದ ಚಂದ್ರನ ಮೇಲ್ಮೈನಲ್ಲಿ ನಡೆಯಲಿದೆ. ಇದು ಭಾರತದ ಪಾಲಿಗೆ ಇನ್ನೊಂದು ಯಶಸ್ಸಾಗಲಿದೆ ಎಂದು ತಿಳಿಸಿದ್ದಾರೆ.

2008 ಅಕ್ಟೋಬರ್‌ 22ರಲ್ಲಿ, ಆಂಧ್ರ ಪ್ರದೇಶದ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-1 ಮೂಲಕ ಚಂದ್ರನ ಅಂಗಳದಲ್ಲಿ ನೀರು ಪತ್ತೆ ಮಾಡಿದ ಖ್ಯಾತಿ ಹೊಂದಿದೆ.

ಇದೇ ಮೊದಲ ಬಾರಿಗೆ ಆರ್ಬಿಟ್‌, ಲ್ಯಾಂಡರ್‌ ಮತ್ತು ರೋವರ್‌ ತಂತ್ರಜ್ಞಾನ ಒಳಗೊಂಡ ಉಪಗ್ರಹವನ್ನು ಚಂದ್ರನ ಅಂಗಳಕ್ಕೆ ಇಳಿಸಲಿದ್ದಾರೆ. ಆರ್ಬಿಟ್‌ ಎಂದರೆ ಚಂದ್ರನಿಂದ 100 ಕಿ.ಮೀ. ವ್ಯಾಪ್ತಿಯ ಚಂದ್ರ ಧ್ರುವ ಕಕ್ಷೆಯಲ್ಲಿ ಸಂಚರಿಸುವಂತಹ ತಂತ್ರಜ್ಞಾನ, ಲ್ಯಾಂಡರ್‌ ಅಂದರೆ ಮೊದಲೇ ನಿಗದಿ ಪಡಿಸಿದ ಚಂದ್ರನ ಮೇಲ್ಮೈ ಜಾಗದಲ್ಲಿ ಮೃದುವಾಗಿ ಕೆಳಗಿಳಿಯುವ ತಂತ್ರಜ್ಞಾನ, ರೋವರ್‌ ಎಂದರೆ ಚಂದ್ರನ ನೆಲದಲ್ಲಿ ಇಳಿದ ನಂತರ ಉರುಳುತ್ತ ಚಲಿಸುವ ತಂತ್ರಜ್ಞಾನವಾಗಿದೆ ಎಂದು ಕೆ ಶಿವನ್‌ ಯೋಜನೆ ಬಗ್ಗೆ ವಿವರಿಸಿದ್ದಾರೆ.

ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ

ಇಸ್ರೋ ಉಡಾವಣೆಗೆ ಸಿದ್ಧತೆ ನಡೆಸುತ್ತಿರುವ 'ಚಂದ್ರಯಾನ-2'ನ ಪೇಲೋಡ್‌ನಲ್ಲಿ 6 ಆರ್ಬಿಟರ್‌, 3 ಲ್ಯಾಂಡರ್‌ ಮತ್ತು 2 ರೋವರ್‌ಗಳನ್ನು ಒಳಗೊಂಡಿದೆ.

ಶುಕ್ರಯಾನಕ್ಕೂ ಇಸ್ರೋ ತಯಾರಿ

ಶುಕ್ರಯಾನಕ್ಕೂ ಇಸ್ರೋ ತಯಾರಿ

ಚಂದ್ರಯಾನ ನಡೆಸಿ ಯಶಸ್ವಿಯಾಗಿರುವ ಇಸ್ರೋ ಎರಡನೇ ಬಾರಿ ಚಂದ್ರಯಾನವು ಈ ಹಿಂದೆ ಯಾರೂ ಹೋಗದ ಚಂದ್ರನ ಮೇಲ್ಮೈನಲ್ಲಿ ನಡೆಯಲಿದೆ. ಹಾಗೆಯೇ ಶುಕ್ರಯಾನಕ್ಕೂ ಸಿದ್ಧತೆ ನಡೆಸಿದೆ. ಆರು ವರ್ಷಗಳ ಹಿಂದೆ ಮಂಗಳ ಗ್ರಹಕ್ಕೆ ತಲುಪಿದ್ದ ಇಸ್ರೋ, 2023ರಲ್ಲಿ ಶುಕ್ರ ಗ್ರಹಕ್ಕೆ ಕಾಲಿಡುವ ಪ್ರಮುಖ ಯೋಜನೆಗೆ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲ, ಮುಂದಿನ ಹತ್ತು ವರ್ಷಗಳಲ್ಲಿ ಏಳು ವಿವಿಧ ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಲು ಇಸ್ರೋ ತಯಾರಿ ಮಾಡುತ್ತಿದೆ.

