ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಿಕ್ಕಟ್ಟಿನ ನಡುವೆಯೂ ಇಸ್ರೋ ಮಹತ್ವದ ಹೆಜ್ಜೆ: 59 ದೇಶಗಳ ಜತೆ ಒಪ್ಪಂದ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಗತಿ ಹೊಂದುವ ಆಕಾಂಕ್ಷೆ ಹೊಂದಿರುವ ದೇಶಗಳಿಗೆ ಸಹಾಯ ಮಾಡುವ ಸಲುವಾಗಿ ಬಾಹ್ಯಾಕಾಶ ಸಹಕಾರಕ್ಕೆ ಸಂಬಂಧಿಸಿದಂತೆ 59 ದೇಶಗಳೊಂದಿಗೆ ಒಟ್ಟು 250 ದಾಖಲೆಗಳಿಗೆ ಭಾರತ ಸಹಿ ಹಾಕಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಸಮಾವೇಶದಲ್ಲಿ (ಐಎಸಿ) ಮಾತನಾಡಿದ ಕೆ. ಶಿವನ್, ರಷ್ಯಾ, ಅಮೆರಿಕ, ಫ್ರಾನ್ಸ್, ಜಪಾನ್ ಮತ್ತು ಇಸ್ರೇಲ್ ಜತೆ ಭಾರತವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ದೇಶಗಳೊಂದಿಗಿನ ಹಾಲಿ ಮತ್ತು ಭವಿಷ್ಯದ ಯೋಜನೆಗಳ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಚಂದ್ರಯಾನ-3 ಉಡಾವಣೆ: ಈ ಬಾರಿ ಆರ್ಬಿಟರ್ ಇರುವುದಿಲ್ಲಚಂದ್ರಯಾನ-3 ಉಡಾವಣೆ: ಈ ಬಾರಿ ಆರ್ಬಿಟರ್ ಇರುವುದಿಲ್ಲ

ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗಾಗಿ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದೆ. ಅತ್ಯಂತ ಮಹತ್ವದ ವೈದ್ಯಕೀಯ ತಂತ್ರಜ್ಞಾನಗಳನ್ನು ಫ್ರಾನ್ಸ್ ಒದಗಿಸುತ್ತಿದೆ. ಆದರೆ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಗಗನಯಾನ ಯೋಜನೆಯು ಸಣ್ಣ ಬದಲಾವಣೆಯನ್ನು ಕಾಣಲಿದೆ. 2022ರ ಆಗಸ್ಟ್ ತಿಂಗಳಲ್ಲಿ ಗಗನಯಾನ ಯೋಜನೆ ನಡೆಸಲು ಗುರಿ ಹೊಂದಲಾಗಿತ್ತು. ಈ ಗುರಿಯಲ್ಲಿ ಚಿಕ್ಕ ಬದಲಾವಣೆಯಾಗಲಿದೆ. ಯೋಜನೆಗೆ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಇತರೆ ಬಾಹ್ಯಾಕಾಶ ಪರಿಣತ ದೇಶಗಳ ಸಹಾಯ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮುಂದೆ ಓದಿ.

ನಾಸಾ ಜತೆ 'ನಿಸಾರ್' ಉಪಗ್ರಹ

ನಾಸಾ ಜತೆ 'ನಿಸಾರ್' ಉಪಗ್ರಹ

ಮಾನವ ಸಹಿತ ಬಾಹ್ಯಾಕಾಶ ಹಾರಾಟದಿಂದ ಗ್ರಹಗಳ ಪತ್ತೆ ಮತ್ತು ಜಂಟಿ ಕಾರ್ಯಾಚರಣೆಗಳ ವಿವಿಧ ಹಂತಗಳಲ್ಲಿ ಸಹಭಾಗಿತ್ವ ನಡೆಯಲಿದೆ. ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚೆರ್ ರೇಡಾರ್ 'ನಿಸಾರ್' ಉಪಗ್ರಹ ಒಪ್ಪಂದ ನಡೆದಿದೆ. ಅಮೆರಿಕದ ಭೂಗರ್ಭ ಸಮೀಕ್ಷೆ (ಯುಎಸ್‌ಜಿಎಸ್) ಜತೆ ಉಪಗ್ರಹ ದತ್ತಾಂಶಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸಹ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಜಂಟಿ ಉಪಗ್ರಹ ಉಡಾವಣೆ

