ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನಿನೊಂದಿಗೆ ಚಂದ್ರಯಾನ-3 ಕ್ಕೆ ಸಿದ್ಧವಾಗುತ್ತಿದೆಯೇ ಭಾರತ?

|
Google Oneindia Kannada News

ನವದೆಹಲಿ, ಜುಲೈ 23: ಚಂದ್ರಯಾನ -2 ರ ಯಶಸ್ಸಿನ ನಂತರ ಇಸ್ರೋ ಮತ್ತೊಂದು ಮಹತ್ದದ ಮೈಲಿಗಲ್ಲಿಗೆ ಕೈಹಾಕಿದೆ. ಜಪಾನಿನನೊಂದಿಗೆ ಕೈಜೋಡಿಸಿ 2024 ರ ಹೊತ್ತಿಗೆ ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಕಳಿಸಿ, ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ತರುವ ಪ್ರಯತ್ನವನ್ನು ಭಾರತ ಮಾಡಲಿದೆ ಎನ್ನಲಾಗುತ್ತಿದೆ.

ಈಗಾಗಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ಜಪಾನಿನ ಏರೋಸ್ಪೇಸ್ ಎಕ್ಸ್ಪೊರೇಶನ್ ಏಜೆನ್ಸಿ(JAXA) ಜೊತೆ ಈಗಾಗಲೇ ಈ ಕುರಿತು ಮಾತುಕತೆಯನ್ನು ಆರಂಭಿಸಿದೆ.

ಚಂದ್ರಯಾನ-2: ಉದ್ದೇಶ ಹಾಗೂ ಉಪಯೋಗವೇನು? ಚಂದ್ರಯಾನ-2: ಉದ್ದೇಶ ಹಾಗೂ ಉಪಯೋಗವೇನು?

ಬೆಂಗಳೂರಿನಲ್ಲಿ 2017 ರಲ್ಲಿ ನಡೆದಿದ್ದ ಏಶಿಯಾ ಪೆಸಿಫಿಕ್ ರೀಜನಲ್ ಸ್ಪೇಸ್ ಏಜೆನ್ಸಿ ಫೋರಂ(APRSAF-24) ನಲ್ಲೇ ಚಂದ್ರಯಾನ - 3 ರ ಉಲ್ಲೇಖವಾಗಿತ್ತು.

ISRO planning to Chandrayaan-3 in partnership with Japan

ಅದೂ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು 2018 ರ ಅಕ್ಟೋಬರ್ ನಲ್ಲಿ ಜಪಾನಿಗೆ ಭೇಟಿ ನೀದಿದ್ದ ಸಮಯದಲ್ಲೂ ನರೇಂದ್ರ ಮೋದಿ ಅವರು ಜಪಾನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಉಂಬ ಸರ್ಕಾರಗಳ ನಡುವೆ ಲೂನಾರ್ ಪೊಲಾರ್ ಎಕ್ಸ್ಪ್ಲೊರೇಶನ್ ಮಿಶನ್ ಅನ್ನು ಜಂಟಿಯಾಗಿ ಆಯೋಜಿಸುವ ಕುರಿತು ಮಾತುಕತೆ ನಡೆದಿತ್ತು.

ಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿ

ಇಂಡೋ-ಜಪಾನ್ ಜಂಟಿಯಾಗಿ ಆಯೋಜಿಸಲಿರುವ ಚಂದ್ರಯಾನದ ಕುರಿತಂತೆ ಎರಡು ವರ್ಷಗಳ ಹಿಂದೆಯೇ ಅಂದಿನ ಇಸ್ರೋ ಚೇರ್ ಮನ್ ಎ ಎಸ್ ಕಿರಣ್ ಕುಮಾರ್ ಮತ್ತು ಜಾಕ್ಸಾ ಅಧ್ಯಕ್ಷ ನಾವೋಕಿ ಓಕುಮುರಾ ಅವರ ನಡುವೆ ಚರ್ಚೆ ನಡೆದಿತ್ತು. ಎರಡು ದೇಶಗಳೂ ಬಾಹ್ಯಾಕಾಶ ಲೋಕದಲ್ಲಿ ಮೈಲಿಗಲ್ಲು ನಿರ್ಮಿಸುತ್ತಿದ್ದರೂ, ಎರಡು ದೇಶಗಳೂ ಸ್ನೇಹಿತರಾಗಿದ್ದರೂ ಜಂಟಿಯಾಗಿ ಬಾಹ್ಯಾಕಾಶ ಚಟುವಟಿಕೆ ನಡೆಸಿದ್ದು ವಿರಳವೆನ್ನಿಸಿದೆ.

2024ರಲ್ಲಿ ಚಂದ್ರನ ಮೇಲೆ ಮಹಿಳೆಯನ್ನು ಇಳಿಸಲಿರುವ ನಾಸಾ2024ರಲ್ಲಿ ಚಂದ್ರನ ಮೇಲೆ ಮಹಿಳೆಯನ್ನು ಇಳಿಸಲಿರುವ ನಾಸಾ

ಜುಲೈ 22 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 2 ಯಶಸ್ವಿಯಾಗಿ ಉಡಾವಣೆಯಾಗಿದೆ. ಇದುವರೆಗೂ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈ ಗೆ ತೆರಳಿ ಅಧ್ಯಯನ ನಡೆಸುವ ಈ ಯೋಜನೆ ಮುಂದುವರಿದ ಭಾಗ ಎಂಬಂತೆ ಚಂದ್ರಯಾನ 3 ಕ್ಕೆ ಇದೀಗ ಇಸ್ರೋ ಚಿಂತನೆ ನಡೆಸಿದೆ.

English summary
After successful launch of Chandrayaan 2 Now ISRO is planning to Chandrayaan-3 in partnership with Japan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X