ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನದ ಬಳಿಕ ರಕ್ಷಣಾ ಕ್ಷೇತ್ರಕ್ಕಾಗಿ ಹೊಸ ಹೆಜ್ಜೆ ಇರಿಸಿದ ಇಸ್ರೋ

|
Google Oneindia Kannada News

ಬೆಂಗಳೂರು, ನವೆಂಬರ್ 19: ಭಾರತವು ಭೂಸರ್ವೇಕ್ಷಣಾ ಉಪಗ್ರಹ ಕಾರ್ಟೋಸ್ಯಾಟ್-3 ಮತ್ತು ಇತರೆ 13 ವಾಣಿಜ್ಯ ನ್ಯಾನೋ ಉಪಗ್ರಹಗಳನ್ನು ನ.25ರಂದು ಉಡಾವಣೆ ಮಾಡಲಿದೆ. ಈ ಉಪಗ್ರಹಗಳನ್ನು ಸೂರ್ಯನ ಸಮಕಾಲೀನ ಕಕ್ಷೆಯೊಳಗೆ ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಿಳಿಸಿದೆ.

ನ.25ರಂದು ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಕಾರ್ಟೋಸ್ಯಾಟ್ 3 ಮತ್ತು ಅಮೆರಿಕದ 13 ವಾಣಿಜ್ಯ ನ್ಯಾನೋ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ. ಭಾರತದ ಪೊಲಾರ್ ಉಪಗ್ರಹ ಉಡ್ಡಯನ ವಾಹನ ಎಕ್ಸ್‌ಎಲ್ ವೇರಿಯಂಟ್ (ಪಿಎಸ್‌ಎಲ್‌ವಿ-ಎಕ್ಸ್‌ಎಲ್) ಅಥವಾ ಪಿಎಸ್‌ಎಲ್‌ವಿ-ಸಿ47 ಮೂಲಕ ಕಕ್ಷೆಗೆ ಸೇರ್ಪಡೆ ಮಾಡಲಾಗುತ್ತದೆ. ಅಂದು ಬೆಳಿಗ್ಗೆ 9.28ಕ್ಕೆ ರಾಕೆಟ್ ಉಡಾವಣೆಯಾಗುವ ನಿರೀಕ್ಷೆಯಿದೆ.

ಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋಚಂದ್ರಯಾನ-2 ವೈಫಲ್ಯದ ಕಾರಣವನ್ನು ಕೊನೆಗೂ ಬಿಚ್ಚಿಟ್ಟ ಇಸ್ರೋ

ಕಾರ್ಟೋಸ್ಯಾಟ್ 3 ವೇಗವಾಗಿ ಸಾಗಬಲ್ಲ ಮತ್ತು ಅತ್ಯಾಧುನಿಕ ಮೂರನೇ ಪೀಳಿಗೆಯ ಉಪಗ್ರಹವಾಗಿದೆ. ಇದರಲ್ಲಿ ಅತ್ಯಧಿಕ ರೆಸೊಲ್ಯೂಷನ್ ಫೋಟೊಗ್ರಫಿ ಸಾಮರ್ಥ್ಯವಿದೆ. ಈ ಉಪಗ್ರಹವನ್ನು ಕಕ್ಷೆಯ 509 ಕಿ.ಮೀ ಒಳಭಾಗದಲ್ಲಿ 97.5 ಡಿಗ್ರಿ ಇಳಿಮುಖದಲ್ಲಿ ಇರಿಸಲಾಗುತ್ತದೆ.

ಅಮೆರಿಕದ ಉಪಗ್ರಹಗಳು

ಅಮೆರಿಕದ ಉಪಗ್ರಹಗಳು

ಕಾರ್ಟೋಸ್ಯಾಟ್ 3 ಜತೆಗೆ ಅಮೆರಿಕದ 13 ನ್ಯಾನೋ ಉಪಗ್ರಹಗಳು ಉಡಾವಣೆಯಾಗಲಿದ್ದು, ಇವು ನ್ಯೂಸ್ಪೇಸ್ ಇಂಡಿಯಾ ಲಿ. (ಎನ್ಎಸ್ಐಎಲ್) ಜತೆಗಿನ ವಾಣಿಜ್ಯಾತ್ಮಕ ಹೊಂದಾಣಿಕೆಯ ಭಾಗವಾಗಿವೆ ಎಂದು ಇಸ್ರೋ ತಿಳಿಸಿದೆ. ಎನ್ಎಸ್ಐಎಲ್ ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿ ಇತ್ತೀಚೆಗಷ್ಟೇ ಸ್ಥಾಪಿಸಲಾದ ಹೊಸ ಕಂಪೆನಿಯಾಗಿದೆ.