ಜಂಟಿ ಉಪಗ್ರಹ ಉಡಾವಣೆ

ಫ್ರಾನ್ಸ್ ನಮ್ಮ ಪ್ರಮುಖ ಪಾಲುದಾರ ದೇಶವಾಗಿದೆ. ಮೇಘಾ ಮತ್ತು ಸರಳ್ ಎಂಬ ಎರಡು ಜಂಟಿ ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಮತ್ತೊಂದು ಯೋಜನೆ ಪ್ರಗತಿಯಲ್ಲಿದೆ. ಜಪಾನ್ ಬಾಹ್ಯಾಕಾಶ ಸಂಸ್ಥೆ ಜಕ್ಸಾ ಜತೆ ಇಸ್ರೋ ಸಹಭಾಗಿತ್ವ ಹೊಂದಿದ್ದು, ಜಂಟಿಯಾಗಿ ಚಂದ್ರ ಧ್ರುವ ಸಂಶೋಧನಾ ಯೋಜನೆ ನಡೆಸಲಿದೆ. ಜರ್ಮನ್ ಸಂಸ್ಥೆಯೊಂದಿಗೆ ರೋಬೋಟಿಕ್ಸ್‌ಗಳಲ್ಲಿ ಡಿಎಲ್‌ಆರ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಇಸ್ರೇಲ್ ಬಾಹ್ಯಾಕಾಶ ಸಂಸ್ಥೆಯೊಂದಿಗೆ (ಐಎಸ್‌ಎ) ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆ ಮತ್ತು ಬಾಹ್ಯಾಕಾಶದ ಆಳದಲ್ಲಿನ ನೆಟ್ವರ್ಕ್ ಆಂಟೆನಾ ಸಪೋರ್ಟ್ ಕ್ಷೇತ್ರದಲ್ಲಿ ಸಹಕಾರ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಚಂದ್ರನ ಅಂಗಳಕ್ಕೆ ಕಾಲಿಟ್ಟು ಒಂದು ವರ್ಷ ಕಳೆದ ಚಂದ್ರಯಾನ-2ರ ಆರ್ಬಿಟರ್ಚಂದ್ರನ ಅಂಗಳಕ್ಕೆ ಕಾಲಿಟ್ಟು ಒಂದು ವರ್ಷ ಕಳೆದ ಚಂದ್ರಯಾನ-2ರ ಆರ್ಬಿಟರ್

ರಾಕೆಟ್ ಉಡಾವಣೆ

ರಾಕೆಟ್ ಉಡಾವಣೆ

ನವೆಂಬರ್‌ನಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆ ಮಾಡಲು ಇಸ್ರೋ ಯೋಜನೆ ನಡೆಸಿದೆ. ಇಸ್ರೋದ ಅನೇಕ ಮಹತ್ವದ ಯೋಜನೆಗಳು ಕೊರೊನಾ ವೈರಸ್ ಪಿಡುಗಿನ ಕಾರಣ ಹಿನ್ನಡೆ ಅನುಭವಿಸಿವೆ. ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆ ಈ ವರ್ಷದ ಮೊದಲ ಉಡಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.

ನವೆಂಬರ್ ಮೊದಲ ವಾರದಲ್ಲಿ ಉಡಾವಣೆ

ನವೆಂಬರ್ ಮೊದಲ ವಾರದಲ್ಲಿ ಉಡಾವಣೆ

ಭಾರತದ ಬಾಹ್ಯಾಕಾಶ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಕೆಲಸ ನಿಭಾಯಿಸಲು ದೂರದ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ಇದರಿಂದಾಗಿ ನಮ್ಮ ಚಟುವಟಿಕೆಗಳಲ್ಲಿ ವಿಳಂಬವಾಗುತ್ತಿದೆ. ಪಿಎಸ್‌ಎಲ್‌ವಿ ಸಿ-49 ಅನ್ನು ನವೆಂಬರ್ ಮೊದಲ ವಾರ ಉಡಾವಣೆ ಮಾಡಲು ಆಲೋಚನೆ ನಡೆಸುತ್ತಿದ್ದೇವೆ. ನಂತರ ಎಲ್ಲ ಯೋಜನೆಗಳು ನಿಗದಿಯಂತೆ ನಡೆಯಲಿವೆ ಎಂದು ಹೇಳಿದ್ದಾರೆ.

ಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆಚಂದ್ರನಲ್ಲಿ ಮನೆ ಕಟ್ಟಲು ಬೆಂಗಳೂರಿನ ವಿಜ್ಞಾನಿಗಳಿಂದ ವಿಶೇಷ ಇಟ್ಟಿಗೆ ತಯಾರಿಕೆ

English summary
India has signed 250 documents with 59 countries in the field of space cooperation said, ISRO chairman K Sivan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X