ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಪಡೆಗೆ ಇನ್ನಷ್ಟು ಶಕ್ತಿ: ಜಿಸ್ಯಾಟ್- 7ಎ ಉಡಾವಣೆ ಯಶಸ್ವಿ

|
Google Oneindia Kannada News

ಶ್ರೀಹರಿಕೋಟಾ, ಡಿಸೆಂಬರ್ 19: ಬಾಹ್ಯಾಕಾಶ ಲೋಕದಲ್ಲಿ ಮಹತ್ತರ ಸಾಧನೆ ಮಾಡುತ್ತಿರುವ ಇಸ್ರೋ, ತನ್ನ ಹಿರಿಮೆಗೆ ಮತ್ತೊಂದು ಕಿರೀಟ ಅಂಟಿಸಿಕೊಂಡಿದೆ.

ಸೇನಾ ಸಂವಹನ ಉಪಗ್ರಹ ಜಿಸ್ಯಾಟ್- 7ಎ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನೆಲೆಯಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು.

ಜಿಸ್ಯಾಟ್- 7ಎ 2,250 ಕೆಜಿ ತೂಕ ಹೊಂದಿದ್ದು, ಭಾರತದ 35ನೇ ಸಂವಹನ ಉಪಗ್ರಹವಾಗಿದೆ.

ಜಿಎಸ್ ಎಲ್‌ವಿ-ಎಫ್‌11 ರಾಕೆಟ್‌ ಮೂಲಕ ಅಂತರಿಕ್ಷಕ್ಕೆ ಉಡಾವಣೆ ಮಾಡಲಾಗಿದೆ. ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಲಿರುವ ಈ ಉಪಗ್ರಹವು ಕ್ಯೂಬ್ಯಾಂಡ್ ಮೂಲಕ ಸೇನಾಪಡೆಗೆ ನೆರವು ನೀಡಲಿದೆ.

 ಇಸ್ರೋದ 2018 ರ ಕೊಟ್ಟಕೊನೆಯ ಉಪಗ್ರಹ ಇಂದು ಉಡಾವಣೆ ಇಸ್ರೋದ 2018 ರ ಕೊಟ್ಟಕೊನೆಯ ಉಪಗ್ರಹ ಇಂದು ಉಡಾವಣೆ

ಇತ್ತೀಚೆಗಷ್ಟೇ, ದೇಶದ ಮೂಲೆ ಮೂಲೆಗೂ ಇಂಟರ್ನೆಟ್ ಸೌಲಭ್ಯ ಕಲ್ಪಿಸಬಲ್ಲ ಜಿಸ್ಯಾಟ್ 11 ಉಪಗ್ರಹವನ್ನು ಫ್ರಾನ್ಸ್ ನ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಉಡ್ಡಯನ ಮಾಡಲಾಗಿತ್ತು. ಇಸ್ರೋ ನಿರ್ಮಿಸಿದ ಈ ಉಪಗ್ರಹ ಭಾರತದ ಅತೀ ತೂಕದ (5870 ಕೆಜಿ ) ಉಪಗ್ರಹ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

ಐಎಎಫ್‌ಗೆ ಆಗುವ ಪ್ರಯೋಜನಗಳೇನು?

ಐಎಎಫ್‌ಗೆ ಆಗುವ ಪ್ರಯೋಜನಗಳೇನು?

ಭಾರತೀಯ ವಾಯುಪಡೆಯ ವಾಯು ನೆಲೆಗಳ ನಡುವೆ ಸಂಪರ್ಕ ಒದಗಿಸಲು, ಕಾರ್ಯಾಚರಣೆ ನಡೆಸಲು ಮತ್ತು ಸೇನಾಪಡೆಯ ಯುದ್ಧ ವಿಮಾನಗಳು ಹಾರಾಟ ನಡೆಸುವ ವೇಳೆ ಸಂವಹನ ನಡೆಸಲು ಇದು ನೆರವು ನೀಡಲಿದೆ.

