ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಶುಕ್ರಗ್ರಹಕ್ಕೆ ನೌಕೆ; 2024 ಡಿಸೆಂಬರ್ ದಿನ ಯಾಕೆ?

|
Google Oneindia Kannada News

ನವದೆಹಲಿ, ಮೇ 4: ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಗಗನನೌಕೆಗಳನ್ನ ಯಶಸ್ವಿಯಾಗಿ ಕಳುಹಿಸಿರುವ ಭಾರತದ ಮುಂದಿನ ಗಗನಯೋಜನೆ ಟಾರ್ಗೆಟ್ ಶುಕ್ರ ಗ್ರಹವಾಗಿದೆ. ನಮ್ಮ ಸೌರಮಂಡಲದ ಅತ್ಯಂತ ಬಿಸಿ ಗ್ರಹ ಎನಿಸಿದ ಶುಕ್ರನ ಗರ್ಭದೊಳಗೆ ಅಡಗಿರುವ ರಹಸ್ಯವನ್ನು ಭೇದಿಸುವ ನಿಟ್ಟನಲ್ಲಿ ಇಸ್ರೋದ ಶುಕ್ರಯಾನ ಯೋಜನೆ ಉದ್ದೇಶ ಇರಲಿದೆ.

2024 ಡಿಸೆಂಬರ್ ತಿಂಗಳಿನಲ್ಲಿ ಶುಕ್ರ ಗ್ರಹಕ್ಕೆ ನೌಕೆ ಕಳುಹಿಸುವ ಯೋಜನೆಯನ್ನು ಇಸ್ರೋ ರೂಪಿಸಿದೆ. ಶುಕ್ರ ಗ್ರಹದ ಸುತ್ತ ಇರುವ ಸಲ್‌ಫ್ಯೂರಿಕ್ ಆ್ಯಸಿಡ್ ಕ್ಲೌಡ್‌ಗಳ ರಹಸ್ಯವನ್ನು ಪತ್ತೆ ಮಾಡುವುದು, ಗ್ರಹದ ಜ್ವಾಲಾಮುಖಿ ಪ್ರದೇಶಗಳು, ಲಾವಾ ಸ್ಫೋಟ, ಗ್ರಹದ ರಚನೆ, ಅದರ ಪರಿಸರ ವಿವರ ಇತ್ಯಾದಿಯನ್ನು ಅಧ್ಯಯನ ನಡೆಸಲು ಇಸ್ರೋದ ಶುಕ್ರ ಯೋಜನೆಯಲ್ಲಿ ಉದ್ದೇಶಿಸಲಾಗಿದೆ.

ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ರಾಕೆಟ್ ಮೇಲೆಯೂ Z ಅಕ್ಷರ!ಬಾಹ್ಯಾಕಾಶಕ್ಕೆ ಹಾರಿದ ರಷ್ಯಾದ ರಾಕೆಟ್ ಮೇಲೆಯೂ Z ಅಕ್ಷರ!

ಯೋಜನೆಗೆ 2024, ಡಿಸೆಂಬರ್ ಕಾಲ ಯಾಕೆ?; ಈ ಅವಧಿಯಲ್ಲಿ ಭೂಮಿಗೆ ಶುಕ್ರ ಗ್ರಹ ಸಮೀಪ ಬರುತ್ತದೆ. ಆಗ ಗಗನ ನೌಕೆಯನ್ನ ಹೆಚ್ಚು ಶಕ್ತಿಯ ಅಗತ್ಯ ಇಲ್ಲದೇ ಶುಕ್ರ ಗ್ರಹ ಕಕ್ಷೆಗೆ ಸೇರಿಸಲು ಸಾಧ್ಯವಾಗುತ್ತದೆ ಎಂಬುದು ಇಸ್ರೋದ ಚಿಂತನೆ. ಮತ್ತೆ ಇಂಥ ಕಾಲ ಸಿಗಲು 2031ರವರೆಗೆ ಕಾಯಬೇಕಾಗುತ್ತದೆ. ಹೀಗಾಗಿ, 2024ಕ್ಕೆ ಶುಕ್ರ ಯೋಜನೆ ಪೂರ್ಣಗೊಳಿಸಲು ಇಸ್ರೋ ನಿರ್ಧರಿಸಿದೆ.

ISRO readies spacecraft for Shukrayaan-1 on 2024 December

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಶುಕ್ರಯಾನ-1 ಯೋಜನೆ ಬಗ್ಗೆ ಮಾತನಾಡಿ, "ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಾಗಿದ್ದು, ವೆಚ್ಚವನ್ನು ಅಂದಾಜಿಸಲಾಗಿದೆ. ಭಾರತದಲ್ಲಿ ಇಂದು ತಾಂತ್ರಿಕ ನಿಪುಣತೆ ಲಭ್ಯ ಇರುವುದರಿಂದ ಬಹಳ ಕಡಿಮೆ ಅವಧಿಯಲ್ಲಿ ಶುಕ್ರ ಗ್ರಹ ಯೋಜನೆ ನಡೆಸಲು ಸಾಧ್ಯವಾಗುತ್ತಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ISRO readies spacecraft for Shukrayaan-1 on 2024 December

ಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜುಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜು

ಮಂಗಳ, ಚಂದ್ರ ಯೋಜನೆಗಳು: ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಎರಡು ಬಾರಿ ಭಾರತ ಚಂದ್ರಯಾನ ಯೋಜನೆ ಕೈಗೊಂಡಿದೆ. ಎರಡೂ ಕೂಡ ಯಶಸ್ವಿಯಾಗಿದೆ. ಚಂದ್ರನಲ್ಲಿ ನೀರು ಇರುವುದನ್ನು ಮೊದಲು ಗುರುತಿಸಿದ್ದು ಭಾರತವೇ. ನಂತರ ಮಂಗಳಯಾನ ಯೋಜನೆ ನಡೆಸಲಾಯಿತು. ಆದರೆ, ಗ್ರಹದ ನೆಲದ ಮೇಲೆ ರೋವರ್ ಅನ್ನು ಸುರಕ್ಷಿತವಾಗಿ ಇಳಿಸಲು ಸಾಧ್ಯವಾಗದೇ ಹೋಗಿದ್ದು ಬಿಟ್ಟರೆ ಮಂಗಳಯಾನ ಬಹುತೇಕ ಯಶಸ್ವಿಯಾಗಿದೆ. ಮಂಗಳನ ಕಕ್ಷೆಯಲ್ಲಿ ನೌಕೆ ಇದ್ದು ಅಲ್ಲಿಂದಲೇ ಗ್ರಹದ ಅಧ್ಯಯನ ನಡೆಸಲಾಗುತ್ತಿದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ ಚಂದ್ರಯಾನ್-3 ನಡೆಯಲಿದೆ.

(ಒನ್ಇಂಡಿಯಾ ಸುದ್ದಿ)

English summary
After sending missions to the Moon and Mars, the ISRO is now readying a spacecraft to orbit Venus to study what lies below the surface of the solar system's hottest planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X