ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜು

|
Google Oneindia Kannada News

ನವದೆಹಲಿ, ಫೆಬ್ರವರಿ 04: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ 2022 ರಲ್ಲಿ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿ ಕೇಂದ್ರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.

"ಚಂದ್ರಯಾನ-2 ರಿಂದ ಕಲಿತುಕೊಂಡಿರುವ ಮತ್ತು ರಾಷ್ಟ್ರೀಯ ಮಟ್ಟದ ತಜ್ಞರು ನೀಡಿದ ಸಲಹೆಗಳ ಆಧಾರದ ಮೇಲೆ, ಚಂದ್ರಯಾನ-3ರ ತಯಾರಿ ನಡೆಸಲಾಗುತ್ತಿದೆ. ಸಂಬಂಧಿತ ಹಲವು ಹಾರ್ಡ್‌ವೇರ್ ಮತ್ತು ಅವುಗಳ ವಿಶೇಷ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಉಡಾವಣೆಯು ಆಗಸ್ಟ್ 2022ಕ್ಕೆ ನಿಗದಿಯಾಗಿದೆ," ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ 2022 (ಜನವರಿಯಿಂದ ಡಿಸೆಂಬರ್ 22) ಅವಧಿಯಲ್ಲಿ 19 ಮಿಷನ್‌ಗಳನ್ನು ಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಎಂಟು ಉಡಾವಣಾ ವಾಹನ ಕಾರ್ಯಾಚರಣೆಗಳು, ಏಳು ಬಾಹ್ಯಾಕಾಶ ನೌಕೆ ಕಾರ್ಯಾಚರಣೆಗಳು ಮತ್ತು ನಾಲ್ಕು ತಂತ್ರಜ್ಞಾನ ಪ್ರದರ್ಶಕ ಕಾರ್ಯಾಚರಣೆಗಳನ್ನು ನಡೆಸಲು ನಿರ್ಧಾರ ಮಾಡಿದ್ದೇವೆ ಎಂದು ಕೂಡಾ ಹೇಳಿದರು.

ISRO to launch Chandrayaan-3 in August this year, corrections in progress

ಕೊರೊನಾ ಸಾಂಕ್ರಾಮಿಕದಿಂದಾಗಿ ತಡೆ

''ಜುಲೈ 2019 ರ ಚಂದ್ರಯಾನ-2 ರ ನಂತರದ ಮಿಷನ್ ಚಂದ್ರಯಾನ-3 ಆಗಿದೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಅನ್ನು ಇಳಿಸುವ ಗುರಿಯನ್ನು ಹೊಂದಿದೆ. ಇದನ್ನು ದೇಶದ ಅತ್ಯಂತ ಶಕ್ತಿಶಾಲಿ ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್‌ನಲ್ಲಿ ಕಳುಹಿಸಲಾಗಿದೆ. ಚಂದ್ರಯಾನ-2ರ ಕಲಿಕೆಗಳು ಮತ್ತು ರಾಷ್ಟ್ರೀಯ ಮಟ್ಟದ ತಜ್ಞರು ನೀಡಿದ ಸಲಹೆಗಳ ಆಧಾರದ ಮೇಲೆ ಚಂದ್ರಯಾನ-3ರ ತಯಾರಿ ಪ್ರಗತಿಯಲ್ಲಿದೆ. ಸಂಬಂಧಿತ ಹಾರ್ಡ್‌ವೇರ್ ಮತ್ತು ಅವುಗಳ ವಿಶೇಷ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಉಡಾವಣೆಯನ್ನು ಆಗಸ್ಟ್ 2022 ಕ್ಕೆ ನಿಗದಿಪಡಿಸಲಾಗಿದೆ," ಎಂದು ರವನೀತ್ ಸಿಂಗ್ ಮತ್ತು ಸುಬ್ಬುರಾಮನ್ ತಿರುನಾವುಕ್ಕರಸರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿ ಕೇಂದ್ರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಇನ್ನು ವಿಳಂಬವಾ‌ಗಲು ಕೊರೊನಾ ವೈರಸ್‌ ಸಾಂಕ್ರಾಮಿಕವೇ ಕಾರಣ ಎಂದು ಕೂಡಾ ಹೇಳಿದ್ದಾರೆ.