ಜಿಸ್ಯಾಟ್- 7ಎ, ಐಎಎಫ್‌ಗಾಗಿಯೇ ಸಿದ್ಧಪಡಿಸಲಾದ ಮೊದಲ ಉಪಗ್ರಹವಾಗಿದೆ. ಇದು ಐಎಎಫ್ ತನ್ನ ಸಂಪನ್ಮೂಲಗಳನ್ನು ಒಗ್ಗೂಡಿಸಲು ಮತ್ತು ಸಂಯೋಜನೆಯನ್ನು ಸುಧಾರಿಸಲು, ಕಾರ್ಯಾಚರಣೆ ವೇಳೆ ಎಲ್ಲ ಕಡೆಗೂ ಏಕರೂಪದ ಸಂದೇಶಗಳನ್ನು ಹಂಚಿಕೊಳ್ಳಲು ಸಹಾಯ ಮಾಡಲಿದೆ.

 ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ! ದೇಶದ ಮೂಲೆ ಮೂಲೆಗೂ ಇಂಟರ್ನೆಟ್... ಇದು ಜಿಸ್ಯಾಟ್-11 ಕ್ರಾಂತಿ!

ಐಎಎಫ್ ಗಾಗಿಯೇ ವಿನ್ಯಾಸ

ಐಎಎಫ್ ಗಾಗಿಯೇ ವಿನ್ಯಾಸ

ಭಾರತೀಯ ವಾಯುಪಡೆಯ (ಐಎಎಫ್) ಸಂವಹನ ಸಾಮರ್ಥ್ಯಗಳನ್ನು ವಿಸ್ತರಿಸಲು ನೆರವಾಗುವಂತೆ ಜಿಸ್ಯಾಟ್-7ಎ ಅನ್ನು ವಿನ್ಯಾಸಪಡಿಸಲಾಗಿದೆ. ಅನೇಕ ಭೂ ರಾಡಾರ್ ನಿಲ್ದಾಣಗಳನ್ನು, ವಾಯು ನೆಲೆಗಳನ್ನು ಮತ್ತು ಐಎಎಫ್ ಕಾರ್ಯ ನಿರ್ವಹಿಸುವ ಯುದ್ಧ ವಿಮಾನಗಳನ್ನು ಸಂಪರ್ಕಿಸುವ ಮೂಲಕ ಈ ಗುರಿಯನ್ನು ತಲುಪಲಿದೆ. ಇದಲ್ಲದೆ, ನೆಟ್ ವರ್ಕ್ ಅವಲಂಬಿತ ಯುದ್ಧ ಹಾಗೂ ಡ್ರೋನ್ ಸಾಮರ್ಥ್ಯಗಳನ್ನು ವೃದ್ಧಿಸುವ ನಿರೀಕ್ಷೆಯಿದೆ.

 ಅತಿ ತೂಕದ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು ಗೊತ್ತೇ? ಅತಿ ತೂಕದ ಜಿಸ್ಯಾಟ್-11 ಉಪಗ್ರಹದ ಪ್ರಯೋಜನಗಳೇನು ಗೊತ್ತೇ?

Array

ವಾಯುಪಡೆಗೆ ಹೆಚ್ಚಿದ ಶಕ್ತಿ

ಇಸ್ರೋದ ಈ ಮಹತ್ತರ ಕೊಡುಗೆಯನ್ನು ಶ್ಲಾಘಿಸಿರುವ ವಾಯು ಸೇನಾ ಮುಖ್ಯಸ್ಥ ಬಿಎಸ್ ಧನೋವಾ, ಜಿಎಸ್ಎಲ್ ವಿ-7ಎ, ವಾಯುಪಡೆಯ ಸಂಪರ್ಕ ಜಾಲ ಮತ್ತು ಸಂವಹನ ಸಾಮರ್ಥ್ಯಗಳನ್ನು ಬಲಪಡಿಸಲಿದೆ ಎಂದು ಹೇಳಿದರು.

