ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಸ್ಯಾಟ್-6 ಯಶಸ್ವಿ, ಇಸ್ರೋಗೆ ಮತ್ತೊಂದು ಗರಿ

|
Google Oneindia Kannada News

ನವದೆಹಲಿ, ಆಗಸ್ಟ್.27: ಬಾಹ್ಯಾಕಾಶ ಲೋಕದಲ್ಲಿ ಭಾರತ ಮತ್ತೊಂದು ಸಾಧನೆ ಮಾಡಿದೆ. ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಮಧ್ಯಾಹ್ನ ಸಂವಹನ ಉಪಗ್ರಹ ಜಿಸ್ಯಾಟ್-6ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

'ಜಿಎಸ್‌ಎಲ್‌ವಿ (ಭೂಸ್ಥಿರ ಉಪಗ್ರಹ ಉಡಾವಣಾ ವಾಹನ) ಮೂಲಕ ಗುರುವಾರ ಸಂಜೆ 4.52ಕ್ಕೆ ಜಿಸ್ಯಾಟ್-6 ಕೃತಕ ಉಪಗ್ರಹ ಉಡಾವಣೆ ಮಾಡಲಾಯಿತು. ಬುಧವಾರ ಬೆಳಗ್ಗೆಯಿಂದಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.[ನಿಮ್ಮನ್ನು ಬೆರಗುಗೊಳಿಸುವ ಮಂಗಳನ 3ಡಿ ಚಿತ್ರಗಳು]

india

ಜಿಸ್ಯಾಟ್‌-6 ಉಪಗ್ರಹದ ತೂಕ 2,117 ಕೆ.ಜಿ. ಮತ್ತು ಇಂಧನದ ತೂಕ 1132 ಕೆ.ಜಿಯಾಗಿತ್ತು. ಉಪಗ್ರಹ ಯಶಸ್ವಿಯಾಗಿ ಕಕ್ಷೆಯನ್ನು ಸೇರಿದೆ ಎಂದು ಇಸ್ರೋ ಮಾಹಿತಿ ನೀಡಿದೆ.[ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?]

ಈ ಉಪಗ್ರಹದ ಅವಧಿ 9 ವರ್ಷ ಗಳ ಕಾಲ ಇರಲಿದೆ. ಸಾಮಾಜಿಕ ತಾಣಗಳಲ್ಲೂ ಸಹ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ವಿಟ್ಟರ್ ಮೂಲಕ ಲಕ್ಷಾಂತರ ನಾಗರಿಕರು ಅಭಿನಂದನೆ ಸಲ್ಲಿಕೆ ಮಾಡುತ್ತಿದ್ದಾರೆ . ಪ್ರಧಾನಿ ನರೇಂದ್ರ ಮೋದಿ ಸಹ ಇಸ್ರೋ ವನ್ನು ಅಭಿನಂದಿಸಿದ್ದಾರೆ.

English summary
Indian Space Research Organization(ISRO) Geostationary Satellite Launch Vehicle (GSLV-D6) lifted off from Sriharikota spaceport at 4.52pm on Thursday carrying communication satellite GSAT-6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X