ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ಎಲ್‌ವಿ ಎಂಕೆ 3 ಯಶಸ್ಸಿನ 10 ಬೆಳವಣಿಗೆಗಳು

By Kiran B Hegde
|
Google Oneindia Kannada News

ಆಂಧ್ರ ಪ್ರದೇಶ, ಡಿ. 18: ಶ್ರೀಹರಿಕೋಟದಿಂದ ಗುರುವಾರ ಬೆಳಗ್ಗೆ 9.32 ಗಂಟೆಗೆ ಹಾರಿಬಿಟ್ಟ ಮಹತ್ವಾಕಾಂಕ್ಷಿ ಜಿಎಸ್‌ಎಲ್‌ವಿಎಂ-3 ರಾಕೆಟ್‌‌ ಉಡಾವಣೆ ಯೋಜನೆ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಇಸ್ರೋ ಕನಸಿಗೆ ಗರಿ ಮೂಡಿದೆ.

ಈ ರಾಕೆಟ್ 630 ಟನ್‌ ಭಾರವಿತ್ತು. ಭಾರತ ಇದುವರೆಗೆ ಹಾರಿಬಿಟ್ಟಿರುವ ರಾಕೆಟ್‌ಗಳಲ್ಲಿ ಅತ್ಯಂತ ಭಾರವಾದದ್ದು. ಮೂರು ಹಂತಗಳಲ್ಲಿ ಜಿಯೋ-ಸಿಂಕ್ರೊನಾಸ್ ಸೆಟಲೈಟ್‌ ಉಡಾವಣೆ ವಾಹನ ಮಾರ್ಕ್ 3 ರಾಕೆಟ್‌ ಅನ್ನು ಯಶಸ್ವಿಯಾಗಿ ಗುರಿ ತಲುಪಿಸಿದೆ. [ಇಸ್ರೋದಿಂದ ಜಿಎಸ್ಎಲ್ ವಿ ಮಾರ್ಕ್ 3 ಯಶಸ್ವಿ ಉಡಾವಣೆ]

ಕಾಕೆಟ್ ಉಡಾವಣೆಯಿಂದ ಉಂಟಾಗುವ 10 ಪ್ರಮುಖ ಬೆಳವಣಿಗೆಗಳ ಕುರಿತು ಇಲ್ಲಿ ತಿಳಿಸಲಾಗಿದೆ...

