ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಅಂಗಳದ ಜ್ವಾಲಾಮುಖಿ ನೋಡಿದ್ದೀರಾ?

|
Google Oneindia Kannada News

ಬೆಂಗಳೂರು, ಮಾ. 6: ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತಕ್ಕೆ ಹೊಸ ಕೀರ್ತಿ ತಂದುಕೊಟ್ಟ ಮಂಗಳಯಾನ ಮತ್ತಷ್ಟು ಚಿತ್ರಗಳನ್ನು ಸೆರೆಹಿಡಿದು ಕಳಿಸಿದೆ. ಈ ಬಾರಿ ಮಂಗಳನಲ್ಲಿರುವ ಅತಿದೊಡ್ಡ ಜ್ವಾಲಾಮುಖಿಯ ಚಿತ್ರವನ್ನು ಕಳಿಸಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಳಿಸಿರುವ ಮಂಗಳ ಶೋಧಕ ಉಪಗ್ರಹ ಮಂಗಳನ ಭೂ ವೈಶಿಷ್ಟ್ಯಗಳ ಬಗೆಗೂ ಚಿತ್ರ ತೆಗೆದು ವಿಜ್ಞಾನಿಗಳಿಗೆ ರವಾನಿಸಿದೆ.[ಪ್ರತಿದಿನ ಮಂಗಳ ಮೇಲ್ಮೈ ಬದಲಾವಣೆ!]

mars

ಭೂಮಿಯ ಅತಿ ದೊಡ್ಡ ಜ್ವಾಲಾಮುಖಿ ಹವಾಯಿಯಲ್ಲಿರುವ ಮೌನಾ ಲೋವಾಕ್ಕಿಂತ ಮಂಗಳನಲ್ಲಿರುವ ಆರ್ಸಿಯಾ ಮಾನ್ಸ್‌ 30 ಪಟ್ಟು ದೊಡ್ಡದಿದೆ. 435 ಕಿ.ಮೀ. ವಿಸ್ತಾರವನ್ನು ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 10, 707 ಕಿ.ಮೀ. ದೂರದಿಂದ ಈ ಚಿತ್ರವನ್ನು ತೆಗೆಯಲಾಗಿದೆ. ಇನ್ನು ಮ್ಯಾರಿನೆರಿಸ್‌ ಕೆನ್ಯಾನ್‌ 4 ಸಾವಿರ ಕಿ.ಮೀ. ಉದ್ದದ ಕುಳಿಯಾಗಿದ್ದು, 200 ಕಿ.ಮೀ. ಅಗಲ ಮತ್ತು 7 ಕಿ.ಮೀ. ಆಳವಿದೆ. ಈ ಕುಳಿಯ ದೃಶ್ಯವನ್ನು 24 ಸಾವಿರ ಕಿ.ಮೀ. ಎತ್ತರದಿಂದ ಮಂಗಳಯಾನ ಸೆರೆಹಿಡಿದಿದೆ.[ವಿಡಿಯೋ: ದಕ್ಷಿಣ ಅಮೆರಿಕದ ಅಗ್ನಿಪರ್ವತ ಸ್ಫೋಟ]

mars

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಸ್ರೋ ಈ ಚಿತ್ರಗಳನ್ನು ಹಾಕಿಕೊಂಡಿದ್ದು, ಆರ್ಸಿಯಾ ಮಾನ್ಸ್‌ ಹೆಸರಿನ ಜ್ವಾಲಾಮುಖಿ, ಮ್ಯಾರಿನೆರಿಸ್‌ ಕೆನ್ಯಾನ್‌ ಹೆಸರಿನ ದೊಡ್ಡ ಕುಳಿ ಸೇರಿದಂತೆ ಮಂಗಳನ ಮೇಲ್ಮೈ ಗೆ ಸಂಬಂಧಿಸಿದ 3 ಚಿತ್ರಗಳನ್ನು ಪ್ರಕಟಿಸಿದೆ.
English summary
Three images captured by Mangalyaan - India's first spacecraft to Mars - have been uploaded on social media. The images have been put up by Indian Space Research Organisation (Isro).Images at this coarse resolution are use full for understanding geological processes at regional scale, Isro said on its facebook page.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X