ಚಂದ್ರಯಾನ-3 ಉಡಾವಣೆ: ಈ ಬಾರಿ ಆರ್ಬಿಟರ್ ಇರುವುದಿಲ್ಲಚಂದ್ರಯಾನ-3 ಉಡಾವಣೆ: ಈ ಬಾರಿ ಆರ್ಬಿಟರ್ ಇರುವುದಿಲ್ಲ

Recommended Video

West Indies ಸರಣಿ ನಡೆಯೋದು ಅನುಮಾನವಾಗಿದೆ ಅಂದವರು ಇಲ್ಲಿ ನೋಡಿ | Oneindia kannada

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೊನೆಯ ಪ್ರಮುಖ ಉಪಗ್ರಹ ಉಡಾವಣೆಗಳೆಂದರೆ ಕಳೆದ ಆಗಸ್ಟ್‌ನಲ್ಲಿ ಭೂ ವೀಕ್ಷಣಾ ಉಪಗ್ರಹ -3 ಮತ್ತು ಫೆಬ್ರವರಿಯಲ್ಲಿ ಅಮೆಜೋನಿಯಾ ಉಪಗ್ರಹ ಆಗಿದೆ. ಈ ಹಣಕಾಸು ವರ್ಷದಲ್ಲಿ ಇಸ್ರೋಗೆ 13,700 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು, ಕಳೆದ ವರ್ಷ ಖರ್ಚು ಮಾಡಿದ್ದಕ್ಕಿಂತ ಸುಮಾರು 1,000 ಕೋಟಿ ರೂಪಾಯಿ ಅಧಿಕ ಮಂಜೂರು ಮಾಡಲಾಗಿದೆ. ಈ ವರ್ಷ ಹಲವಾರು ಮಿಷನ್‌ಗಳನ್ನು ಯೋಜಿಸಲಾಗಿದ್ದರೂ, ಈ ವರ್ಷ ಬಜೆಟ್‌ನ ವೆಚ್ಚವು ಕಳೆದ ವರ್ಷ ನಿಗದಿಪಡಿಸಿದ 13,949 ಕೋಟಿ ರೂಪಾಯಿಗಿಂತ ಕಡಿಮೆಯಾಗಿದೆ.

ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಲೋಕಸಭೆಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಜಿತೇಂದ್ರ ಸಿಂಗ್, "ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯೋಜನೆಯ ಸಾಕಾರದ ಪ್ರಗತಿಗೆ ಅಡ್ಡಿಯುಂಟಾಗಿದೆ. ಆದರೂ ಲಾಕ್‌ಡೌನ್ ಸಮಯದಲ್ಲೂ ಸಹ ಮನೆಯಿಂದಲೇ ಕೆಲಸ ಮಾಡುತ್ತಾ ಸಾಧ್ಯವಾದಷ್ಟೂ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅನ್‌ಲಾಕ್ ಅವಧಿ ಆರಂಭದ ನಂತರ ಚಂದ್ರಯಾನ-3 ಯೋಜನೆ ಸಾಕಾರದ ಕಾರ್ಯ ಆರಂಭವಾಗಿದೆ ಮತ್ತು ಅದು ಸಾಕಾರದ ಪ್ರಬುದ್ಧ ಹಂತದಲ್ಲಿದೆ. ಎಲ್ಲವೂ ಮಾಮೂಲಿಯಂತೆ ಕೆಲಸ ಕಾರ್ಯಗಳು ನಡೆದರೆ 2022ರ ಮೂರನೇ ತ್ರೈಮಾಸಿಕದ ವೇಳೆಗೆ ಚಂದ್ರಯಾನ-3 ಉಡಾವಣೆ ಮಾಡುವ ಸಾಧ್ಯತೆ ಇದೆ," ಎಂದು ಮಾಹಿತಿ ನೀಡಿದ್ದರು. (ಒನ್‌ಇಂಡಿಯಾ ಸುದ್ದಿ)

English summary
The Indian Space Research Organisation (ISRO) is set to launch Chandrayaan-3 in August 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X