ಉಪಗ್ರಹದ ಮೂಲಕ ಸಂವಹನ ನಡೆಸುವ ಸಾಮರ್ಥ್ಯವುಳ್ಳ ಅನೇಕ ಯುದ್ಧ ವಿಮಾನಗಳು ನಮ್ಮ ಬಳಿ ಇವೆ. ಈ ಉಡ್ಡಯನದ ಮೂಲಕ ಉಪಗ್ರಹದ ಮೂಲಕ ಯುದ್ಧ ವಿಮಾನಗಳು ಸಂವಹನ ನಡೆಸುವುದು ಸಾಧ್ಯವಾಗಲಿದೆ ಎಂದರು.

 ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು! ಇಸ್ರೋ ಮೈಲಿಗಲ್ಲು! ಬೆಳ್ಳಂಬೆಳಗ್ಗೆ ನಭಕ್ಕೆ ಹಾರಿದ 31 ಉಪಗ್ರಹಗಳು!

ಈ ವರ್ಷದ ಕೊನೆಯ ಉಪಗ್ರಹ

ಈ ವರ್ಷದ ಕೊನೆಯ ಉಪಗ್ರಹ

ಉಪಗ್ರಹವು ಅತ್ಯಾಧುನಿಕ ಕೆಯು ಬ್ಯಾಂಡ್ ಅನ್ನು ಹೊಂದಿದ್ದು, ಇದು ತತ್‌ಕ್ಷಣದ ಹಾಗೂ ಸ್ಪಷ್ಟ ಯುದ್ಧ ವಿಮಾನದಿಂದ ಯುದ್ಧ ವಿಮಾನದ ಸಂವಹನಕ್ಕೆ ಸಹಾಯ ಮಾಡಲಿದೆ. ಅಲ್ಲದೆ, ಹಾರಾಟ ನಡೆಸುತ್ತಿರುವ ವಿಮಾನಗಳು ಮತ್ತು ನೆಲದಲ್ಲಿರುವ ಕಮಾಂಡರ್‌ಗಳ ನಡುವಿನ ಸಂವಹನವೂ ಸಾಧ್ಯವಾಗಲಿದೆ.

ಜಿಎಸ್ ಎಲ್ ವಿ-ಎಫ್ 11 ಬಾಹ್ಯಾಕಾಶ ವಾಹನದ ಮೂಲಕ ಜಿಸ್ಯಾಟ್-7ಎಯನ್ನು ಉಡಾವಣೆ ಮಾಡಲಾಗಿದೆ. ಇದು ಇಸ್ರೋ ಈ ವರ್ಷ ಉಡಾವಣೆ ಮಾಡಿದ ಕೊನೆಯ ಉಪಗ್ರಹವಾಗಿದೆ.

ಮೂರು ಹಂತಗಳಲ್ಲಿ ಹಾರಾಟ

ಮೂರು ಹಂತಗಳಲ್ಲಿ ಹಾರಾಟ

ಭೂಮಿಯಿಂದ 36 ಸಾವಿರ ಕಿ.ಲೋ. ಮೀಟರ್ ದೂರದಲ್ಲಿನ ಭೂಸ್ಥಾಯಿ ಕಕ್ಷೆಯಲ್ಲಿ ನೆಲೆ ನಿಲ್ಲಲಿದೆ. ಆರಂಭದಲ್ಲಿ ಪರೀಕ್ಷಾರ್ಥ ಚಟುವಟಿಕೆಗಳು ನಡೆದ ಬಳಿಕವಷ್ಟೇ ಒಂದು ತಿಂಗಳ ಬಳಿಕ ಸಂಪೂರ್ಣ ಕಾರ್ಯಾಚರಣೆ ನಡೆಸಲಿದೆ. ಸ್ವದೇಶಿ ನಿರ್ಮಿತ ಉಪಗ್ರಹವು ಮೂರು ಹಂತಗಳನ್ನು ದಾಟಿದ ಬಳಿಕ ಉದ್ದೇಶಿತ ಕಕ್ಷೆಯನ್ನು ತಲುಪಲಿದೆ.

English summary
ISRO on Wednesday launched its military communication satellite GSAT-7A from Sriharikota.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X