ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆಜೊನಿಯಾ -1 ಹಾಗೂ 18 ಉಪಗ್ರಹಗಳು ಯಶಸ್ವಿ ಉಡಾವಣೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಶ್ರೀಹರಿಕೋಟದಿಂದ ಫೆಬ್ರವರಿ 28ರಂದು ಬ್ರೆಜಿಲಿಯನ್ ಅಮೆಜೊನಿಯಾ -1 ಹಾಗೂ 18 ಭಾರತೀಯ ಸ್ಟಾರ್ಟ್‌ಅಪ್ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ವಿ ಸಿ51 ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ಇಸ್ರೋ ಪ್ರಧಾನ ಕಚೇರಿಯ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

2021 ರ ಇಸ್ರೋದ ಮೊಟ್ಟ ಮೊದಲ ಕಾರ್ಯಾಚರಣೆ ಇದಾಗಿದ್ದು, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಸಿ -51 ನಲ್ಲಿ ಬೆಳಿಗ್ಗೆ 10.28 ಕ್ಕೆ ಶ್ರೀಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಗಿದೆ.

Isro launches PSLV-C51 carrying Amazonia-1 and 18 other satellites

ಅಮೆಜೋನಿಯಾ -1 ಎನ್ನುವುದು ಸಂಪೂರ್ಣವಾಗಿ ಬ್ರೆಜಿಲ್ಅಭಿವೃದ್ಧಿಪಡಿಸಿದ ಮೊದಲ ಭೂ ವೀಕ್ಷಣಾ ಉಪಗ್ರಹವಾಗಿದೆ, ಇದು ಪ್ರಾಥಮಿಕ ಉಪಗ್ರಹವಾಗಿದೆ. 637 ಕೆ. ಜಿ ತೂಗುವ ಉಪಗ್ರಹವು ಅಮೆಜಾನ್ ಕಾಡಿನ ಮೇಲೆ ನಿಗಾ ಇಡಲಿದೆ.

ಇದರ ಜೊತೆಗೆ ಚೆನ್ನೈ ಮೂಲದ ಸ್ಪೇಸ್ ಕಿಡ್ಜ್ ಇಂಡಿಯಾ, ಸತೀಶ್ ಧವನ್ ಸ್ಯಾಟ್, ಯೂನಿಟಿ ಸ್ಯಾಟ್ 3 ಉಪಗ್ರಹ, ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಸಂಸ್ಥೆಯ 14 ಉಪಗ್ರಹಗಳು ಕಕ್ಷೆಗೆ ಸೇರಿಸಲಾಗಿದೆ.

ಬಾಹ್ಯಾಕಾಶ ನೌಕೆಯ ಮೇಲಿನ ಪ್ಯಾನೆಲ್ ನಲ್ಲಿ ಪ್ರಧಾನಿ ಮೋದಿ ಚಿತ್ರವಿದೆ. ಎಸ್ ಡಿ ಕಾರ್ಡಿನಲ್ಲಿ ಭಗವದ್ಗೀತೆ ಹಾಗೂ ಎಸ್ ಡಿ ಸ್ಯಾಟ್ ನಲ್ಲಿ 25, 000 ಸಾವಿರ ಮಂದಿ ಹೆಸರನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿದೆ.

English summary
Indian Space Research Organisation launched the PSLV-C51 carrying Amazonia-1 and 18 other satellites from Sriharikot. Here is all you need to know about the lunch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X