  • 160 ಕೋಟಿ ರೂ. ವೆಚ್ಚದ 42.4 ಮೀ. ಉದ್ದದ ರಾಕೆಟನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಗುರುವಾರ ಬೆಳಗ್ಗೆ 9.32 ಗಂಟೆಗೆ ಉಡಾವಣೆ ಮಾಡಲಾಯಿತು.
  • ಈ ರಾಕೆಟ್ 4 ಟನ್‌ಗಳಷ್ಟು ಸಾಮರ್ಥ್ಯದ ಸಂಪರ್ಕ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲದು. ಈಗ ಅತ್ಯಂತ ಭಾರದ ಸಂಪರ್ಕ ಉಪಗ್ರಹಗಳನ್ನು ಸಾಗಿಸಲು ಭಾರತಕ್ಕೆ ವಿದೇಶಿ ವಿನಿಮಯದ ಅಗತ್ಯ ಇಲ್ಲ.
  • ಈ ರಾಕೆಟ್ ವಾತಾವರಣದಲ್ಲಿ ಪ್ರಯಾಣಿಸುವಾಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡಲು ಸಾಧ್ಯ. ಇದರಲ್ಲಿ ಮೊದಲ ಎರಡು ಹಂತಗಳು ರಾಕೆಟ್‌ನ ಎಂಜಿನ್‌ಗಳೇ ಇವೆ. ಮೂರನೇ ಹಂತದಲ್ಲಿರುವ ಕ್ರಯೋಜೆನಿಕ್ ಇಂಜಿನ್ ನಿಷ್ಕ್ರಿಯವಾಗಿದೆ. ಇದನ್ನು ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಲಾಗುತ್ತದೆ.
  • ಕ್ರಯೋಜೆನಿಕ್ ಇಂಜಿನ್‌ನಿಂದ ಚಾಲನೆಗೊಳ್ಳುವ ರಾಕೆಟನ್ನು ಇಸ್ರೋ ಇನ್ನೂ ಅಭಿವೃದ್ಧಿಪಡಿಸುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಈ ತಂತ್ರಜ್ಞಾನ ಅಭಿವೃದ್ಧಿಗೊಳ್ಳುವ ನಿರೀಕ್ಷೆಯಿದೆ.
  • ಜಿಎಸ್ಎಲ್‌ವಿ ಎಂಕೆ 3 ಒಂದು ನೂತನ ರಾಕೆಟ್ ತಂತ್ರಜ್ಞಾನ. ಮಾನವಸಹಿತ ಬಾಹ್ಯಾಕಾಶ ಪ್ರಯಾಣಕ್ಕೆ ಉತ್ತಮ ಮೈಲಿಗಲ್ಲಾಗಲಿದೆ. ಪ್ರಸ್ತುತ ಈ ರಾಕೆಟ್‌ನಲ್ಲಿ ಅಳವಡಿಸಿರುವ ಸಿಬ್ಬಂದಿ ಘಟಕವೇ ಮುಖ್ಯ ಪ್ರಯಾಣಿಕ.
  • ಕಪ್ ಕೇಕ್ ಆಕೃತಿಯ ಈ ಸಿಬ್ಬಂದಿ ಘಟಕದಲ್ಲಿ 2-3 ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು.
  • ಈ ಸಿಬ್ಬಂದಿ ಘಟಕವು ಪ್ರತ್ಯೇಕ ಇಂಜಿನ್ ಹೊಂದಿದ್ದು, ಭೂಮಿಯಿಂದ 127 ಕಿ.ಮೀ. ಎತ್ತರದಲ್ಲಿ ರಾಕೆಟ್‌ನಿಂದ ಪ್ರತ್ಯೇಕಗೊಂಡು ಹಾರಾಟ ನಡೆಸಲಿದೆ. ನಂತರ ಭೂಮಿಗೆ ವಾಪಸ್ ಬರುವಾಗ ಬೃಹತ್ ವೇಗದೊಂದಿಗೆ ವಾತಾವರಣವನ್ನು ಪ್ರವೇಶಿಸಲಿದೆ. ಇದರ ವೇಗ ಕಡಿಮೆ ಮಾಡಲು ಭಾರತದಲ್ಲಿರುವ ಅತ್ಯಂತ ದೊಡ್ಡ ಪ್ಯಾರಾಚೂಟ್ ಅಳವಡಿಸಲಾಗಿದೆ. ಈ ಸಿಬ್ಬಂದಿ ಘಟಕವನ್ನು ಅಂಡಮಾನ್ ದ್ವೀಪಗಳ ಸಮೀಪ ಇಳಿಸಲಾಗುವುದು.
  • ಭಾರತದಲ್ಲಿಯೇ ನಿರ್ಮಿಸಿದ ರಾಕೆಟ್ ಮೂಲಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿ ಇಸ್ರೋ ಪ್ರಸ್ತಾವನೆ ಇಟ್ಟಿದೆ. ಸರ್ಕಾರದಿಂದ ಒಪ್ಪಿಗೆ ಸಿಕ್ಕ 7ರಿಂದ 8 ವರ್ಷಗಳಲ್ಲಿ ಗಗನಯಾತ್ರಿಗಳನ್ನು ಕಳುಹಿಸುವ ಕಾರ್ಯಕ್ರಮ ಆಯೋಜಿಸುವುದಾಗಿ ಇಸ್ರೋ ಹೇಳಿಕೊಂಡಿದೆ.
  • ಮಾನವ ಸಹಿತ ಗಗನಯಾತ್ರೆಗಾಗಿ ಇಸ್ರೋ 12,500 ಕೋಟಿ ರೂ.ಗಳಿಗಾಗಿ ಸರ್ಕಾರದ ಎದುರು ಬೇಡಿಕೆ ಇಟ್ಟಿದೆ. ಈ ಯೋಜನೆ ಯಶಸ್ವಿಯಾದರೆ ಬಾಹ್ಯಾಕಾಶದಲ್ಲಿ ಮಾನವ ಸಹಿತ ಪ್ರಯಾಣ ನಡೆಸಿದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
  • ಪ್ರಸ್ತುತ ಅಮೆರಿಕ, ರಷ್ಯಾ ಹಾಗೂ ಚೀನಾ ಮಾತ್ರ ಮಾನವ ಸಹಿತ ಗಗನಯಾತ್ರೆ ನಡೆಸಬಲ್ಲ ಸಾಮರ್ಥ್ಯ ಹೊಂದಿವೆ.
ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್-3 ರಾಕೆಟ್‌ ಸಾಗಿಸಲು ಹಸಿರು ಬಾವುಟ ತೋರಿಸಲಾಯಿತು.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಇಸ್ರೋ ಕೇಂದ್ರದಲ್ಲಿ ಉಡಾವಣೆಗೆ ಸಜ್ಜಾಗಿ ನಿಂತಿರುವ ರಾಕೆಟ್.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಇಸ್ರೋ ಕೇಂದ್ರದಲ್ಲಿರುವ ರಾಕೆಟ್.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಇಸ್ರೋ ಕೇಂದ್ರದಲ್ಲಿರುವ ರಾಕೆಟ್ ಜೋಡಿಸಿದ್ದು ಹೀಗೆ.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ರಾಕೆಟ್ ಜೋಡಣೆಯ ವಿವಿಧ ಹಂತ.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಉಡಾವಣೆಗೆ ಸಾಗಿಸಲು ಸಿದ್ಧಗೊಂಡಿರುವ ರಾಕೆಟ್.

