ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಸಂಜೆ ಇಸ್ರೋದಿಂದ ದೈತ್ಯ ರಾಕೆಟ್ ‘ಜಿಎಸ್‌ಎಲ್‌ವಿ ಮಾರ್ಕ್-3’ ಉಡಾವಣೆ

By Sachhidananda Acharya
|
Google Oneindia Kannada News

ಶ್ರೀ ಹರಿಕೋಟಾ, ಜೂನ್ 4: ತನ್ನ ಇತಿಹಾಸದ ಅತೀ ದೊಡ್ಡ ಹಾಗೂ ತೂಕದ ಉಪಗ್ರಹ ಉಡಾವಣಾ ವಾಹಕ 'ಜಿಎಸ್‌ಎಲ್‌ವಿ ಮಾರ್ಕ್-3' ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಸಂಜೆ 5.28 ನಿಮಿಷಕ್ಕೆ ಈ ರಾಕೆಟ್ ಉಡಾವಣೆಯಾಗಲಿದೆ.

ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯವನ್ನು ಈ ರಾಕೆಟ್ ಹೊಂದಿರುವುದರಿಂದ ಬಾಹ್ಯಾಕಾಶಕ್ಕೆ ಗಗನಯಾನಿಗಳನ್ನು ಕಳುಹಿಸುವ ಭಾರತದ ಕನಸು ಮತ್ತಷ್ಟು ಹತ್ತಿರವಾಗಲಿದೆ. ಇಲ್ಲಿಯವರೆಗೆ ರಷ್ಯಾ, ಚೀನಾ ಮತ್ತು ಅಮೆರಿಕಾ ಮಾತ್ರ ತಮ್ಮದೇ ಉಡಾವಣಾ ವಾಹಕದಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದು, ಈ ಅವಕಾಶ ಭಾರತದ ಪಾಲಿಗೂ ತೆರೆದುಕೊಳ್ಳಲಿದೆ.[ಐತಿಹಾಸಿಕ ದಿನ: ದಕ್ಷಿಣ ಏಷ್ಯಾ ರಾಷ್ಟ್ರಗಳ ಉಪಗ್ರಹ ಉಡಾಯಿಸಿದ ಇಸ್ರೋ]

ISRO To Launch Its Heaviest Rocket GSLV Mark III on June 5 at 5.28pm

ಈಗಾಗಲೇ ಬಾಹ್ಯಾಕಾಶ ಯಾತ್ರೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದ್ದು ಅದರಲ್ಲಿ 'ಜಿಎಸ್‌ಎಲ್‌ವಿ ಮಾರ್ಕ್ 3' ಪ್ರಮುಖ ಹೆಜ್ಜೆಯಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಇಸ್ರೋ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್, "ಇದೊಂದು ಪ್ರಮುಖ ಘಟ್ಟ. ಈ ಉಡಾವಣೆಯ ಮೂಲಕ ನಾವು ನಮ್ಮ ನೆಲದಿಂದಲೇ ಸಂವಹನ ಉಪಗ್ರಹಗಳನ್ನು ಉಡಾಯಿಸಬಹುದಾಗಿದೆ," ಎಂದು ಹೇಳಿದ್ದಾರೆ.[ಭಾರತದ ಸಖತ್ ಉಡುಗೊರೆಯನ್ನು ನಯವಾಗಿ ತಿರಸ್ಕರಿಸಿದ ಪಾಕ್]

300 ಕೋಟಿ ಖರ್ಚು

ಒಂದು 'ಜಿಎಸ್‌ಎಲ್‌ವಿ ಮಾರ್ಕ್ 3' ಉಡಾವಣೆಗೆ ಸುಮಾರು 300 ಕೋಟಿ ರೂಪಾಯಿ ಖರ್ಚಾಗಲಿದೆ. ಸತತ ಆರು ಪರೀಕ್ಷೆಗಳು ಯಶಸ್ವಿಯಾದ ಬಳಿಕ ಈ 'ಜಿಎಸ್‌ಎಲ್‌ವಿ ಮಾರ್ಕ್ 3'ಯಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದಾಗಿದೆ. ಒಂದು ಅಂದಾಜಿನ ಪ್ರಕಾರ ಮುಂದಿನ 15 ವರ್ಷಗಳ ಒಳಗೆ ಭಾರತ ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸಲಿದೆ.[ಇಸ್ರೊ ಅಂಗ ಸಂಸ್ಥೆ ಎನ್‍ ಆರ್‍ ಎಸ್‍ ಸಿಯಲ್ಲಿ ವಿವಿಧ ಉದ್ಯೋಗಾವಕಾಶಗಳು]

ಈ ರಾಕೆಟ್ 43 ಮೀಟರ್ ಉದ್ದವಿದೆ. ಅಂದರೆ 13 ಮಹಡಿಗಳ ಕಟ್ಟಡದಷ್ಟು ದೊಡ್ಡದಿದೆ. ಒಟ್ಟು ಈ ರಾಕೆಟ್ 640 ಟನ್ ತೂಕವಿದ್ದು ಏಕಕಾಲಕ್ಕೆ 4 ಟನ್ ಗಳಷ್ಟು ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲುದಾಗಿದೆ.

English summary
The Indian Space Research Organisation (ISRO) is planning to launch a mega rocket, the GSLV Mark III. The vehicle will be launched from the ISRO’s headquarters in Andhra Pradesh's Sriharikota at 5.28 pm tomorrow. If the launch is successful that will take India one step closer to sending its own astronauts in space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X