ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಗೂಢಚರ ಉಪಗ್ರಹ ರಿಸ್ಯಾಟ್-2ಬಿಆರ್1 ಉಡಾವಣೆ ಇಂದು

|
Google Oneindia Kannada News

ಶ್ರೀಹರಿಕೋಟಾ, ಡಿಸೆಂಬರ್ 11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಕ್ಕೆ ಮುಂದಾಗಿದೆ. ಅತ್ಯಾಧುನಿಕ ಗೂಢಚರ ಉಪಗ್ರಹ ರಿಸ್ಯಾಟ್-2ಬಿಆರ್1 ಅನ್ನು ಬುಧವಾರ ಮಧ್ಯಾಹ್ನ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ.

ಈ ಉಪಗ್ರಹದೊಂದಿಗೆ ಒಂಬತ್ತು ವಿದೇಶಿ ಉಪಗ್ರಹಗಳು ಕೂಡ ಬಾಹ್ಯಾಕಾಶಕ್ಕೆ ಚಿಮ್ಮಲಿವೆ. ಪೋಲಾರ್ ಸ್ಯಾಟಲೈಟ್ ಕಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೂಲಕ ಭೂ ಸರ್ವೇಕ್ಷಣೆಯ ರೇಡಾರ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ.

ಗಗನಕ್ಕೇರಿದ ಕಾರ್ಟೋಸ್ಯಾಟ್-3 ಉಪಗ್ರಹ: ಇಸ್ರೋದ ಹೊಸ ದಾಖಲೆಗಗನಕ್ಕೇರಿದ ಕಾರ್ಟೋಸ್ಯಾಟ್-3 ಉಪಗ್ರಹ: ಇಸ್ರೋದ ಹೊಸ ದಾಖಲೆ

ಇದು ಪಿಎಸ್‌ಎಲ್‌ವಿ ಉಡ್ಡಯನ ವಾಹನದ 50ನೇ ಯೋಜನೆಯಾಗಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಮಧ್ಯಾಹ್ನ 3.25ರ ವೇಳೆಗೆ ಪಿಎಸ್‌ಎಲ್‌ವಿ-ಸಿ48 ರಾಕೆಟ್, ರಿಸ್ಯಾಟ್-2ಬಿಆರ್1 ಸೇರಿದಂತೆ ಒಟ್ಟು ಹತ್ತು ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶದತ್ತ ಪ್ರಯಾಣಿಸಲಿದೆ.

21 ನಿಮಿಷಗಳಲ್ಲಿ ಉಡಾವಣೆ ಪೂರ್ಣ

21 ನಿಮಿಷಗಳಲ್ಲಿ ಉಡಾವಣೆ ಪೂರ್ಣ

ಒಂಬತ್ತು ವಿದೇಶಿ ಉಪಗ್ರಹಗಳಲ್ಲಿ ಒಂದು ಇಸ್ರೇಲ್, ಒಂದು ಇಟಲಿ, ಒಂದು ಜಪಾನ್ ಮತ್ತು ಆರು ಅಮೆರಿಕದ ಉಪಗ್ರಹಗಳಿವೆ. 16 ನಿಮಿಷಗಳ ಅವಧಿಯಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಒಳಗೆ ರಿಸ್ಯಾಟ್-2ಬಿಆರ್1ಅನ್ನು ಸೇರಿಸಲಾಗುತ್ತದೆ. ನಂತರದ ಒಂದು ನಿಮಿಷದಲ್ಲಿ ಉಳಿದ 9 ಉಪಗ್ರಹಗಳಲ್ಲಿ ಒಂದು ಉಪಗ್ರಹವನ್ನು ಸೇರಿಸಲಾಗುತ್ತದೆ. ಈ ಹತ್ತು ಉಪಗ್ರಹಗಳ ಉಡಾವಣಾ ಪ್ರಕ್ರಿಯೆಯು ಸುಮಾರು 21 ನಿಮಿಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಚಂದ್ರಯಾನ 2ರ ಲ್ಯಾಂಡರ್ ವೈಫಲ್ಯ: ಕಾರಣ ವಿವರಿಸಿದ ಸರ್ಕಾರಚಂದ್ರಯಾನ 2ರ ಲ್ಯಾಂಡರ್ ವೈಫಲ್ಯ: ಕಾರಣ ವಿವರಿಸಿದ ಸರ್ಕಾರ

ವಿವಿಧ ಕಾರ್ಯಗಳಿಗೆ ನೆರವು

ವಿವಿಧ ಕಾರ್ಯಗಳಿಗೆ ನೆರವು

ಪಿಎಸ್ಎಲ್‌ವಿ-ಸಿ48 ಯೋಜನೆ ಉಡಾವಣಾ ಪ್ರಕ್ರಿಯೆಯ ಕ್ಷಣಗಣನೆ ಮಂಗಳವಾರ ಸಂಜೆ 4.40ರ ಸುಮಾರಿಗೆ ಆರಂಭವಾಗಿದೆ.

