ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ: EMISAT ಸೇರಿ 29 ಉಪಗ್ರಹಗಳ ಉಡಾವಣೆ

|
Google Oneindia Kannada News

ನವದೆಹಲಿ, ಏಪ್ರಿಲ್ 1: ದೇಶದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಗುರುತು ಮೂಡಿಸಿದೆ.

ಶತ್ರು ದೇಶಗಳ ನೆಲೆಗಳಲ್ಲಿರುವ ರೇಡಾರ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಇರುವ ಎಮಿಸ್ಯಾಟ್ ಉಪಗ್ರಹ ಸೇರಿದಂತೆ 29 ನ್ಯಾನೋ ಉಪಗ್ರಹಗಳನ್ನು ಸೋಮವಾರ ಉಡಾವಣೆ ಮಾಡಿದೆ.

ಸಂವಹನ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು, GSAT-31 ಯಶಸ್ವೀ ಉಡಾವಣೆ ಸಂವಹನ ಕ್ಷೇತ್ರಕ್ಕೆ ಹೊಸ ಮೈಲಿಗಲ್ಲು, GSAT-31 ಯಶಸ್ವೀ ಉಡಾವಣೆ

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9.27ರ ವೇಳೆಗೆ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಮತ್ತು ಗಣ್ಯರಲ್ಲದೆ, ಸಾಮಾನ್ಯ ಜನರಿಗೂ ಈ ಉಡಾವಣೆಯನ್ನು ನೇರವಾಗಿ ನೋಡಲು ಅವಕಾಶ ಕಲ್ಪಿಸಲಾಗಿತ್ತು.

ಇಸ್ರೋದ ಪಿಎಸ್‌ಎಲ್‌ವಿ ಸಿ45 ರಾಕೆಟ್ ಮೂಲಕ ವಿದೇಶಿ ಉಪಗ್ರಹಗಳನ್ನು ಕೂಡ ಬಾಹ್ಯಾಕಾಶಕ್ಕೆ ಸೇರಿಸಲಾಯಿತು. ಅಮೆರಿಕ, ಸ್ಪೇನ್, ಸ್ವಿಟ್ಜರ್ಲೆಂಡ್ ಮತ್ತು ಲಿಥುವೇನಿಯಾದ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಹೊತ್ತೊಯ್ದಿದೆ. ಮೂರು ಕಕ್ಷೆಗಳಲ್ಲಿ ಈ ಉಪಗ್ರಹಗಳು ಬಾಹ್ಯಾಕಾಶವನ್ನು ಸೇರಿಕೊಳ್ಳಲಿವೆ. ಒಂದೇ ಉಡಾವಣೆಯಲ್ಲಿ ಮೂರು ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸುವ ಪ್ರಯೋಗವನ್ನು ಇಸ್ರೋ ಮೊದಲ ಬಾರಿಗೆ ನಡೆಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಮಿಸ್ಯಾಟ್ ಬೇಹುಗಾರಿಕಾ ಉಪಗ್ರಹವಾಗಿದ್ದು, ಇದು ವಿದ್ಯುತ್‌ಕಾಂತೀಯ ಮಾಪನದ ಗುರಿ ಹೊಂದಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ. ರಕ್ಷಣಾ ಸಂಶೋಧನಾ ಸಂಸ್ಥೆಯು ಉಪಗ್ರಹ ನಿರೋಧಕ ಕ್ಷಿಪಣಿ ತಂತ್ರತ್ಞಾನವನ್ನು ಯಶಸ್ವಿಯಾಗಿ ಪ್ರಯೋಗಿಸಿದ ಕೆಲವೇ ದಿನಗಳಲ್ಲಿ ಭಾರತದ ರಾಷ್ಟ್ರೀಯ ಭದ್ರತೆಗೆ ನೆರವಾಗಬಲ್ಲ ಈ ಮಹತ್ವದ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ.