ಕಾರ್ಟೋಸ್ಯಾಟ್ ಸರಣಿಯ ಮೂರನೇ ಉಪಗ್ರಹ

ಕಾರ್ಟೋಸ್ಯಾಟ್ ಸರಣಿಯ ಮೂರನೇ ಉಪಗ್ರಹ

ಕಾರ್ಟೋಸ್ಯಾಟ್ 3 ಈ ಸರಣಿಯ ಮೂರನೇ ಉಪಗ್ರಹವಾಗಿದೆ. ಈ ಪೀಳಿಗೆಯ ಮೊದಲ ಉಪಗ್ರಹವನ್ನು 2005ರ ಮೇ 5ರಂದು ಉಡಾವಣೆ ಮಾಡಲಾಗಿತ್ತು. ಇದು ಭೂಮಿಯ ಮೇಲಿನ ವಾತಾವರಣದ ಚಿತ್ರಗಳನ್ನು ರವಾನಿಸುತ್ತದೆ. ಕಾರ್ಟೋಸ್ಯಾಟ್ 1 ಭಾರತದ ಮೊದಲ ರಿಮೋಟ್ ಸೆನ್ಸಿಂಗ್ ಉಪಗ್ರಹವಾಗಿದೆ. 2018ರ ಜನವರಿ 12ರಂದು ಕಾರ್ಟೋಸ್ಯಾಟ್ 2 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು.

ಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆಚಂದ್ರಯಾನ 3ಕ್ಕೆ ಸಿದ್ಧತೆ: ಚಂದ್ರನತ್ತ ಇಸ್ರೋ ಮತ್ತೊಂದು ಹೆಜ್ಜೆ

ಡಿಸೆಂಬರನಲ್ಲಿ ಇನ್ನೆರಡು ಉಪಗ್ರಹ

ಡಿಸೆಂಬರನಲ್ಲಿ ಇನ್ನೆರಡು ಉಪಗ್ರಹ

ಡಿಸೆಂಬರ್‌ನಲ್ಲಿ ಇಸ್ರೋ ಇನ್ನೂ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ರಿಸ್ಯಾಟ್ 2ಬಿಆರ್1 ಮತ್ತು ರಿಸ್ಯಾಟ್-2ಬಿಆರ್2 ಉಪಗ್ರಹಗಳನ್ನು ಪಿಎಸ್‌ಎಲ್‌ವಿಸಿ48 ಮತ್ತು ಪಿಎಸ್‌ಎಲ್‌ವಿಸಿ49 ರಾಕೆಟ್‌ಗಳ ಸಹಾಯದೊಂದಿಗೆ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಇವು ವಿಚಕ್ಷಣಾ ಉಪಗ್ರಹಗಳಾಗಿದ್ದು, ದೇಶದ ರಕ್ಷಣಾ ವ್ಯವಸ್ಥೆಗೆ ನೆರವಾಗಲಿವೆ.

ಒಂದೇ ವರ್ಷದಲ್ಲಿ ಹಲವು ಉಪಗ್ರಹ

ಒಂದೇ ವರ್ಷದಲ್ಲಿ ಹಲವು ಉಪಗ್ರಹ

ಮೇ 22ರಂದು ಇಸ್ರೋ ರಿಸ್ಯಾಟ್-2ಬಿ ಮತ್ತು ಏ. 1ರಂದು ಎಮಿಸ್ಯಾಟ್ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಎಮಿಸ್ಯಾಟ್ ಶತ್ರುಗಳ ರಾಡಾರ್‌ಗಳ ಮೇಲೆ ಕಣ್ಣಿಡಲು ಡಿಆರ್‌ಡಿಓಗೆ ನೆರವಾಗುವ ವಿದ್ಯುನ್ಮಾನ ಗುಪ್ತಚರ ಉಪಗ್ರಹವಾಗಿತ್ತು. ಚಂದ್ರಯಾನ-2ರ ಯೋಜನೆಯ ಕಾರಣದಿಂದ ಹೆಚ್ಚಿನ ಉಪಗ್ರಹಗಳ ಉಡಾವಣೆ ಸುಮಾರು ಆರು ತಿಂಗಳು ವಿಳಂಬವಾಗಿದ್ದವು. ಸೇನಾ ಉದ್ದೇಶಕ್ಕಾಗಿ ಅನೇಕ ಉಪಗ್ರಹಗಳನ್ನು ಒಂದೇ ವರ್ಷದಲ್ಲಿ ಉಡಾವಣೆ ಮಾಡಿರುವುದು ಇಸ್ರೋದ ಇತಿಹಾಸದಲ್ಲಿ ಇದು ಮೊದಲ ಬಾರಿಯಾಗಿದೆ.

ಇಸ್ರೋದ ಚಂದ್ರಯಾನ 2ರ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ದಾಳಿಇಸ್ರೋದ ಚಂದ್ರಯಾನ 2ರ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ದಾಳಿ

English summary
ISRO will launch Cartosat-3 and 13 US nanosatellites on November 25 with PSLV -XL rocket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X