ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾರ್ಟೋಸ್ಯಾಟ್ 2' ತೆಗೆದ ಚೊಚ್ಚಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 17: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 'ಕಾರ್ಟೋಸ್ಯಾಟ್ - 2' ಉಪಗ್ರಹ ತೆಗೆದ ಚೊಚ್ಚಲ ಚಿತ್ರವನ್ನು ಬಿಡುಗಡೆ ಮಾಡಿದೆ.

ಜನವರಿ 12ರಂದು 'ಕಾರ್ಟೋಸ್ಯಾಟ್ - 2' ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಇದೊಂದು ಹವಾಮಾನ ಮಾರ್ಗದರ್ಶಿ ಉಪಗ್ರಹವಾಗಿದ್ದು ತನ್ನ ಚೊಚ್ಚಲ ಚಿತ್ರವನ್ನು ಜನವರಿ 15ರಂದು ಸೆರೆ ಹಿಡಿದಿದೆ. ಈ ಚಿತ್ರವನ್ನೀಗ ಇಸ್ರೋ ಮಂಗಳವಾರ ಬಿಡುಗಡೆ ಮಾಡಿದೆ.

ಇಸ್ರೋದ ನೂತನ ಉಪಗ್ರಹದಿಂದ ಗಡಿಯಾಚೆಗಿನ ಕಣ್ಗಾವಲಿಗೆ ಆನೆಬಲಇಸ್ರೋದ ನೂತನ ಉಪಗ್ರಹದಿಂದ ಗಡಿಯಾಚೆಗಿನ ಕಣ್ಗಾವಲಿಗೆ ಆನೆಬಲ

ಮಧ್ಯಪ್ರದೇಶದ ಇಂದೋರ್ ನಗರದ ಚಿತ್ರವನ್ನು 'ಕಾರ್ಟೋಸ್ಯಾಟ್ - 2' ಸೆರೆ ಹಿಡಿದಿದ್ದು, ಇದರಲ್ಲಿ ಹೊಲ್ಕಾರ್ ಕ್ರಿಕೆಟ್ ಸ್ಟೇಡಿಯಂ ಸ್ಪಷ್ಟವಾಗಿ ಕಾಣುತ್ತಿದೆ.

 ISRO releases first image taken by Cartosat-2 satellite

ಹೀಗಿದ್ದೂ ಇದು ಹೈಡೆಫಿನೇಷನ್ ಚಿತ್ರವಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಉಪಗ್ರಹ ತನ್ನ ಅಂತಿಮ ಕಾರ್ಯಾಚರಣೆ ಕೆಲವೇ ದಿನಗಳಲ್ಲಿ ಆರಂಭಿಸಲಿದ್ದು ಪ್ಯಾನ್ ಕ್ರೊಮಾಟಿಕ್ (ಕಪ್ಪು - ಬಿಳುಪು) ಮತ್ತು ಮಲ್ಟಿ ಸ್ಪೆಕ್ಟ್ರಲ್ (ಬಣ್ಣದ) ಕ್ಯಾಮರಾಗಳ ಮೂಲಕ ನಿರ್ಧಿಷ್ಟ ಪ್ರದೇಶದ ಹೈ-ರೆಸಲ್ಯೂಷನ್ ಚಿತ್ರಗಳನ್ನು ಕಳುಹಿಸಿಕೊಡಲಿದೆ ಎಂದು ಇಸ್ರೋ ಹೇಳಿದೆ.

ಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆಶತಕ ಬಾರಿಸಿದ ಇಸ್ರೋ, 100ನೇ ಉಪಗ್ರಹ ಯಶಸ್ವೀ ಉಡಾವಣೆ

'ಕಾರ್ಟೋಸ್ಯಾಟ್ - 2' ಉಪಗ್ರಹ ಭಾರತದ ಕಣ್ಗಾವಲು ವ್ಯವಸ್ಥೆಗೆ ಮತ್ತಷ್ಟು ಶಕ್ತಿ ತುಂಬಲಿದೆ. ಭಾರತದ ಗಡಿ ಮೇಲೆ ಕಣ್ಗಾವಲು ಇಡುವುದರ ಜತೆಗೆ ನಗರಗಳ ಪ್ಲಾನಿಂಗ್ ಗೂ ಇದು ಸಹಾಯಕವಾಗಲಿದೆ.

ಕರಾವಳಿ ಭೂ ಪ್ರದೇಶದ ಬಳಕೆ, ರಸ್ತೆ ಸಂಪರ್ಕ, ನೀರಾವರಿ ಹಂಚಿಕೆ, ಭೂಮಿಯ ಬಳಕೆ ಮೊದಲಾದ ಕೆಲಸಗಳಿಗೆ ಕಾರ್ಟೋಸ್ಯಾಟ್ ಸಹಾಯ ಮಾಡಲಿದೆ.

English summary
The first day image captured by India’s recently launched weather observation Cartosat-2 series satellite shows a part of Indore city in Madhya Pradesh with the Holkar Cricket Stadium in the centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X