ಪಿಎಸ್‌ಎಲ್‌ವಿ 47ನೇ ಉಡಾವಣೆ

47ನೇ ಬಾರಿ ಬಾಹ್ಯಾಕಾಶದ ಯಾನ ನಡೆಸಿದ ಪಿಎಸ್‌ಎಲ್‌ವಿ ರಾಕೆಟ್‌ ಅದಕ್ಕಾಗಿ ಭಾನುವಾರ ಬೆಳಿಗ್ಗೆ 6.27ರಿಂದಲೇ ತಯಾರಿ ನಡೆಸಿತ್ತು. ಇದು ಶ್ರೀಹರಿಕೋಟಾದಿಂದ 71ನೇ ಉಡ್ಡಯನ ವಾಹನದ ಉಡಾವಣೆಯಾಗಿದೆ. ಇದೇ ಮೊದಲ ಬಾರಿಗೆ ಉಪಗ್ರಹ ಉಡಾವಣೆಯನ್ನು ನೇರವಾಗಿ ವೀಕ್ಷಿಸಲು ಜನಸಾಮಾನ್ಯರನ್ನೂ ಇಸ್ರೋ ಆಹ್ವಾನಿಸಿತ್ತು.

Array

ಏನಿದು ಎಮಿಸ್ಯಾಟ್?

ಕೆಳಮಟ್ಟದ ಭೂ ಕಕ್ಷೆಯ ಎಮಿಸ್ಯಾಟ್ ಉಪಗ್ರಹವು 436 ಕೆಜಿ ತೂಕ ಹೊಂದಿದೆ. ಇದು ಶತ್ರು ದೇಶಗಳಲ್ಲಿನ ನೆಲೆಗಳಲ್ಲಿ ಇರುವ ರೇಡಾರ್‌ಗಳನ್ನು ಹುಡುಕಿ ಅದರ ಸ್ಥಳದ ಮಾಹಿತಿ ಒದಗಿಸುತ್ತದೆ. ಈ ಮುಂದೆ ರೇಡಾರ್‌ಗಳ ಇರುವಿಕೆಯನ್ನು ಗ್ರಹಿಸಿ ಎಚ್ಚರಿಕೆ ನೀಡಲು ಭಾರತ ಏರ್‌ಪ್ಲೇನ್‌ಗಳನ್ನು ಬಳಸುತ್ತಿತ್ತು. ಆದರೆ, ಈ ಉಪಗ್ರಹ ಬಾಹ್ಯಾಕಾಶ ಅಧಾರಿತ ಮಾಹಿತಿಯನ್ನು ಒದಗಿಸಲಿದೆ. ಇದರಿಂದ ಈ ಮಾಹಿತಿ ಹೆಚ್ಚು ನಿಖರವಾಗಿ ಸಿಗಲಿದೆ.

ಇಸ್ರೋದ ಕಲಾಂ ಸ್ಯಾಟ್ -V2 ವಿಶೇಷತೆ: ಚಿತ್ರ ವಿವರ ಇಸ್ರೋದ ಕಲಾಂ ಸ್ಯಾಟ್ -V2 ವಿಶೇಷತೆ: ಚಿತ್ರ ವಿವರ

ರಾಕೆಟ್‌ನಿಂದ ಇನ್ನಷ್ಟು ಉಪಯೋಗ

ಈ ಯೋಜನೆಯಲ್ಲಿ ಹಾರಿಸಿದ ಪಿಎಸ್‌ಎಲ್‌ವಿ ರಾಕೆಟ್‌ನ ಕೊನೆಯ ಹಂತವು ಹಲವು ವಾರಗಳವರೆಗೆ ಬಾಹ್ಯಾಕಾಶದಲ್ಲಿ ಜೀವಂತವಾಗಿ ಇರಲಿದೆ. ಬಳಿಕ ಅದು ಬಾಹ್ಯಾಕಾಶ ತ್ಯಾಜವಾಗಲಿದ್ದು, ರಾಕೆಟ್ ಮೋಟಾರ್‌ಗೆ ಮೂರು ಸಾಧನಗಳನ್ನು ಅಳವಡಿಕೆ ಮಾಡಿರುವುದರಿಂದ ಅದು ಕಕ್ಷೆಯ ಬಾಹ್ಯಾಕಾಶ ಪ್ರಯೋಗಾಲಯವಾಗಿ ಬಳಕೆಯಾಗಲಿದೆ. ಇದರಲ್ಲಿ ಸಮುದ್ರದ ಹಡಗಿನ ಪತ್ತೆಹಚ್ಚುವ ವ್ಯವಸ್ಥೆಗೆ ಹಾಗೂ ವಾತಾವರಣದ ಮೇಲ್ಭಾಗದ ಹಾಗೂ ತಳಭಾಗದ ಪ್ರಯೋಗಾತ್ಮಕ ಅಧ್ಯಯನಗಳಿಗೆ ನೆರವಾಗಲಿದೆ.