ಉಡಾವಣೆಗಾಗಿ ರಾಕೆಟ್ ಸಾಗಿಸಿದ್ದು ಹೀಗೆ.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಉಡಾವಣೆಗಾಗಿ ರಾಕೆಟ್ ಸಾಗಿಸಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಉಡಾವಣೆ ಕೇಂದ್ರದತ್ತ ರಾಕೆಟ್ ಸಾಗಿಸಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಬೆಂಕಿ ತಗುಲಿದ ರಾಕೆಟ್ ಬಾಹ್ಯಾಕಾಶದತ್ತ ಮುನ್ನುಗ್ಗಿತು.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಬಾಹ್ಯಾಕಾಶಕ್ಕೆ ನೆಗೆದ ರಾಕೆಟ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕಾಗ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಉಡಾವಣೆಗೊಂಡ ರಾಕೆಟ್ ಕ್ಯಾಮೆರಾ ಕಣ್ಣಲ್ಲಿ...

ಉಡಾವಣೆಗೊಂಡ ರಾಕೆಟ್ ವೇಗದಿಂದ ಸಾಗುತ್ತಿರುವುದು.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಉಡಾವಣೆಗೊಂಡ ರಾಕೆಟ್ ದೂರ ಸಾಗಿದ್ದು.

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ಜಿಎಸ್ಎಲ್‌ವಿ ಮಾರ್ಕ್ -3 ರಾಕೆಟ್ ಉಡಾವಣೆಗೊಂಡಿದ್ದು ಹೀಗೆ...

ರಾಕೆಟ್ ಅಂತಿಮ ಕ್ಷಣದಲ್ಲಿ ಕಣ್ಣಿಗೆ ಬಿದ್ದಿದ್ದು.

English summary
India's heaviest rocket Geo-Synchronous Satellite Launch Vehicle Mark III mission will take the Indian Space Research Organisation a step closer to sending astronauts to space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X