ರಿಸ್ಯಾಟ್-2ಬಿಆರ್1 ಜತೆಗೆ ಇತರೆ ವಿದೇಶಿ ಉಪಗ್ರಹಗಳ ಉಡಾವಣೆಯು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್ಐಎಲ್) ವಾಣಿಜ್ಯ ಒಪ್ಪಂದಗಳ ಅಡಿಯಲ್ಲಿ ನಡೆಯುತ್ತಿದೆ ಎಂದು ಇಸ್ರೋ ತಿಳಿಸಿದೆ. ರಿಸ್ಯಾಟ್-2ಬಿಆರ್1 628 ಕೆ.ಜಿ. ತೂಕ ಹೊಂದಿದ್ದು, ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣಾ ಕಾರ್ಯಗಳಂತಹ ವಿವಿಧ ಯೋಜನೆಗಳಿಗೆ ನೆರವಾಗಲಿದೆ.

ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಕೆ. ಶಿವನ್

ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಕೆ. ಶಿವನ್

ಪಿಎಸ್ಎಲ್‌ವಿ ಸಿ48 ಉಡಾವಣೆಯ ಪ್ರಕ್ರಿಯೆ ಆರಂಭಕ್ಕೂ ಮುನ್ನ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ತಿರುಮಲದ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್ಎಲ್‌ವಿ ಸಿ48 ಉಡಾವಣೆಯು ಇಸ್ರೋಗೆ ಐತಿಹಾಸಿಕ ಕ್ಷಣವಾಗಲಿದೆ. ಏಕೆಂದರೆ ಇದು ಪಿಎಸ್‌ಎಲ್‌ವಿಯ 50ನೇ ಉಡಾವಣೆಯಾಗಿದ್ದು, ಶ್ರೀಹರಿಕೋಟಾದಿಂದ ನಡೆಯುತ್ತಿರುವ 75ನೇ ಉಡಾವಣೆಯಾಗಿದೆ.

ಚಂದ್ರಯಾನದ ಬಳಿಕ ರಕ್ಷಣಾ ಕ್ಷೇತ್ರಕ್ಕಾಗಿ ಹೊಸ ಹೆಜ್ಜೆ ಇರಿಸಿದ ಇಸ್ರೋಚಂದ್ರಯಾನದ ಬಳಿಕ ರಕ್ಷಣಾ ಕ್ಷೇತ್ರಕ್ಕಾಗಿ ಹೊಸ ಹೆಜ್ಜೆ ಇರಿಸಿದ ಇಸ್ರೋ

ಕಾರ್ಟೋಸ್ಯಾಟ್-3 ಉಪಗ್ರಹ ಉಡಾವಣೆ

ಕಾರ್ಟೋಸ್ಯಾಟ್-3 ಉಪಗ್ರಹ ಉಡಾವಣೆ

ಭೂಸರ್ವೇಕ್ಷಣೆಯಲ್ಲಿ ಮಹತ್ವದ ಕಾರ್ಯನಿರ್ವಹಿಸುವ ಕಾರ್ಟೋಸ್ಯಾಟ್-3 ಉಪಗ್ರಹವನ್ನು ನವೆಂಬರ್ 27ರಂದು ಇಸ್ರೋ ಉಡಾವಣೆ ಮಾಡಿತ್ತು. ಇದರ ಜತೆಗೆ ಅಮೆರಿಕದ 13 ನ್ಯಾನೋ ಉಪಗ್ರಹಗಳನ್ನು ಕೂಡ ಉಡಾವಣೆ ಮಾಡಿತ್ತು. ನಂತರದ 14 ದಿನಗಳಲ್ಲಿಯೇ ಮತ್ತೊಂದು ಉಪಗ್ರಹ ಉಡಾವಣೆ ನಡೆಸುತ್ತಿದೆ.

English summary
ISRO will launch its 50th PSLV mission on Wednesday. PSLV-C48 will be launched with RISAT-2BR1 And 9 Foreign Satellites from Satish Dhawan Space Centre at Sriharikota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X