ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಆನ್‌ಲೈನ್ ಉಚಿತ ಕೋರ್ಸ್‌ಗಳನ್ನು ಆರಂಭಿಸಿದ ಇಸ್ರೋ

|
Google Oneindia Kannada News

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮೂರು ಹೊಸ ಬಗೆಯ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಿದೆ.

ಈ ಕೋರ್ಸ್‌ಗಳನ್ನು ಪದವಿಪೂರ್ವ, ಸ್ನಾತಕೋತ್ತರ ವಿದ್ಯಾರ್ಥಿಗಳು ತೆಗೆದುಕೊಳ್ಳಬಹುದು. ಭೌಗೋಳಿಕ ಮಾಹಿತಿ ವ್ಯವಸ್ಥೆ, ಜಿಯೋ ಕಂಪ್ಯುಟೇಷನ್ ಮತ್ತು ಜಿಯೋ ವೆಬ್ ಕೋರ್ಸ್‌ಗಳಿಗೆ ಇಸ್ರೋ ಅರ್ಜಿಗಳನ್ನು ಸ್ವೀಕರಿಸುತ್ತಿದೆ.

ನವ ಭಾರತದ ನಿರ್ಮಾರ್ತೃಗಳು: ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋನವ ಭಾರತದ ನಿರ್ಮಾರ್ತೃಗಳು: ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋ

ಇಸ್ರೋ ಘಟಕವು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಈ ಕೋರ್ಸನ್ನು ನಡೆಸಲಿದೆ. ಆನ್‌ಲೈನ್ ಕೋರ್ಸ್‌ಗಳು 7 ರಿಂದ 12 ದಿನಗಳ ಅವಧಿಯನ್ನು ಹೊಂದಿರುತ್ತವೆ. ಭಾಗವಹಿಸುವವರು ತಮ್ಮ ಆಯ್ಕೆ ಅಥವಾ ಲಭ್ಯವಿರುವ ಎಲ್ಲಾ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳಬಹುದು.

ISRO Offers 3 New Online Courses with Certificates For Free

1- ಜಿಯಾಗ್ರಫಿಕಲ್ ಇನ್‌ಫಾರ್ಮೇಷನ್ ಸಿಸ್ಟಂ
ಈ ಮೊದಲನೇ ಕೋರ್ಸ್‌ನಲ್ಲಿ ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಹೇಳಿಕೊಡಲಾಗುತ್ತದೆ. ಭೂಗೋಳ ಶಾಸ್ತ್ರ ಹಾಗೂ ಇಸ್ರೋಗೆ ಸಂಬಂಧಿಸಿ ವಿಷಯವು ಈ ಕೋರ್ಸ್‌ಗಳಲ್ಲಿ ಇರಲಿವೆ. ಸೆಪ್ಟೆಂಬರ್ 28 ರಿಂದ ಆರಂಭವಾಗಿದ್ದು 15 ರವರೆಗೆ ಮೊದಲ ಕೋರ್ಸ್ ನಡೆಯಲಿದೆ.

2-ಬೇಸಿಕ್ಸ್ ಆಫ್ ಜಿಯೋ ಕಂಪ್ಯುಟೇಷನ್ ಆಂಡ್ ಜಿಯೋ ವೆಬ್‌ ಸರ್ವೀಸಸ್
ಎರಡನೇ ಕೋರ್ಸ್‌ನಲ್ಲಿ ಭೂಗೋಳ ಸಮೀಕರಣದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಭೂಗೋಳ ಸಮೀಕರಣದ ತಂತ್ರಜ್ಞಾನ ಅದಕ್ಕೆ ಸಂಬಂಧಿಸಿದ ಅಪ್ಲಿಕೇಷನ್ , ಆನ್‌ಲೈನ್ ಜಿಐಎಸ್, ಜಿಯೋ ವೆಬ್ ಸೇರಿದಂತೆ ಇಸ್ರೋಗೆ ಸಂಬಂಧಿಸಿದ ಇತರೆ ವಿಚಾರಗಳನ್ನು ಈ ಕೋರ್ಸ್‌ನಲ್ಲಿ ಹೇಳಲಾಗುತ್ತದೆ. ಇದು 2 ವಾರಗಳ ಕೋರ್ಸ್ ಆಗಿದ್ದು ಅಕ್ಟೋಬರ್ 19 ರಿಂದ ಅಕ್ಟೋಬರ್ 29ರವರೆಗೆ ನಡೆಯಲಿದೆ.

3- ರಿಮೋಟ್ ಸೆನ್ಸಿಂಗ್ ಆಂಡ್ ಜಿಐಎಸ್ ಅಪ್ಲಿಕೇಷನ್ಸ್
ರಿಮೋಟ್ ಸೆನ್ಸಿಂಗ್ ಆಂಡ್ ಜಿಐಎಸ್ ಅಪ್ಲಿಕೇಷನ್ಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಬೆಳೆಗಳ ಮೌಲ್ಯಗಳ ಲೆಕ್ಕಾಚಾರ, ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಹಾಗೂ ಇತರೆ ಭೂಗೋಳ ಶಾಸ್ತ್ರದ ಅಧ್ಯಯನದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

English summary
Geographical Information System, Geocomputation, and Geoweb services, and Remote Sensing and GIS Applications are the three courses ISRO is offering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X