ಜಿಸ್ಯಾಟ್-6ಎ ಸಂವಹನ ಉಪಗ್ರಹ ಯಶಸ್ವೀ ಉಡಾವಣೆ ಮಾಡಿದ ಇಸ್ರೋ

Subscribe to Oneindia Kannada

ಶ್ರೀಹರಿಕೋಟಾ, ಮಾರ್ಚ್ 29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಿಸ್ಯಾಟ್-6ಎ ( GSAT-6A) ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಸಂಜೆ 4.56ಕ್ಕೆ ಜಿಎಸ್ಎಲ್ ವಿ-ಎಫ್08 ಉಪಗ್ರಹ ಉಡಾವಣಾ ವಾಹಕ ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಉಪಗ್ರಹವನ್ನು ಉಡಾವಣಾ ವಾಹಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸುವುದರೊಂದಿಗೆ ಉಡಾವಣೆ ಯಶಸ್ವಿಯಾಯಿತು. ಜಿಸ್ಯಾಟ್-6ಎ 2,140 ಕೆಜಿಯ ಉಪಗ್ರಹವಾಗಿದ್ದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಈ ಉಪಗ್ರಹ ಉಡಾವಣೆಯಿಂದ ಭಾರತೀಯ ಸೇನೆಗೆ ಇದರಿಂದ ಲಾಭವಾಗಲಿದೆ. ಸೇನೆಗೆ ಬೇಕಾದ ಸಂವಹನ ತಂತ್ರಜ್ಞಾನಗಳು ಮತ್ತಷ್ಟು ಸರಳವಾಗಲಿವೆ. ಇಸ್ರೋ ಕೈಗೊಳ್ಳಲಿರುವ ಚಂದ್ರಯಾನ-2 ಯೋಜನೆಗೆ ಸಂಬಂಧಿಸಿದ ಕೆಲವು ಪ್ರಯೋಗಗಳನ್ನೂ ಇಸ್ರೋ ಈ ಉಡಾವಣೆ ಜೊತೆ ನಡೆಸುತ್ತಿದೆ.

ಇಸ್ರೊದಿಂದ 'ಫಾಲ್ಕೊನ್ ಹೆವಿ' ಮಾದರಿ ರಾಕೆಟ್‌ ಅಭಿವೃದ್ಧಿ

ಚಂದ್ರಯಾನ ಯೋಜನೆಗೆ ಅಕ್ಟೋಬರ್ ನಲ್ಲಿ ಚಾಲನೆ ನೀಡಲು ಇಸ್ರೋ ಉದ್ದೇಶಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ISRO's launches GSLV-F08 carrying the GSAT6A communication satellite from Satish Dhawan Space Centre (SDSC) in Sriharikota, Andhra Pradesh.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