ಮತ್ತೊಂದು ಸಾಧನೆಗೆ ಸಾಕ್ಷಿಯಾದ ಇಸ್ರೋ

Posted By:
Subscribe to Oneindia Kannada

ಬೆಂಗಳೂರು, ಮೇ 23 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಇತಿಹಾಸ ನಿರ್ಮಿಸಿದೆ. ದೇಶಿ ನಿರ್ಮಿತ ಮೊದಲ ಮರುಬಳಕೆಯ ಉಪಗ್ರಹ ಉಡ್ಡಯನ ವಾಹಕ ಸ್ಪೇಸ್ ಶಟಲ್ ಯಶಸ್ವಿಯಾಗಿ ಉಡ್ಡಯನಗೊಂಡಿದೆ.

ಸೋಮವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ರೀ ಯೂಸಬಲ್‌ ಲಾಂಚ್‌ ವೆಹಿಕಲ್‌ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್‌ ಅಥವಾ 'ಸ್ಪೇಸ್‌ ಶಟಲ್‌' ನಭೋಮಂಡಲದತ್ತ ಚಿಮ್ಮಿತು. ಶಬ್ದಕ್ಕಿಂತ 5 ಪಟ್ಟು ವೇಗವಾಗಿ ಹಾರುವ ಈ ರಾಕೆಟ್‌ 70 ಕಿ.ಮೀ. ದೂರ ಕ್ರಮಿಸಲಿದೆ. [ಇಸ್ರೋದಲ್ಲಿ ಹಲವು ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ]

isro

ಈ ತಂತ್ರಜ್ಞಾನದಿಂದಾಗಿ ಉಪಗ್ರಹಗಳನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸುವ ರಾಕೆಟ್‌ಗಳು ಅಲ್ಲಿಯೇ ಸುಟ್ಟು ಬೂದಿಯಾಗುವುದಿಲ್ಲ. ಪುನಃ ಭೂಮಿಗೆ ಬಂದು ಮತ್ತೊಂದು ಉಪಗ್ರಹ ಉಡ್ಡಯನಕ್ಕೆ ಸಿದ್ಧವಾಗಲಿವೆ. ಇಂತಹ ಮರುಬಳಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸ್ಪೇಸ್ ಶಟಲ್ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. [ಇಸ್ರೋ ಸಾಧನೆಗೆ ನರೇಂದ್ರ ಮೋದಿ ಶ್ಲಾಘನೆ]

ಮರುಬಳಕೆಯ ಉಪಗ್ರಹ ಉಡ್ಡಯನ ವಾಹಕ ತಂತ್ರಜ್ಞಾನದ ನೈಜ ಪ್ರಯೋಗಕ್ಕೆ ಸುಮಾರು 15 ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈ ತಂತ್ರಜ್ಞಾನ ಯಶಸ್ವಿಯಾದರೆ ಉಪಗ್ರಹ ಉಡಾವಣೆ ಖರ್ಚು ಕಡಿಮೆಯಾಗಲಿದೆ. ಇಂದು ನಡೆದಿರುವುದು ಇದರ ಪ್ರಾಯೋಗಿಕ ಪರೀಕ್ಷೆ ಮಾತ್ರ. [ಅಬ್ಬಬ್ಬಾ ಇಸ್ರೋ, ಒಂದೇ ಬಾರಿಗೆ 22 ಉಪಗ್ರಹ ಉಡಾವಣೆ]

ಪ್ರಾಯೋಗಿಕ ಪರೀಕ್ಷೆಗಾಗಿ ಶ್ರೀಹರಿಕೋಟಾದಿಂದ ನಭೋಮಂಡಲದತ್ತ ಚಿಮ್ಮಿದ ಈ ಉಡಾವಣಾ ವಾಹನ ಬಂಗಾಳ ಕೊಲ್ಲಿಯ ಕಾಲ್ಪನಿಕ ರನ್‌ ವೇಗೆ ಬಂದು ಇಳಿಯಲಿದೆ. ಈ ನೌಕೆಯನ್ನು ಸಮುದ್ರದಿಂದ ಮೇಲೆತ್ತುವ ವಿನ್ಯಾಸ ಮಾಡಿಲ್ಲ. ಆದ್ದರಿಂದ ಇದು ಸಮುದ್ರದಲ್ಲಿ ಮುಳುಗಿ ಹೋಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
೦n May 23, 2016 Monday morning The Indian Space Research Organization (ISRO) successfully test launched the first made in India space shuttle Reusable Launch Vehicle (RLV) from Sriharikota in Andhra Pradesh.
Please Wait while comments are loading...