ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಎರಡು ವಿದೇಶಿ ಉಪಗ್ರಹಗಳ ಯಶಸ್ವಿ ಉಡಾವಣೆ

|
Google Oneindia Kannada News

ಶ್ರೀಹರಿಕೋಟಾ, ಸೆಪ್ಟೆಂಬರ್ 16 : ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಎರಡು ವಿದೇಶಿ ಉಪಗ್ರಹಗಳಾದ NovaSAR ಮತ್ತು S1-4ಗಳನ್ನು ಪಿಎಸ್ಎಲ್‌ವಿ-ಸಿ42 ಮೂಲಕ ಇಸ್ರೋ ಭಾನುವಾರ ರಾತ್ರಿ 10.08 ನಿಮಿಷಕ್ಕೆ ಯಶಸ್ವಿಯಾಗಿ ಉಡಾಯಿಸಿದೆ.

ಈ ಎರಡೂ ಉಪಗ್ರಹಗಳು ಬ್ರಿಟನ್‌ನ ಸರ್ರೆ ಸೆಟಲೈಟ್ ಟೆಕ್ನಾಲಜಿ ಲಿಮಿಟೆಡ್ ಕಂಪನಿಗೆ ಸೇರಿದವಾಗಿದ್ದು, ನೋವಾಸಾರ್ 445 ಕೆಜಿ ತೂಗುತ್ತಿದ್ದರೆ, ಎಸ್1-4 ಉಪಗ್ರಹದ ತೂಕ 444 ಕೆಜಿ. ಇದು ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ)ನ 44ನೇ ಉಡಾವಣೆಯಾಗಿದೆ.

ನೋವಾಸಾರ್ ಎಸ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹವಾಗಿದ್ದು, ಅರಣ್ಯದ ನಕ್ಷೆ ತಯಾರಿಸುವುದು, ಭೂಮಿಯ ಬಳಕೆ, ಐಸ್ ಕವರ್ ಪರಿವೀಕ್ಷಣೆ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳ ಅಧ್ಯಯನ ನಡೆಸಲಿದೆ.

ISRO launches NovaSAR and S1-4 satellites successfully onboard PSLVC42

ಎಸ್1-4 ಹೈ ರೆಸೊಲ್ಯೂಷನ್ ಆಪ್ಟಿಕಲ್ ಅರ್ಥ್ ಆಬ್ಸರ್ವೇಶನ್ ಉಪಗ್ರಹವಾಗಿದ್ದು, ನಿಕ್ಷೇಪಗಳ ಸಮೀಕ್ಷೆ, ಪರಿಸರ ಪರಿವೀಕ್ಷಣೆ, ನಗರದ ನಿರ್ವಹಣೆ ಮತ್ತು ಪ್ರಕೃತಿ ವಿಕೋಪಗಳ ಅಧ್ಯಯನವನ್ನು ಕೈಗೊಳ್ಳಲಿದೆ. ಸುಮಾರು 5 ತಿಂಗಳ ಬಿಡುವಿನ ನಂತರ ಇಸ್ರೋ ಈ ಉಡಾವಣೆ ಕಾರ್ಯವನ್ನು ಕೈಗೊಂಡಿದೆ.

ಈ ಸಂದರ್ಭದಲ್ಲಿ ಇಸ್ರೋದ ಚೇರ್ಮನ್ ಕೆ ಸಿವನ್ ಮತ್ತು ಯುನೈಟೆಡ್ ಕಿಂಗಡಂನ ಸರ್ರೆ ಸೆಟಲೈಟ್ ಟೆಕ್ನಾಲಜಿ ಸಂಸ್ಥೆಯ ತಂಡ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಲ್ಲಿ ಹಾಜರಿದ್ದು, ಉಪಗ್ರಹ ಉಡಾವಣೆಯನ್ನು ವೀಕ್ಷಿಸಿದರು.

ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋದ ವಿಜ್ಞಾನಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಸ್ಪರ್ಧಾತ್ಮಕ ಅಂತರಿಕ್ಷ ವ್ಯಾಪಾರದಲ್ಲಿ ಭಾರತದ ಶಕ್ತಿ ಎಷ್ಟಿದೆಯೆಂದು ಇಸ್ರೋ ಇಡೀ ವಿಶ್ವಕ್ಕೆ ತೋರಿಸಿದೆ ಎಂದು ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳನ್ನು ಕೊಂಡಾಡಿದ್ದಾರೆ.

English summary
ISRO successfully launches NovaSAR and S1-4 satellites successfully onboard PSLVC42 from Sriharikota, Andhra Pradesh on Sunday. Both satellites launched at Satish Dhawan Space Centre and both belong to Britain’s Surrey Satellite Technology Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X