ಭೂಮಿ ಮತ್ತು ಸೂರ್ಯನಿಂದ ಎಷ್ಟು ಕಿ.ಮೀ ದೂರದಲ್ಲಿದೆ?

ಭೂಮಿ ಮತ್ತು ಸೂರ್ಯನಿಂದ ಎಷ್ಟು ಕಿ.ಮೀ ದೂರದಲ್ಲಿದೆ?

2020ರ ಮಧ್ಯಕಾಲದಲ್ಲಿ ಬಾಹ್ಯಾಕಾಶ ನೌಕೆಯನ್ನು ಹೊರತೆಗೆದು ಲಿಬರೇಷನ್ ಆರ್ಬಿಟ್‌ನಲ್ಲಿ ಇರಿಸಲಾಗುತ್ತದೆ. ಇದು ಭೂಮಿಯಿಂದ 1.5 ಮಿಲಿಯನ್ ದೂರದಲ್ಲಿದೆ. ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಶೇ.1ರಷ್ಟು ದೂರದಲ್ಲಿದೆ.

ಮೊದಲ ಚಂದ್ರಯಾನ ಯಾವಾಗ ನಡೆದಿತ್ತು?

ಮೊದಲ ಚಂದ್ರಯಾನ ಯಾವಾಗ ನಡೆದಿತ್ತು?

2008 ಅಕ್ಟೋಬರ್‌ 22ರಲ್ಲಿ, ಆಂಧ್ರ ಪ್ರದೇಶದ ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಚಂದ್ರಯಾನ-1 ಮೂಲಕ ಚಂದ್ರನ ಅಂಗಳದಲ್ಲಿ ನೀರು ಪತ್ತೆ ಮಾಡಿದ ಖ್ಯಾತಿ ಹೊಂದಿದೆ.

ಮೊದಲ ಬಾರಿ ಆರ್ಬಿಟ್ , ಲ್ಯಾಂಡರ್ ಮತ್ತು ರೋವರ್ ತಂತ್ರಜ್ಞಾನ

ಮೊದಲ ಬಾರಿ ಆರ್ಬಿಟ್ , ಲ್ಯಾಂಡರ್ ಮತ್ತು ರೋವರ್ ತಂತ್ರಜ್ಞಾನ

ಇದೇ ಮೊದಲ ಬಾರಿಗೆ ಆರ್ಬಿಟ್‌, ಲ್ಯಾಂಡರ್‌ ಮತ್ತು ರೋವರ್‌ ತಂತ್ರಜ್ಞಾನ ಒಳಗೊಂಡ ಉಪಗ್ರಹವನ್ನು ಚಂದ್ರನ ಅಂಗಳಕ್ಕೆ ಇಳಿಸಲಿದ್ದಾರೆ. ಆರ್ಬಿಟ್‌ ಎಂದರೆ ಚಂದ್ರನಿಂದ 100 ಕಿ.ಮೀ. ವ್ಯಾಪ್ತಿಯ ಚಂದ್ರ ಧ್ರುವ ಕಕ್ಷೆಯಲ್ಲಿ ಸಂಚರಿಸುವಂತಹ ತಂತ್ರಜ್ಞಾನ, ಲ್ಯಾಂಡರ್‌ ಅಂದರೆ ಮೊದಲೇ ನಿಗದಿ ಪಡಿಸಿದ ಚಂದ್ರನ ಮೇಲ್ಮೈ ಜಾಗದಲ್ಲಿ ಮೃದುವಾಗಿ ಕೆಳಗಿಳಿಯುವ ತಂತ್ರಜ್ಞಾನ, ರೋವರ್‌ ಎಂದರೆ ಚಂದ್ರನ ನೆಲದಲ್ಲಿ ಇಳಿದ ನಂತರ ಉರುಳುತ್ತ ಚಲಿಸುವ ತಂತ್ರಜ್ಞಾನವಾಗಿದೆ ಎಂದು ಕೆ ಶಿವನ್‌ ಯೋಜನೆ ಬಗ್ಗೆ ವಿವರಿಸಿದ್ದಾರೆ.

English summary
All the modules are getting ready for Chandrayaan-2 launch during the window of July 09, to July 16, 2019, with an expected Moon landing on September 06, 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X