ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶಕ್ಕೆ ಪಯಣಿಸಲಿದೆ ಹೈಸ್ಕೂಲು ವಿದ್ಯಾರ್ಥಿಗಳ 'ಕಲಾಂ ಸ್ಯಾಟಲೈಟ್'

|
Google Oneindia Kannada News

ಶ್ರೀಹರಿಕೋಟಾ (ಆಂಧ್ರಪ್ರದೇಶ) ಜನವರಿ 23: ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ನಿರ್ಮಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಗುರುವಾರ ಮತ್ತೊಂದು ಸಾಧನೆಗೆ ಕಾತರದಿಂದ ಕಾದಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಉಡಾವಣಾ ವಾಹನ- ಸಿ44ಅನ್ನು (ಪಿಎಸ್ಎಲ್‌ವಿ-C44) ಉಡಾವನೆ ಮಾಡಲಿದ್ದು, ಅದರಲ್ಲಿ ಕಲಾಂಸ್ಯಾಟ್ ಕೃತಕ ಉಪಗ್ರಹ (ಫೆಸ್ಟೊ) ಮತ್ತು ಮೈಕ್ರೊಸ್ಯಾಟ್-ಆರ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ರವಾನಿಸಲಿದೆ.

ಇಸ್ರೋ ಚಂದ್ರಯಾನ-2 ಮಾರ್ಚ್‌ನಲ್ಲಿ ಉಡಾವಣೆ: ಕೆ. ಶಿವನ್ ಇಸ್ರೋ ಚಂದ್ರಯಾನ-2 ಮಾರ್ಚ್‌ನಲ್ಲಿ ಉಡಾವಣೆ: ಕೆ. ಶಿವನ್

ಪಿಎಸ್ಎಲ್‌ವಿ-C44ರ ಉಡಾವಣೆಗೆ ಬುಧವಾರ ಸಂಜೆ 7.37ರಿಂದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕ್ಷಣಗಣನೆ ಆರಂಭವಾಗಿದ್ದು, ಗುರುವಾರ ರಾತ್ರಿ 11.37ಕ್ಕೆ ಉಡಾವಣೆಗೆ ಸಮಯ ನಿಗದಿಪಡಿಸಲಾಗಿದೆ.

isro pslv c44 kalamsat microsat sriharikota satellites

ಕಲಾಂಸ್ಯಾಟ್ ವಿದ್ಯಾರ್ಥಿ ಉಪಗ್ರಹವಾಗಿದ್ದು, ಇದಕ್ಕೆ ದೇಶದ ಮಾಜಿ ಅಧ್ಯಕ್ಷ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನಿರಿಸಲಾಗಿದೆ.

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಯಲ್ಲಿ ಮಹಿಳೆ

ತಮಿಳುನಾಡಿನ ಪಲ್ಲಪಟ್ಟಿಯ 18 ವರ್ಷದ ಪ್ರೌಢಶಾಲೆ ವಿದ್ಯಾರ್ಥಿ ರಿಫತ್ ಶಾರೂಕ್ ಎಂಬಾತನ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ತಯಾರಿಸಿದ ಪುಟ್ಟ ಉಪಗ್ರಹ ಇದಾಗಿದೆ. ಕೇವಲ 64 ಗ್ರಾಂ ತೂಕವಿರುವ ಈ ನೌಕೆಯು ಜಗತ್ತಿನ ಅತಿ ಹಗುರ ಮತ್ತು ಚಿಕ್ಕ ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬಾಹ್ಯಾಕಾಶದಲ್ಲಿ ಒಂದು ವಾರ ಕಳೆಯಲಿದ್ದಾರೆ ಮೂವರು ಭಾರತೀಯರು ಬಾಹ್ಯಾಕಾಶದಲ್ಲಿ ಒಂದು ವಾರ ಕಳೆಯಲಿದ್ದಾರೆ ಮೂವರು ಭಾರತೀಯರು

ಪಿಎಸ್‌ಎಲ್‌ವಿಯ ನಾಲ್ಕನೆಯ ಹಂತದಿಂದ ಈ ಉಡಾವಣೆ ನಡೆಯಲಿದ್ದು, ಉಪಗ್ರಹ ಉಡಾವಣೆಗೆ ಮಾತ್ರವಲ್ಲದೆ ಬಾಹ್ಯಾಕಾಶದಲ್ಲಿ ಪ್ರಯೋಗ ನಡೆಸಲು ಮೊದಲ ಬಾರಿಗೆ ಉಡ್ಡಯನ ರಾಕೆಟ್‌ಅನ್ನು ಬಳಸಿಕೊಳ್ಳಲಾಗುತ್ತಿದೆ.

English summary
ISRO will launch the PSLV-C44 carrying Kalamsat and Microsat-R satellite into space on Thursday from Sriharikota in Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X