ಯಾವ ದೇಶದ ಎಷ್ಟು ಉಪಗ್ರಹ?

ಯಾವ ದೇಶದ ಎಷ್ಟು ಉಪಗ್ರಹ?

ಇತರೆ 28 ಅಂತಾರಾಷ್ಟ್ರೀಯ ಉಪಗ್ರಹಗಳಲ್ಲಿ 25 ಉಪಗ್ರಹಗಳು 3ಯು ಮಾದರಿ, ಎರಡು 6ಯು ಮಾದರಿ ಮತ್ತು ಒಂದು 2ಯು ಮಾದರಿಯದ್ದಾಗಿವೆ. ಈ ನ್ಯಾನೋ ಸ್ಯಾಟಲೈಟ್‌ಗಳಲ್ಲಿ ಅಮೆರಿಕದ 24, ಸ್ಪೇನ್ ಮತ್ತು ಸ್ವಿಟ್ಜರ್ಲೆಂಡ್‌ನ ತಲಾ 1 ಮತ್ತು ಲಿಥುವೇನಿಯಾದ 2 ಉಪಗ್ರಹಗಳಿವೆ. ವಾಣಿಜ್ಯಾತ್ಮಕ ವ್ಯವಸ್ಥೆಯಡಿಯಲ್ಲಿ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.

ಬಾಹ್ಯಾಕಾಶಕ್ಕೆ ಪಯಣಿಸಲಿದೆ ಹೈಸ್ಕೂಲು ವಿದ್ಯಾರ್ಥಿಗಳ 'ಕಲಾಂ ಸ್ಯಾಟಲೈಟ್' ಬಾಹ್ಯಾಕಾಶಕ್ಕೆ ಪಯಣಿಸಲಿದೆ ಹೈಸ್ಕೂಲು ವಿದ್ಯಾರ್ಥಿಗಳ 'ಕಲಾಂ ಸ್ಯಾಟಲೈಟ್'

ವಿಜ್ಞಾನಿಗಳಲ್ಲಿ ತುಸು ಆತಂಕ

ಪಿಎಸ್‌ಎಲ್‌ವಿಯಿಂದ ಉಡಾವಣೆಯಾದ ಈ ಉಪಗ್ರಹ ಕಳೆದ ವಾರ ಉಪಗ್ರಹ ನಿರೋಧಕ ಕ್ಷಿಪಣಿಯಿಂದ ಪರೀಕ್ಷಾರ್ಥವಾಗಿ ಹೊಡೆದುರುಳಿಸಿದ ಉಪಗ್ರಹದ ಅವಶೇಷಗಳನ್ನು ಹಿಂದಿಕ್ಕಿ ಕಕ್ಷೆಗೆ ಸೇರಿಕೊಳ್ಳಲಿದೆ. ಹೀಗಾಗಿ ಅವಶೇಷಗಳ ತುಂಡುಗಳಿಗೂ ಈ ಹೊಸ ಉಪಗ್ರಹಕ್ಕೂ ಢಿಕ್ಕಿಯಾಗುವ ಅಪಾಯವಿದೆ ಎಂದು ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.

English summary
ISRO on Monday at 9.27 launched the intelligent satellite EMISAT satellite along with 28 other satellites from the Sriharikota Satish Dhawan space centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X