ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರದ ಉಪಗ್ರಹ ಉಡ್ಡಯನ: ಇಸ್ರೋಗೆ ಮತ್ತೊಂದು ಗರಿ

|
Google Oneindia Kannada News

ಚೆನ್ನೈ, ಜು. 11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಮತ್ತೊಂದು ಮೈಲಿಗಲ್ಲು ಸ್ಥಾಪನೆ ಮಾಡಿದೆ. 1440 ಕೆಜಿ ತೂಕದ ಬ್ರಿಟನ್‌ನ ಐದು ಉಪಗ್ರಹಗಳನ್ನು ಅಂತರಿಕ್ಷದಲ್ಲಿ ನೆಲೆಗೊಳಿಸಿದೆ.

ಉಪಗ್ರಹಗಳನ್ನು ಹೊತ್ತ 'ಪಿಎಸ್‌ಎಲ್‌ವಿ-ಸಿ28' ರಾಕೆಟ್ ನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ರಾತ್ರಿ 9.58ಕ್ಕೆ ಉಡಾವಣೆ ಮಾಡಲಾಯಿತು. [ಮಂಗಳನ ಅಂಗಳದ ಜ್ವಾಲಾಮುಖಿ ನೋಡಿದ್ದೀರಾ?]

isro

ಇಸ್ರೋ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಇಸ್ರೋಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಭೂಮಿಯ ಮೇಲಿನ ಭಾಗಗಳನ್ನು ಉಪಗ್ರಹ ಪರಿವೀಕ್ಷಣೆ ಮಾಡುತ್ತದೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

ಇದೇ ಮೊದಲ ಬಾರಿಗೆ ಇಷ್ಟು ಭಾರದ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಮಂಗಳಯಾನದ ಯಶಸ್ಸಿನ ನಂತರ ಇಸ್ರೋ ಸಾಧನೆ ಮಾಡಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಭೂಮಿಯ ಪರಿಸರ, ಪ್ರಕೃತಿ ವಿಕೋಪ, ನಗರ ಮೂಲಸೌಕರ್ಯಗಳ ಬಗ್ಗೆ ಈ ಉಪಗ್ರಹಗಳು ಪ್ರತಿನಿತ್ಯ ಮಾಹಿತಿ ನೀಡಲಿವೆ. 1999ರಿಂದ ಈವರೆಗೆ ಭಾರತ ಬೇರೆ ಬೇರೆ ದೇಶಗಳ 40 ಉಪಗ್ರಹಗಳನ್ನು ಉಡಾವಣೆ ಮಾಡಿದೆ.

English summary
Heralding a new era, India on Friday night launched its heaviest commercial space mission ever with its polar rocket successfully putting five British satellites into the intended orbit after a flawless takeoff.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X