ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಣೆಯಾದ ಎಎನ್ 32 ವಿಮಾನ ಹುಡುಕಾಟಕ್ಕೆ ಇಸ್ರೊ ನೆರವು

|
Google Oneindia Kannada News

ನವದೆಹಲಿ, ಜೂನ್ 05: ಮೂರು ದಿನಗಳ ಹಿಂದೆ ನಾಪತ್ತೆಯಾದ ಆಂಟೋನೋವ್ ಎಎನ್‌ 32 ವಿಮಾನವನ್ನು ಹುಡುಕಾಡಲು ಇಸ್ರೋ ನೆರವು ಪಡೆಯಲಾಗುತ್ತಿದೆ.

ಮೂರು ದಿನಗಳ ಹಿಂದೆ ಅಸ್ಸಾಂನ ಜೊಹ್ರಾತ್ ವಾಯುನೆಲೆಯಿಂದ ಭಾರತೀಯ ವಾಯುಸೇನೆಗೆ ಸೇರಿದ ಎಎನ್ 32 ವಿಮಾನವು ಹಠಾತ್ತನೆ ನಾಪತ್ತೆಯಾಗಿತ್ತು. ಅದನ್ನು ಮೂರು ದಿನಗಳಿಂದಲೂ ಹುಡುಕಾಡಲಾಗುತ್ತಿದ್ದು, ಈ ವರೆಗೂ ಪತ್ತೆ ಆಗಿಲ್ಲ.

ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ ಚೀನಾ ಗಡಿ ಭಾಗದಲ್ಲಿ ಭಾರತೀಯ ವಾಯುಪಡೆಯ ಏರ್ ಕ್ರಾಫ್ಟ್ ನಾಪತ್ತೆ

8 ಸಿಬ್ಬಂದಿ ಹಾಗೂ 5 ಮಂದಿ ಪ್ರಯಾಣಿಕರಿದ್ದ Antonov AN-32 ಮಿಲಿಟರಿ ಸಾರಿಗೆ ಏರ್ ಕ್ರಾಫ್ ಇಂದು (ಜೂನ್ 03) ಮಧ್ಯಾಹ್ನ 1 ಗಂಟೆ ಸಾರಿಗೆ ಅಸ್ಸಾಂನ ಜೋಹ್ರಾತ್‌ ವಾಯುನೆಲೆಯಿಂದ ಟೇಕಾಫ್‌ ಆಗಿತ್ತು. ಚೀನಾ ಗಡಿಯ ಬಳಿ ಹಾರಾಟ ನಡೆಸುವಾಗ ಭಾರತೀಯ ವಾಯುನೆಲೆ ಜೊತೆ ಸಂಪರ್ಕ ಕಡಿದುಕೊಂಡಿತು.

ISRO helping in finding the lost AN 32 aircraft

ನಾಪತ್ತೆಯಾಗಿರುವ ವಿಮಾನದ ಹುಡುಕಾಟಕ್ಕೆ ವಾಯುಪಡೆ ಇಸ್ರೊದಿಂದ 'ಕಾರ್ಟೊಸ್ಯಾಟ್‌' ಮತ್ತು 'ರಿಸ್ಯಾಟ್‌' ಉಪಗ್ರಹದ ನೆರವು ಪಡೆದುಕೊಂಡಿದೆ. ನೌಕಾಪಡೆಯ ಬತ್ತಳಿಕೆಯ್ಲಲಿರುವ ಪಿ8ಐ ಯುದ್ಧ ವಿಮಾನದ ಜತೆಗೆ ವಾಯುಪಡೆಯು ಒಂದು ಸುಖೋಯ್‌-30, ಸಿ-130 ಹಕ್ರ್ಯೂಲಸ್‌ ಏರ್‌ಕ್ರಾಫ್ಟ್‌ ಹಾಗೂ ಎರಡು ಮಿಗ್‌-17 ಹೆಲಿಕಾಪ್ಟರ್‌ಗಳನ್ನು ಶೋಧ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ.

ವಿಮಾನದ ಪತ್ತೆಗಾಗಿ ಸಮರೋಪಾದಿಯಲ್ಲಿ ಹುಡುಕಾಟ ನಡೆದಿದೆ ಆದರೆ ಈವರೆಗೆ ವಿಮಾನದ ಭಾಗ ಪತ್ತೆ ಆಗಿಲ್ಲ. ವಿಮಾನವು ಪತನವಾಗಿದೆ ಎಂದು ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ವಿಮಾನ ಪತ್ತೆಯಾದ ಬಳಿಕವಷ್ಟೆ ಸತ್ಯ ತಿಳಿಯಲಿದೆ.

English summary
Indian air force seeking ISRO help to find lost AN 32 aircraft. AN 32 aircraft with 13 on board is missing from three days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X