ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಯಶಸ್ವಿ ಉಡಾವಣೆ

|
Google Oneindia Kannada News

ಶ್ರೀಹರಿಕೋಟ, ನವೆಂಬರ್ 07: ಇಸ್ರೋ ಭೂ ವೀಕ್ಷಣಾ ಉಪಗ್ರಹ ಇಒಎಸ್ 01 ಯಶಸ್ವಿ ಉಡಾವಣೆ ಮಾಡಿದೆ.

ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 51 ನೇ ಮಿಷನ್ (ಪಿಎಸ್ಎಲ್ ವಿಸಿ 49) ನಲ್ಲಿ ಇಒಎಸ್ -01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಸಾಗಿಸಿದೆ.

ಇಸ್ರೋದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಉಡಾವಣೆಗೆ ಕ್ಷಣಗಣನೆ ಇಸ್ರೋದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಉಡಾವಣೆಗೆ ಕ್ಷಣಗಣನೆ

ಇಂದಿನ ಉಪಗ್ರಹ ಉಡಾವಣೆಯೊಂದಿಗೆ ಇಸ್ರೋ ಒಟ್ಟು 328 ಉಪಗ್ರಹ ಉಡಾವಣೆ ಮಾಡಿದ ದಾಖಲೆ ನಿರ್ಮಿಸಿದೆ.

ISRO Launches PSLV-C49 With EOS-01, Nine Other Satellites

ಭಾರತದ ಉಪಗ್ರಹದ ಹೊರತಾಗಿ , ಲಿಥುವಾನಿಯಾ, ಲಕ್ಸಂಬರ್ಗ್, ಅಮೆರಿಕದ ನಾಲ್ಕು ಲೆಮುರ್ ಮಲ್ಟಿ ಮಿಷನ್ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸೇರಿ 9ಇತರೆ ಉಪಗ್ರಹಗಳು ಪಿಎಸ್‌ಎಲ್‌ವಿ-ಸಿ 49 ಮೂಲಕ ಉಡಾವಣೆಯಾಗಿವೆ.

ಕೊರೊನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿದ್ದು ಇದೀಗ ಶನಿವಾರದಿಂದ ಮತ್ತೆ ಚಾಲನೆ ಸಿಕ್ಕಂತಾಗಿದೆ.

ಗ್ರಾಹಕ ಉಪಗ್ರಹಗಳನ್ನು ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ನೊಂದಿಗೆ ವಾಣಿಜ್ಯ ಒಪ್ಪಂದದಡಿಯಲ್ಲಿ ಉಡಾವಣೆಯಾಗಿದೆ ಎಂದು ಸಂಸ್ಥೆ ಹೇಳಿದೆ.

English summary
India's PSLV-C49 carrying its latest earth observation satellite EOS-01 and nine customer satellites lifted off from the spaceport here on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X