ಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆ

Subscribe to Oneindia Kannada
   100ನೇ ಉಪಗ್ರಹವನ್ನು ಯಶಸ್ವೀಯಾಗಿ ಉಡಾವಣೆ ಮಾಡಿದ ಇಸ್ರೋ | Oneindia Kannada

   ಶ್ರೀಹರಿಕೋಟ, ಜನವರಿ 12: ಸ್ವದೇಶಿ ನಿರ್ಮಿತ ಉಪಗ್ರಹಗಳ ಉಡಾವಣೆಯಲ್ಲಿ ಇಸ್ರೋ ಶತಕ ಬಾರಿಸಿದೆ. ಇಸ್ರೋ ತಾನೇ ನಿರ್ಮಿಸಿದ 100ನೇ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ಮೂಲಕ ಹೊಸ ಇತಿಹಾಸವನ್ನು ಬರೆದಿದೆ.

   ಐತಿಹಾಸಿಕ ಮೈಲುಗಲ್ಲು, ಇಸ್ರೋದಿಂದ 100ನೇ ಉಪಗ್ರಹ ಉಡಾವಣೆ

   ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9 ಗಂಟೆ 28 ನಿಮಿಷಕ್ಕೆ 31 ಉಪಗ್ರಹಗಳನ್ನು ಹೊತ್ತು 'ಪಿಎಸ್ಎಲ್ ವಿ - ಸಿ40' ಉಡಾವಣಾ ವಾಹಕ ನಭಕ್ಕೆ ಚಿಮ್ಮಿತು.

   ISRO successfully launches 100th satellite

   ಈ ಉಪಗ್ರಹ ಉಡಾವಣೆ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಒಟ್ಟು 31 ಉಪಗ್ರಹಗಳಲ್ಲಿ ಭಾರತದ ಮೂರು ಮತ್ತು 28 ವಿದೇಶಿ ಉಪಗ್ರಹಗಳಿದ್ದವು. ಭಾರತದ ಮೂರು ಉಪಗ್ರಹ ಉಡಾವಣೆಯೊಂದಿಗೆ ಇಸ್ರೋ 100ನೇ ಉಪಗ್ರಹ ಉಡಾವಣೆ ಮಾಡಿದ ಸಾಧನೆ ಮಾಡಿದೆ.

   ಭಾರತದ ಮೂರು ಉಪಗ್ರಹಗಳಲ್ಲಿ ಹವಾಮಾನ ಸಂಬಂಧಿ ಮಾಹಿತಿ ನೀಡುವ ಕಾರ್ಟೋಸ್ಟಾಟ್-2 ಪ್ರಮುಖ ಉಪಗ್ರಹವಾಗಿದೆ. ಉಳಿದೆರಡು ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳಾಗಿವೆ. ಕಾರ್ಟೋಸ್ಟಾಟ್ 710 ಕೆಜಿ ತೂಕವಿದೆ. ಉಳಿದ 30 ಉಪಗ್ರಹಗಳು ಒಟ್ಟಾಗಿ 613 ಕೆಜಿ ಭಾರವಿದೆ.

   28 ಉಪಗ್ರಹಗಳು ಕೆನಡಾ, ಫಿನ್ಲಂಡ್, ಫ್ರಾನ್ಸ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕಾಗೆ ಸೇರಿವೆ. ಇದರಲ್ಲಿ ಮೂರು ಮೈಕ್ರೋ ಮತ್ತು 25 ನ್ಯಾನೋ ಉಪಗ್ರಹಗಳಾಗಿವೆ. ಎಲ್ಲಾ 31 ಉಪಗ್ರಹ ಉಡಾವಣೆಯೂ ಯಶಸ್ವಿಯಾಗಿದೆ ಎಂದು ಇಸ್ರೊ ಘೋಷಿಸಿದೆ.

   ಹೊಸ ವರ್ಷದ ಕೊಡುಗೆ

   ಯಶಸ್ವಿ ಉಡಾವಣೆ ಬೆನ್ನಿಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎ.ಎಸ್ ಕಿರಣ್ ಕುಮಾರ್, "ಕಳೆದ ಬಾರಿ ಪಿಎಸ್ಎಲ್ ವಿ ಉಡಾವಣೆ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಇವತ್ತಿನ ಯಶಸ್ವೀ ಉಡಾವಣೆ ಎಲ್ಲಾ ಸಮಸ್ಯೆಗಳನ್ನು ಪತ್ತೆ ಹಚ್ಚಿ , ಬಗೆಹರಿಸಲಾಗಿದೆ ಎಂಬುದನ್ನು ಸಾಬೀತು ಮಾಡಿದೆ. ದೇಶಕ್ಕೆ ಹೊಸ ವರ್ಷದ ಕೊಡುಗೆ ನೀಡಲು ಸಂತಸವಾಗುತ್ತಿದೆ," ಎಂದು ಹೇಳಿದರು.

   ಈ ಬಾರಿಯೂ ಎರಡು ಬೇರೆ ಬೇರೆ ಕಕ್ಷೆಗಳಿಗೆ ಉಪಗ್ರಹಗಳನ್ನು ಕೂರಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಸೆಪ್ಟೆಂಬರ್ 26, 2016ರಲ್ಲಿ ಮೊದಲ ಬಾರಿಗೆ ಇಸ್ರೋ ಇದೇ ರೀತಿ ಬೇರೆ ಬೇರೆ ಕಕ್ಷೆಗಳಿಗೆ ಉಪಗ್ರಹಗಳನ್ನು ಜೋಡಿಸುವ ಐತಿಹಾಸಿಕ ಯತ್ನದಲ್ಲಿ ಯಶಸ್ವಿಯಾಗಿತ್ತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Indian Space Research Organisation successfully launches 100th satellite ‘Cartosat-2’ series from Satish Dhawan Space Centre at Sriharikota.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